ಅಂಕೋಲದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಗಳ ಅಟ್ಟಹಾಸ ಮುಂದುವರೆದಿದ್ದು , ಅಂಕೋಲಾದಲ್ಲಿ ಪ್ರಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿಯೋರ್ವ್ ನಡೆಸಿದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣವು ತಾಲೂಕಿನ ಜನರನ್ನು ಬೆಚ್ಚಿಬಿಳಿಸಿದೆ.
ಮುಂಬೈ ಮೂಲದ ಕಂಪನಿಗೆ 35 ಎಕರೆ ಭೂಮಿಯನ್ನು ತಾಲೂಕಿನ ಕೇಣಿ ಪ್ರದೇಶದಲ್ಲಿ ಕೊಡಿಸುವುದಾಗಿ ನಂಬಿಸಿ 8 ಕೋಟಿ ರೂಪಾಯಿ ವಂಚಿಸಿದ ಅತಿ ದೊಡ್ಡ ಪ್ರಕರಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಎಲ್ಲ ಕಡೆ ಈ ಸುದ್ದಿಯು ಹವಾ ಎಬ್ಬಿಸಿದೆ.
ಅಂಕೋಲಾ ಪೊಲೀಸ್ ಠಾಣೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ದಾಖಲಾದ ಪ್ರಕರಣವಾದರೂ ಏನು?
ಜೆ ಎಸ್ ಡಬ್ಲ್ಯೂ ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮುಖ್ಯ ಕಚೇರಿಯು ಮುಂಬೈನಲ್ಲಿದ್ದು , ಈ ಕಂಪನಿಯು ಕಳೆದ 2022ನೇ ಸಾಲಿನಲ್ಲಿ ಕೇಣಿ ಯಲ್ಲಿ ಸಮುದ್ರ ಬಂದರು ಅಭಿವೃದ್ಧಿ ಮಾಡಲು ಪೋರ್ಟ್ ಅನ್ನು ಹೈವೇ ಮತ್ತು ರೈಲ್ವೆ ಲೈನ್ ಗೆ ಜೋಡಿಸಲು ಜಮೀನಿನ ಅವಶ್ಯಕತೆ ಯಿದ್ದರಿಂದ ತಡಕಾಡಿದಾಗ ಅವರಿಗೆ ಅಂಕೋಲಾದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸುವ ಅಜಿತ್ ಗಣಪತಿ ನಾಯಕ ಹಾಗೂ ತಿರುಪತಿ ಸ್ವಾಮಿ ಎಂಬುವರು ಪರಿಚಿತರಾಗಿ ಕಂಪನಿಗೆ ಜಮೀನು ಖರೀದಿಸಿ ಕೊಡುವ ಬಗ್ಗೆ 2022 ರ ಆಗಸ್ಟ್ ತಿಂಗಳಿನಲ್ಲಿ ಅಂಕೋಲಾದ ಕಾಮತ್ ಹೋಟೆಲಿನಲ್ಲಿ ಮಾತುಕತೆ ನಡೆಸಿ ನಂತರ ದಿನಾಂಕ 13-09-2024 ಮತ್ತು 14-09-2024 ರಂದು ಬೆಂಗಳೂರು ವಸಂತನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಅಜಿತ್ ನಾಯಕ್, ತಿರುಪತಿ ಸ್ವಾಮಿ ಇವರು ಗಳು ಕಂಪನಿಯ ಎಂಎಸ್ ಪಾತ್ರುಡು ಮತ್ತು ಇತರ ಅಧಿಕಾರಿಗಳೊಂದಿಗೆ ಸೇರಿ ಮಾತುಕತೆ ನಡೆಸಿ. ಗುರುಪ್ರಸಾದ್ ಸುಧಾಕರ ರೇವಣಕರ್ ಇವರ ಮುಖಾಂತರ ಅಂಕೋಲಾದಲ್ಲಿ ಜಮೀನು ಒದಗಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದರು .
ದಿನಾಂಕ 29-09-2022 ರಂದು ಅಜಿತ್ ನಾಯಕ ಮತ್ತು ಗುರುಪ್ರಸಾದ್ ರೇವಣಕರ್ ರವರು ಮುಂಬೈನ ಹೋಟೆಲ್ ರೇಗನ್ಸಿಯಲ್ಲಿ ಕಂಪನಿಗೆ 35 ಎಕರೆ ಜಮೀನು ಖರೀದಿಸಿ ಕೊಡುವುದಾಗಿ ಒಪ್ಪಿ ಗುರುಪ್ರಸಾದ ರೇವಣಕರ್ ಅವರೊಂದಿಗೆ " ಮೆಮೊರೆಂಡ್ ಆಫ್ ಅಂಡರ್ಸ್ಟ್ಯಾಂಡಿಂಗ್ ( ಎಂ ಓಯು )ಮಾಡಿಕೊಂಡಿದ್ದು.. ನಂತರ ಆರೋಪಿ ಗುರುಪ್ರಸಾದ್ ರೇವಣಕರ್ ಅವರ ಕೆನರಾ ಬ್ಯಾಂಕ್ ಅಕೌಂಟಿಗೆ ಹಂತ ಹಂತವಾಗಿ ಒಟ್ಟು 14ಕೋಟಿ 71 ಲಕ್ಷಕ್ಕೂ ಅಧಿಕ ಹಣವನ್ನು ಜೆ ಎಸ್ ಡಬ್ಲ್ಯೂ ಕಂಪನಿ ಕಡೆಯಿಂದ ಜಮಾ ಮಾಡಿಸಿಕೊಂಡಿದ್ದರು.
( FIR copy )
ಮುಂದುವರೆದು ಪಿರ್ಯಾದಿದಾರ ಜೆ ಎಸ್ ಡಬ್ಲ್ಯೂ ಕಂಪನಿಯ ಹೆಸರಿಗೆ ಸುಮಾರು ಹತ್ತು ಎಕರೆ ಜಮೀನನ್ನು ಆರೋಪಿತರು ಅಂಕೋಲಾದ ವಕೀಲ ರಾದ ವಿನೋದ ವಿಠಲ ಶಾನ್ಭಾಗ್ ರವರ ಮುಖಾಂತರ ಮಾಡಿಸಿಕೊಟ್ಟಿದ್ದಾರೆ...
10 ಎಕರೆ ಜಮೀನಿನ ಹಣವನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಕಂಪನಿಯಿಂದ ಸಂದಾಯ ಮಾಡಿದ 8 ಕೋಟಿಗೂ ಅಧಿಕ ಹಣವನ್ನು ಕಂಪನಿಗೆ ವಾಪಸ್ ಹಾಕಲು ಆರೋಪಿ ಸ್ಥಾನದಲ್ಲಿರುವ ಅಜಿತ ನಾಯಕ ಮತ್ತು ಗುರುಪ್ರಸಾದ್ ರವರಿಗೆ ಕಂಪನಿಯವರು ತಿಳಿಸಿದಾಗ ಹಂತ ಹಂತವಾಗಿ ಹಣ ಹಾಕುತ್ತೇವೆ ಅಂತ ಹೇಳಿ ಭರವಸೆಗಾಗಿ ಗುರುಪ್ರಸಾದ್ ರೇವಣಕರ್ 8 ಕೋಟಿಯ ಚೆಕ್ಕನ್ನು ಕಂಪನಿಗೆ ನೀಡಿದ್ದು. ಸದರಿ ಚೆಕ್ಕನ್ನು ಕಂಪನಿಯವರು ಬ್ಯಾಂಕಿನಲ್ಲಿ ಹಾಕಿದಾಗ ಗುರುಪ್ರಸಾದ್ ರೇವಣಕರ್ ಅಕೌಂಟಿನಲ್ಲಿ ಹಣ ಇಲ್ಲದೆ ಚೆಕ್ ಬೌನ್ಸ್ ಆಗಿದೆ . ಅಜಿತ್ ನಾಯಕನು ಗುರುಪ್ರಸಾದ್ ರೇವಣಕರ ಖಾತೆಯಲ್ಲಿದ್ದ ಕೋಟಿಗಟ್ಟಲೆ ಹಣವನ್ನು ಚೆಕ್ ಮುಖಾಂತರ ಬೇರೆ ಬೇರೆಯವರ ಮುಖಾಂತರ ವಿಥ್ ಡ್ರಾ ಮಾಡಿಕೊಂಡು ದುರುಪಯೋಗ ಪಡಿಸಿಕೊಂಡಿರುವುದಾಗಿ ತಿಳಿಸಿದ್ದು ಕಂಪನಿಯವರು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅಜಿತ್ ನಾಯಕ. ಗುರುಪ್ರಸಾದ್ ರೇವಣಕರ್. ತಿರುಪತಿ ಸ್ವಾಮಿ ಈ ಮೂರು ಆರೋಪಿಗಳು ಒಪ್ಪಂದದಂತೆ ಜಮೀನು ಪೂರೈಸದೆ. ಹಾಗೂ ಕಂಪನಿಯ 8 ಕೋಟಿ ಹಣವನ್ನು ಕಂಪನಿಯ ಖಾತೆಗೆ ಪುನಹ ಜಮಾ ಮಾಡದೇ ಮೋಸ, ವಂಚನೆ,ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಜೆ ಎಸ್ ಡಬ್ಲ್ಯೂ ಪೋರ್ಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಪ್ರಾಜೆಕ್ಟ್ ಇಂಚಾರ್ಜ್ ರವರಾದ ಶ್ರೀ ಭರ್ಮಪ್ಪ ಉಡಚಪ್ಪ ಕುಂಟಗೇರಿ ದಿನಾಂಕ 30/10/2024ರಂದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿತರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತ(BNS)2023. ಅಡಿಯಲ್ಲಿ ಸೆಕ್ಷನ್111(4).3(5).316(2).316(5).318(2).318(4) ರಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಂಕೋಲಾದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ , ದೊಡ್ಡ ದೊಡ್ಡ ಬ್ಯಾನರ್ ನಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ಮಿಂಚುತ್ತಿದ್ದ , ಐಷಾರಾಮಿ ಕಾರಿನಲ್ಲಿ ವೈಭೋಗದ ಜೀವನ ನಡೆಸುತ್ತಿದ್ದ ಅಜಿತ್ ನಾಯಕ ಹಾಗೂ ಇನ್ನುಳಿದ ಆರೋಪಿತರು ತಲೆಮರೆಸಿಕೊಂಡಿದ್ದಾರೆ.
ಅಂಕೋಲಾ ಪಿಎಸ್ಐ ಸುಹಾಸ್ ಆರ್ ಪ್ರಕರಣ ದಾಖಲಿಸಿಕೊಂಡಿದ್ದು, ತಾಲೂಕಿನ ಕಡಕ್ ಅಧಿಕಾರಿ ಚಂದ್ರಶೇಖರ್ ಮಠಪತಿ ಅವರು ಆರೋಪಿಗಳ ಹೆಡೆಮುರಿ ಕಟ್ಟಲು ತನಿಖೆ ಮುಂದುವರಿಸಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ