ಪಿ.ಎಂ. ಹೈಸ್ಕೂಲಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ..


17 Oct 2024, 02:50 pm, 308 reads

ಅಂಕೋಲಾ : ಕೆನರಾ ವೆಲ್ಫೇರ್ ಟ್ರಸ್ಟಿನ ಪಿ.ಎಂ.ಹೈಸ್ಕೂಲಿನಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಆಚರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು. ಹಿರಿಯ ಶಿಕ್ಷಕರಾದ ಜಿ. ಎಸ್. ನಾಯ್ಕಅವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮೂಲಕ ಗೌರವಿಸಿದರು. ಶಿಕ್ಷಕರು ಎನ್.ಸಿ.ಸಿ. ಕಮಾಂಡರ್ ಜಿ. ಆರ್ ತಾಂಡೇಲರವರು ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು. ನಂತರ ಜಿ. ಆರ್. ತಾಂಡೇಲ ಅವರು ಮಹರ್ಷಿ ವಾಲ್ಮೀಕಿ ಕುರಿತು ಕವನ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ರಾಘವೇಂದ್ರ ಮಹಾಲೆ, ರಾಜೇಶ್ ನಾಯಕ, ಖೇಮು ನಾಯ್ಕ, ವಿಕ್ರಾಂತ ಬಂಟ,  ಗಿರೀಶ್ ಶೆಟ್ಟಿ, ಪ್ರವೀಣ ಆಗೇರ, ಶಂಕರ್ ನಾಯ್ಕ, ಪ್ರವೀಣ್ ನಾಯ್ಕ ಶಿಕ್ಷಕಿಯರಾದ ಸಂಗೀತ ನಾಯಕ, ವೃಂದ ಶೆಟ್ಟಿ, ಮಯೂರಿ ನಾಯ್ಕ,  ನೇತ್ರಾವತಿ ನಾಯ್ಕ, ಕೀರ್ತಿ ನಾಯ್ಕ, ದೀಪಾ ನಾಯ್ಕ ಹಾಗೂ ಶಿಕ್ಷಕ ಬಂಧುಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕೊನೆಯಲ್ಲಿ ಶಿಕ್ಷಕರಾದ ಆನಂದ ನಾಯ್ಕ ಸರ್ವರನ್ನು ವಂದಿಸಿದರು


ವಿಕಾಸ ವಾಹಿನಿ ವರದಿ




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: