ಅಂಕೋಲಾ ತಾಲೂಕಿನಲ್ಲಿ ಅದ್ದೂರಿಯಾಗಿ ನಡೆದ 69ನೇ ಕನ್ನಡ ರಾಜ್ಯೋತ್ಸವ ಆಚರಣೆ : ಕನ್ನಡ ರಾಜ್ಯೋತ್ಸವದ ವೈಭವವನ್ನು ಹೆಚ್ಚಿಸಿದ ವಿದ್ಯಾರ್ಥಿಗಳ ಆಕರ್ಷಕ ವೇಷ ಭೂಷಣ...


01 Nov 2024, 08:59 pm, 335 reads

ಅಂಕೋಲಾ : ತಾಲೂಕಿನಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ದಿನಾಂಕ 1-11-2024 ರಂದು ಅದ್ದೂರಿಯಾಗಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ನಡೆದ ಆಕರ್ಷಕ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇತರರು ಸೇರಿದಂತೆ 3 ಸಾವಿರಕ್ಕೂ ಹೆಚ್ಚು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. 

ವಿವಿಧ ವೇಷ ಭೂಷಣಗಳು ರೂಪಕಗಳೊಂದಿಗೆ ಪಾಲ್ಗೊಂಡ ವಿದ್ಯಾರ್ಥಿಗಳು ತಾಲೂಕಿನಲ್ಲಿ 69ನೇ ಕನ್ನಡ ರಾಜ್ಯೋತ್ಸವದ ವೈಭವವನ್ನು ಹೆಚ್ಚಿಸಿದ್ದು, ವಿದ್ಯಾರ್ಥಿಗಳ ಕನ್ನಡದ ರಾಜ್ಯೋತ್ಸವಕ್ಕಾಗಿ ತೊಟ್ಟಿರುವ ವೇಷ ಭೂಷಣಗಳು ನೆರೆದಿದ್ದ ಜನರನ್ನು ಮಂತ್ರ ಮುಗ್ದರನ್ನಾಗಿಸಿ ಮಾಡಿತು . ಈ ಮೆರವಣಿಗೆ 2024ನೇ ಸಾಲಿನಲ್ಲಿ ಅತ್ಯಂತ ಸುಂದರವಾಗಿ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಸಂಚರಿಸಿ ಅತ್ಯಂತ ಯಶಸ್ವಿಯಾಗಿ ನಡೆಯಿತು. 

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಅಂಕೋಲಾದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ತಾಲೂಕು ದಂಡಾಧಿಕಾರಿಗಳಾದ ಬಿ ಅನಂತ ಶಂಕರ್ ಹಾಗೂ ಮತ್ತಿತರ ಪ್ರಮುಖ ಇಲಾಖೆಯ ಗಣ್ಯರು ಹಾಜರಿದ್ದು ಮಾನ್ಯ ದಂಡಾದಿಕಾರಿಗಳು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪವನ್ನು ಸಮರ್ಪಿಸಿ. ಪೂಜೆಯನ್ನು ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. 


ಮೆರವಣಿಗೆಯಲ್ಲಿ ಹುಲಿವೇಷ. ಬೇಡರ ವೇಷ, ಡೋಲು ವಾದ್ಯ, ಶೃಂಗೇರಿ ಶಾರದಾಂಬ ಪೀಠ, ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ, ಐಹೊಳೆ, ಭುವನೇಶ್ವರಿ ದೇವಿಯ ವೇಷಭೂಷಣ, ಅಕ್ಕಮಹಾದೇವಿ, ಯಕ್ಷಗಾನ ವೇಷ ಭೂಷಣ. ಇನ್ನಿತರ ಹತ್ತು ಹಲವು ವಿದ್ಯಾರ್ಥಿಗಳ ವೇಷ ಭೂಷಣ.ರೂಪಕಗಳು ಎಲ್ಲರ ಗಮನ ಸೆಳೆಯಿತು. 

ಬಹುಮಾನ ವಿತರಣೆ: ಇಂದು ನಡೆದ ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಆಕರ್ಷಕವಾಗಿ ವೇಷ ಭೂಷಣ ಧರಿಸಿದ ಶಿಸ್ತುಬದ್ಧವಾಗಿ ಮೆರವಣಿಗೆ ಸಾಗಿದ ಪ್ರೌಢಶಾಲೆ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು.

ಪ್ರೌಢಶಾಲಾ ವಿಭಾಗದಲ್ಲಿ : ಪಿಎಂ ಹೈ ಸ್ಕೂಲ್ ಪ್ರೌಢಶಾಲೆ ಪ್ರಥಮ ಸ್ಥಾನ ಗಳಿಸಿದರೆ, ಜೈ ಹಿಂದ್ ಹೈಸ್ಕೂಲ್ ಪ್ರೌಢಶಾಲೆ ದ್ವಿತೀಯ ಸ್ಥಾನವನ್ನು ಪಡೆಯಿತು. ಹಿಮಾಲಯ ಪ್ರೌಢಶಾಲೆ ತೃತೀಯ ಸ್ಥಾನವನ್ನು ಪಡೆಯಿತು ಹಾಗೂ ಪ್ರಾಥಮಿಕ ವಿಭಾಗದಲ್ಲಿಯೂ ಕೂಡ ಪ್ರಥಮ, ದ್ವಿತೀಯ,ತೃತೀಯ ಸ್ಥಾನವನ್ನು ಪಡೆದ ಶಾಲೆಗಳಿಗೆ ಬಹುಮಾನವನ್ನು ನೀಡಲಾಯಿತು. 

ಬಿಸಿಲಿನ ಬೇಗೆಯಿಂದ ಬಳಲಿದ ಮಕ್ಕಳಿಗೆ ಸಿಹಿ ತಿಂಡಿಯನ್ನು ನೀಡಲಾಗಿದೆ. ಪುರಸಭೆಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು. ಪೊಲೀಸ್ ಇಲಾಖೆ ಸಿಬ್ಬಂದಿಗಳು ಸಂಚಾರ ವನ್ನು ಅತ್ಯಂತ ಸುಗಮವಾಗಿ ನಡೆಸಿದರು.ಯಾವುದೇ ಅಹಿತಕರ ಘಟನೆ ಯಾಗದಂತೆ ತಾಲೂಕಿನಲ್ಲಿ ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ ಮಾಡಲಾಗಿತ್ತು.

 ಇಂದಿನ ಮೆರವಣಿಗೆಯಲ್ಲಿ ಪುರಸಭೆಯ ಮುಖ್ಯಾಧಿಕಾರಿಗಳು, ಪುರಸಭೆ ಅಧ್ಯಕ್ಷರು, ಸದಸ್ಯರು,ವಿವಿಧ ಇಲಾಖೆ ಗಣ್ಯರು, ತಾಲೂಕು ಪಂಚಾಯತ, ಗ್ರಾಮ ಪಂಚಾಯಿತಿ ಅಧಿಕಾರಿವರ್ಗ, ಸಾಹಿತಿಗಳು, ಸಮಾಜ ಸೇವಕರು, ಇನ್ನು ಸಾಕಷ್ಟು ಜನರು ಇವತ್ತಿನ ಕಾರ್ಯಕ್ರಮದಲ್ಲಿ ಹಾಜರಿದ್ದು. ಕನ್ನಡ ರಾಜ್ಯೋತ್ಸವವು ಅಂಕೋಲ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯಿತು...


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: