ಅಂಕೋಲಾ (ಅಕ್ಟೋಬರ್ 29) : ಇಂದು ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಮೂರನೇ ವರ್ಷದ ಪುಣ್ಯಸ್ಮರಣೆ. ಕನ್ನಡ ಚಿತ್ರರಂಗದ ಪವರ್‌ಸ್ಟಾರ್, ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು ನಿಧನರಾಗಿ ಮೂರು ವರ್ಷಗಳು ಕಳೆದಿದೆ. ಕನ್ನಡಿಗರನ್ನು ಅಗಲಿರುವ ಕನ್ನಡದ ಶ್ರೇಷ್ಠ ನಟ. ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ ಅವರ ಪುಣ್ಯ ಸ್ಮರಣೆ ನಿಮಿತ್ತ ಅಂಕೋಲಾದ ಸರ್ಕಲ್ ನಲ್ಲಿ ಯುವ ನಾಮಧಾರಿ ವೇದಿಕೆ ಹಾಗೂ ಕ್ಲಬ್ ವಿ ಫಿಟ್ನೆಸ್ ನ ಅಪ್ಪು ಅಭಿಮಾನಿಗಳು ಅಂಕೋಲಾದ ಮುಖ್ಯ ವೃತ್ತದಲ್ಲಿ ಅಪ್ಪುವಿನ ಬೃಹತ ಕಟೌಟ್ ಹಾಕಿ ಪುಷ್ಪ ನಮನ ಸಲ್ಲಿಸಿದರು.ಜೊತೆಗೆ ಅಂಕೋಲಾದ ಅಜ್ಜಿಕಟ್ಟಾದಲ್ಲಿರುವ ಅನಾಥ ಆಶ್ರಮಕ್ಕೆ ತೆರಳಿ ಅನ್ನದಾನವನ್ನು ಮಾಡಿ ನೆಚ್ಚಿನ ನಟನಿಗೆ ನಮನ ಸಲ್ಲಿಸಿದ್ದಾರೆ.
ಈ ಸಂಧರ್ಭದಲ್ಲಿ ಹಿರಿಯ ವಕೀಲರಾದ ಸುಭಾಷ್ ನಾರ್ವೇಕರ್ , ಆಕಾಶ್ ನಾರ್ವೇಕಾರ್, ವಕೀಲರಾದ ಉಮೇಶ ನಾಯ್ಕ್ ,ಪುರಸಭೆಯ ಅಧ್ಯಕ್ಷರಾದ ಸೂರಜ್ ನಾಯ್ಕ್ , ಜಯಾ ಬಾಲಕೃಷ್ಣ ನಾಯ್ಕ್ , ಕ್ಲಬ್ ವಿ ಫಿಟ್ನೆಸ್ ಮಾಲಕರಾದ ವಿಘ್ನೇಶ್ ನಾಯ್ಕ್, ಆದಿ ನಾಯ್ಕ್, ಕಿರಣ್, ಸಂಜೀವ ಲಕ್ಷ್ಮೀಕಾಂತ್, ದರ್ಶನ, ಮಣಿ ಭಾಸ್ಕರ, ಮಹೇಶ್,ಯಶ್ ತರುಣ, ಆಕಾಶ್, ಪ್ರದೀಪ್, ಅಂಕಿತ್, ರೋಷನ್, ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಕಿರಣ ಚಂದ್ರಹಾಸ ಗಾಂವಕರ