ಮುರುಡೇಶ್ವರ- ಮುರ್ಡೇಶ್ವರದ ದೇವಸ್ಥಾನದ ನಿರ್ಗಮನ ದ್ವಾರದ ರಸ್ತೆಯ ಮೇಲೆ ಇರುವ ಗೂಡಂಗಡಿ ಬಿಚ್ ಗೆ ಸ್ಥಾನಾಂತರ ಮಾಡಲು ಸ್ಥಳಿಯ ಗ್ರಾಮ ಪಂಚಾಯತ್ ಮಾವಳ್ಳಿ 1 ಕ್ಕೆ ಮನವಿ ಕೊಟ್ಟಿದ್ದು ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ವಾಟ್ಸಪ್ ನಂಬರ್ ಗೆ ಕೂಡ ದೂರ ಕೊಟ್ಟಿದ್ದು ಆ ದೂರಿನನ್ವಯ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಭಟ್ಕಳ ಇವರಿಗೆ ಸೂಕ್ರ ಕ್ರಮ ಕೈಗೊಳ್ಳಲು ಆದೇಶ ಬಂದಿದ್ದು.ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯತ ಭಟ್ಕಳ ಇವರು ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತ್ ಮಾವಳ್ಳಿ 1 ಇವರಿಗೆ ಅಗತ್ಯ ಕ್ರಮ ಕೈಗೊಳ್ಳಲು ನೋಟೀಸ್ ಜಾರಿ ಮಾಡಿದ್ದು ಗ್ರಾಮ ಪಂಚಾಯತ್ ಗೂಡಂಗಡಿ ಕಾರರ ಅಧ್ಯಕ್ಷರಿಗೆ ನೋಟೀಸ್ ಜಾರಿ ಮಾಡಿ ಕೈ ತೆಳೆದುಕೊಂಡಿದೆ.
ಇಲ್ಲಿಯವರೆಗೆ ದೂರಿಗೆ ಸಂಬಂದಿಸಿ ಕಾರ್ಯ ಮಾಡದೆ ಕಣ್ಣಿದ್ದು ಕುರುಡರಂತೆ ಇದ್ದು ಇದರಿಂದ ಮುಂದೆ ಟ್ರಾಫಿಕ್ ಸಮಸ್ಯೆ ಆಗಿ ಸಾರ್ವಜನಿಕರಿಗೆ ತೊಂದರೆ ಆಗಬಹುದು. ಗೂಡಂಗಡಿ ಕಾರರಿಗೆ ಅಂಗಡಿ ಮಳಿಗೆ ಇಟ್ಟುಕೊಳ್ಳಲು ಮಾನ್ಯ ಜಿಲ್ಲಾ ಪಂಚಾಯತ್ CEO ಮತ್ತು ಮಾನ್ಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರವಾಸಿಗರಿಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಆಗದೆ ಇರುವ ರೀತಿಯಲ್ಲಿ ರಸ್ತೆಯಿಂದ 50 ಮೀಟರ್ ಹಿಂದಿನಿಂದ ಬಿಚ್ ನಲ್ಲಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ನೀಡುವಂತೆ ಪಂಚಾಯತ್ ಠರಾವು ಮಾಡುವಂತೆ ಸಲಹೆ ನೀಡಿದ್ದರು.ಗ್ರಾಮ ಪಂಚಾಯತ್ ಠರಾವು ಮಾಡಿ ಅಂಗಡಿ ಇಟ್ಟುಕೊಳ್ಳಲು ಅವಕಾಶ ಕೊಟ್ಟಿದ್ದು ಇತ್ತೀಚಿನ ವರ್ಷಗಳಲ್ಲಿ ಒಂದೊಂದೆ ಗೂಡಂಗಡಿ ಬೀಚ್ ಬಿಟ್ಟು ರಸ್ತೆ ಮೇಲೆ ಬಂದಿದ್ದು ಇದರಿಂದ ರಿಕ್ಷಾ ರಸ್ತೆಯಲ್ಲಿ ನಿಲ್ಲಬೇಕಾಗಿದೆ.
ಇದರಿಂದ ಪ್ರವಾಸಿಗರ ಸಮೇತ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕೊರಿ ಆಗುತ್ತಿದ್ದು ಕೂಡಲೇ ರಸ್ತೆಯ ಮೇಲೆ ಬಂದ ಎಲ್ಲಾ ಗೂಡಂಗಡಿಗಳನ್ನು ಬೀಚ್ ಗೆ ಸ್ಥಾನಾಂತರ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ವಿನಂತಿ .ಮಾವಳ್ಳಿ ಮುರುಡೇಶ್ವರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀಧರ ನಾಯ್ಕ್ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಅವರಿಗೆ ಈ ಮೂಲಕ ಆಗ್ರಹಹಿಸಿದ್ದಾರೆ. ಒಂದು ವಾರದ ಒಳಗೆ ಕ್ರಮ ಕೈಗೊಳ್ಳದ್ದಿದ್ದರೆ ಗ್ರಾಮ ಪಂಚಾಯಿತಿ ಎದುರುಗಡೆ ಉಗ್ರವಾದ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ