ಅಂಕೋಲಾ ಸರ್ವೆ ಇಲಾಖೆಗೆ ಭೂ ದಾಖಲೆಗಳ ಉಪನಿರ್ದೇಶಕರ ದಿಢೀರ್ ಭೇಟಿ : ಸಾರ್ವಜನಿಕರ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸರ್ವೆ ಸಿಬ್ಬಂದಿಗಳಿಗೆ ಖಡಕ್ ಸೂಚನೆ..


06 Nov 2024, 05:50 pm, 718 reads

ಅಂಕೋಲಾ ತಾಲೂಕಿನ ಸರ್ವೆ ಇಲಾಖೆಗೆ ಇಂದು ದಿನಾಂಕ 6-11-2024ರಂದು ಉತ್ತರ ಕನ್ನಡ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕ ಸಂದೀಪ್ ಉಪ್ಪಾರವರು ಭೇಟಿ ನೀಡಿ ಅಂಕೋಲಾ ಸರ್ವೆ ಇಲಾಖೆ ಸಿಬ್ಬಂದಿಗಳು ನಿರ್ವಹಿಸಿದ ದಾಖಲೆಗಳನ್ನು ಪರಿವಿಕ್ಷಣೆ ಮಾಡಿದರು. 

ತಾಲೂಕಿನ ಸರ್ವೆ ಇಲಾಖೆಗೆ ಭೂ ದಾಖಲೆಗಳ ಉಪ ನಿರ್ದೇಶಕರು ಬಂದಿದ್ದಾರೆ ಎಂಬ ವಿಷಯ ತಿಳಿದ ಸಾರ್ವಜನಿಕರು ಕಚೇರಿಗೆ ಧಾವಿಸಿದ್ದರು.ಸರ್ವೆಯಲ್ಲಿ ತಮಗಾಗುತ್ತಿರುವ ಸಮಸ್ಯೆ ಕುರಿತು ಉಪ ನಿರ್ದೇಶಕರ ಬಳಿ ಸಾರ್ವಜನಿಕರು ಅವಲತ್ತುಕೊಂಡರು. ಅಂಕೋಲಾ ತಾಲೂಕಿನ ಸರ್ವೆ ಇಲಾಖೆಯಲ್ಲಿ ಕಳೆದ 4 ತಿಂಗಳಿಂದ ಮಾನ್ಯ ನ್ಯಾಯಾಲಯದಲ್ಲಿ ಕೋರ್ಟ್ ಡಿಕ್ರಿ ಆದಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಈ ನಕ್ಷೆಗೆ ಸಲ್ಲಿಸಿದ ಅರ್ಜಿಗಳು ವಿಲೇ ಆಗದೆ ಬಾಕಿ ಉಳಿದಿದ್ದು, ಪದೇಪದೇ ತಾಂತ್ರಿಕ ದೋಷವು ಉಂಟಾಗುತ್ತಿದ್ದು. ಹಾಗೂ ಸರ್ವೆ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಭೂ ದಾಖಲೆಗಳ ಉಪನಿರ್ದೇಶಕರ ಗಮನಕ್ಕೆ ತಂದರು.

ಸಾರ್ವಜನಿಕರ ಸಮ್ಮುಖದಲ್ಲಿ ಭೂ ದಾಖಲೆಗಳ ಉಪ ನಿರ್ದೇಶಕರು ಅಂಕೋಲಾ ಸರ್ವೆ ಇಲಾಖೆಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಕರೆ ಮಾಡಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸೂಚನೆ ನೀಡಿದರು. ಹಾಗೂ ಸರ್ವೇ ಇಲಾಖೆ ಇತರ ಸಿಬ್ಬಂದಿಗಳಿಗೂ ಸಾರ್ವಜನಿಕರು ಕಚೇರಿಗೆ ಭೇಟಿ ಕೊಟ್ಟಾಗ ಯಾವ ರೀತಿ ವರ್ತಿಸಬೇಕೆಂದು ಶಿಸ್ತಿನ ಪಾಠವನ್ನು ಮನವರಿಕೆ ಮಾಡಿದರು. 


ಉತ್ತರ ಕನ್ನಡ ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರ ಇಂದಿನ ಅಂಕೋಲಾ ಸರ್ವೆ ಇಲಾಖೆಯ ಬೇಟಿಯು ತಾಲೂಕಿನ ಸರ್ವೆ ಇಲಾಖೆಯ ಸಿಬ್ಬಂದಿಗಳಿಗೆ ನಡುಕ ಹುಟ್ಟಿಸಿದಂತು ಸುಳ್ಳಲ್ಲ. ವಾರಕ್ಕೊಮ್ಮೆಯಾದರೂ ಸರ್ವೆ ಇಲಾಖೆಯ ಭೂ ದಾಖಲೆಗಳ ಉಪ ನಿರ್ದೇಶಕರು ತಾಲೂಕಿನ ಸರ್ವೆ ಇಲಾಖೆಗೆ ಭೇಟಿ ನೀಡಿದಲ್ಲಿ ಸಾರ್ವಜನಿಕರ ವಿವಿಧ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ತಾಲೂಕಿನಲ್ಲಿ ತ್ವರಿತವಾಗಿ ವಿಲೇವಾರಿಯಾಗಿ ಆಶಾದಾಯಕ ಪ್ರಗತಿಯನ್ನು ಕಾಣುತ್ತಿದ್ದವು ಎಂದು ಹೇಳಲಾಗುತ್ತಿದೆ.

ಭೂ ದಾಖಲೆಗಳ ಉಪನಿರ್ದೇಶಕರ ಇಂದಿನ ದಿಡೀರ್ ಭೇಟಿ ಜೊತೆಗೆ ಇಲ್ಲಿನ ಸಿಬ್ಬಂದಿಗಳಿಗೆ ಕಡತ ಶೀಘ್ರವಾಗಿ ವಿಲೇವಾರಿಯಾಗಲು ತೆಗೆದುಕೊಳ್ಳಬೇಕಾಗಿರುವ ಕ್ರಮದ ಬಗ್ಗೆ ಖಡಕ್ಕಾಗಿಯೇ ಹೇಳಿದ್ದು . ಜಿಲ್ಲಾ ಭೂ ದಾಖಲೆ ಉಪ ನಿರ್ದೇಶಕರ ಕರ್ತವ್ಯದ ವೈಖರಿಯ ಬಗ್ಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸರ್ವೆ ಇಲಾಖೆಗೆ ಜಿಲ್ಲಾ ಭೂ ದಾಖಲೆ ಉಪನಿರ್ದೇಶಕರು ಭೇಟಿ ಕೊಟ್ಟಾಗ ತಾಲೂಕೂ ಸರ್ವೇಯರ್ ರೋಷನ್ ಕೇಣಿ,ರಾಘವ ನಾಯಕ್, ಇನ್ನಿತರ ಸಿಬ್ಬಂದಿಗಳಾದ ಪ್ರತಿಕ್ಷ,ಯಶೋಧ,ಲೈಸನ್ಸ್ ಸರ್ವೆಯರ್ ಈಶ್ವರಯ್ಯ ಹಾಗೂ ಮುಂತಾದ ಅನೇಕ ಸಿಬ್ಬಂದಿಗಳು ಹಾಜರಿದ್ದರು. 

ಇದೇ ಸಂದರ್ಭದಲ್ಲಿ ಅಂಕೋಲಾ ಸರ್ವೆ ಇಲಾಖೆಗೆ ರೆಗ್ಯುಲರ್ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಬೇಕೆಂದು ಅಂಕೋಲ ತಾಲೂಕಿನ ಪ್ರಜ್ಞಾವಂತ ಸಾರ್ವಜನಿಕರು ಭೂ ದಾಖಲೆಗಳ ಉಪನಿರ್ದೇಶಕರಿಗೆ ಆಗ್ರಹಿಸಿದರು.



ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: