ಅಂಕೋಲಾ : ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲ್ ಎನ್.ಸಿ.ಸಿ ಘಟಕದ ವತಿಯಿಂದ ಎನ್.ಸಿ.ಸಿ ಕೆಡೆಟಗಳಿಗೆ ಶಿಸ್ತು ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಹವಾಲ್ದಾರ ಮೋಹನದಾಸ ಶೇನ್ವಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅವರು ಮಾತನಾಡಿ ಶಾಲಾ ಜೀವನದಲ್ಲಿ ವಿದ್ಯಾರ್ಥಿಗಳು ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮುಂದೆ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬೆಳೆಯಬೇಕೆಂದರು.
ಎನ್.ಸಿ.ಸಿ.ಟ್ರುಪ್ ಕಮಾಂಡರ್ ಜಿ.ಆರ್. ತಾಂಡೇಲ ಅವರು ಮಾತನಾಡಿ ಶಿಸ್ತು ಇಲ್ಲದ ಜೀವನ ನಾವಿಕನಿಲ್ಲದ ನೌಕೆಯಂತೆ, ಅದಕ್ಕಾಗಿ ಎನ್.ಸಿ. ಸಿ. ಕೆಡೆಟಗಳು,ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಮುಂದೆ ದೇಶಸೇವೆ ಮಾಡಲು ಮುಂದಾಗಬೇಕೆಂದರು. ಈ ಸಂದರ್ಭದಲ್ಲಿ ಕಾರವಾರದ ಬಟಾಲಿಯನ್ ಹವಾಲ್ದಾರ್ ಅಶೋಕ ಸಿಂಗ್ ಉಪಸ್ಥಿತರಿದ್ದರು. ಶಿಕ್ಷಕ ಮುಗ್ದುಮ್ ಅಲಗೋಡಿಯವರು ಸರ್ವರನ್ನು ವಂದಿಸಿದರು. ಸಾರ್ಜೆಂಟ್ ವಿಶಾಲ ನಾಯ್ಕ ಮತ್ತು ಎನ್. ಸಿ.ಸಿ ಕೆಡೆಟಗಳು ಭಾಗವಹಿಸಿದ್ದರು
ವಿಕಾಸ ವಾಹಿನಿ ವರದಿ