ಅಂಕೋಲಾ : ತಾಲೂಕಿನ ಟೋಲ್ ಗೇಟ್ ಸಮೀಪ ಕೆಟ್ಟು ನಿಂತ 14 ಚಕ್ರದ ಬೃಹತ್ ವಾಹನಕ್ಕೆ ಲಾರಿ ಡಿಕ್ಕಿ : ಅಪಘಾತ ಪಡಿಸಿದ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 14 ಗೋವುಗಳ ರಕ್ಷಣೆ.


02 Nov 2024, 01:32 pm, 736 reads

ಅಂಕೋಲಾ ತಾಲೂಕಿನಿಂದ ನಿನ್ನೆ ರಾತ್ರಿ ದಿನಾಂಕ1-11-2024ರಂದು ಮಂಗಳೂರು ಕಡೆಗೆ ಹೊರಟಿದ್ದ ಈಚರ ಕಂಪನಿಯ ಲಾರಿಯ ವಾಹನ ನಂಬರ್ KA43. 5817 ಇದು ಹಟ್ಟಿಕೇರಿಯ ಟೋಲ್ ಗೇಟ್ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅನತಿ ದೂರದಲ್ಲಿ ಈ ಹಿಂದೆ ಕೆಟ್ಟು ನಿಂತ 14 ಚಕ್ರದ ಬೃಹತ ವಾಹನಕ್ಕೆ ಅಪಘಾತ ಪಡಿಸಿ ಕೂಡಲೇ ವಾಹನ ಚಾಲನೆ ಮಾಡುತ್ತಿದ್ದ ಚಾಲಕ & ಕ್ಲಿನರ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. 

ಅಪಘಾತ ಪಡಿಸಿದ ವಾಹನದಲ್ಲಿದ್ದ್ 14 ಗೋವುಗಳ ರಕ್ಷಣೆ . 

ವಾಹನಗಳ ಅಪಘಾತವಾಗಿದೆ ಎಂದು ವಿಷಯ ತಿಳಿದು ಘಟನಾ ಸ್ಥಳಕ್ಕೆ ಬಂದ ಅಂಕೋಲಾ ಪೊಲೀಸರು ಅಪಘಾತ ಪಡಿಸಿದ ಲಾರಿ ಯನ್ನು ಪರಿಶೀಲನೆ ನಡೆಸಿದಾಗ 14 ಗೋವುಗಳು ವಾಹನದಲ್ಲಿರುವುದನ್ನು ಗಮನಕ್ಕೆ ಬಂದಿದೆ.

ಆಕಸ್ಮಿಕ ಅಪಘಾತದಿಂದ ಬಲಿಯಾಗಬೇಕಿದ್ದ ಜಾನುವಾರುಗಳು ಪವಾಡ ಸದೃಶ ಎಂಬಂತೆ ಬದುಕುಳಿದಿದೆ. 


ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದು.ಅಕ್ರಮವಾಗಿ ಜಾನುವಾರುಗಳನ್ನು ರಾತ್ರಿ ಸಮಯದಲ್ಲಿ ಹೆಚ್ಚಾಗಿ ಸಾಗಾಟ ಮಾಡಿ, ನಂತರ ವಧೆ ಮಾಡಿ ಮಾಂಸ ಮಾಡುವ ಉದ್ದೇಶವನ್ನು ಕಿರಾತಕರು ಹೊಂದಿದ್ದು.ಸಂಚು ರೂಪಿಸಿದ್ದರೇ ಎಂದು ಪೊಲೀಸ್ ತನಿಕೆಯಿಂದ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ. 

ಲಾರಿ ಯಲ್ಲಿ 8 ಕಟ್ಟು ಮಸ್ತಾದ ಎಮ್ಮೆ,2ಎತ್ತು, 4ಕೋಣ ಇದ್ದು ಅಂಕೋಲಾ ಪೊಲೀಸ್ ಠಾಣೆಯ ವಸತಿ ಗೃಹದ ಪಕ್ಕ ಕಟ್ಟಿಹಾಕಿ ರಕ್ಷಣೆ ಮಾಡಲಾಗಿದೆ. ಸದರಿ ಸ್ಥಳಕ್ಕೆ ಸಾಮಾಜಿಕ ಕಾರ್ಯಕರ್ತರು ಹಿಂದೂ ಸಂಘಟನೆಯವರು ಬಂದು ಜಾನುವಾರುಗಳಿಗೆ ನೀರನ್ನು ಹಾಗೂ ಮೇವನ್ನು ನೀಡಿದ್ದಾರೆ. 


ಲಾರಿಯ ಮುಂದಿನ ಭಾಗ ನುಜ್ಜಾಗಿದ್ದು. ಸದರಿ ವಾಹನವನ್ನು ಪೊಲೀಸ್ ವಸತಿ ಗೃಹದ ಪಕ್ಕ ತಂದು ಇರಿಸಲಾಗಿದೆ. ತಲೆಮರೆಸಿಕೊಂಡ ಆರೋಪಿಗಳು ಹಾಗೂ ಲಾರಿಯ ವಾಹನದ ಮಾಲೀಕರ ಮೇಲೆ ಪೊಲೀಸರು ತನಿಖೆ ಮುಂದುವರಿದಿದೆ .. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಅಕ್ರಮ ಜಾನುವಾರು ಸಾಗಾಟ ,ಗೋ ಹತ್ಯೆ ನಿಷೇಧ ಮತ್ತು ಗೋ ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಅಡಿಯಲ್ಲಿ ಅಕ್ರಮ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿತರ ಮೇಲೆ ಪೋಲಿಸ್ ಇಲಾಖೆ ಸೂಕ್ತ ಪ್ರಕರಣ ದಾಖಲಿಸಬೇಕೆಂದು ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: