ಹೊನ್ನೇಬೈಲ್ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗೆ ಕೆಂಪು ಚಿರೆಕಲ್ಲನ್ನು ಹಾಕಿ ಅಡ್ಡಿಪಡಿಸುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳ ಭೇಟಿ :: ಅರಣ್ಯ ಸಿಬ್ಬಂದಿಯ ಚಳಿ ಬಿಡಿಸಿದ ಸಿಪಿಐ : ಕಲ್ಲನ್ನು ತೆರವುಗೊಳಿಸಲು ಶ್ರಮಿಸಿದ ಅಂಕೋಲ ದಂಡಾಧಿಕಾರಿಗಳ ಹಾಗೂ ಇನ್ನಿತರ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ ಕೃತಜ್ಞತೆ .


15 Oct 2024, 10:09 am, 899 reads

ಅಂಕೋಲಾ : ತಾಲೂಕಿನ ಹೊನ್ನೇಬೈಲ ಗ್ರಾಮದ ಸರ್ವೇ ನಂಬರ್ 214 ಹಿಸ್ಸಾ 5 ರ ಮಾಲ್ಕಿ ಜಮೀನಿನ ಮಾಲೀಕರಾದ ಮಂಗಲಾ ಮೋಹನ್ ನಾಯ್ಕ ಎಂಬುವರು 2 ಲೋಡು ಕೆಂಪು ಚಿರೆಕಲ್ಲನ್ನು ತಂದು ಸಾರ್ವಜನಿಕರು ಅನಾದಿ ಕಾಲದಿಂದಲೂ ಸಂಚರಿಸುವ ದಾರಿ ಮಧ್ಯೆ ಕಲ್ಲನ್ನು ಹಾಕಿ ಸಾರ್ವಜನಿಕರಿಗೆ ಓಡಾಡಲು ತೊಂದರೆ ನೀಡಿ, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಉಂಟು ಮಾಡುತ್ತಿದ್ದಾರೆ. ಕೂಡಲೇ ರಸ್ತೆಗೆ ಹಾಕಿರುವ ಕೆಂಪು ಕಲ್ಲನ್ನು ತೆರವು ಗೊಳಿಸಿ, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಂಕೋಲಾದ ತಾಲೂಕು ದಂಡಾಧಿಕಾರಿಗಳಿಗೆ ಹಾಗೂ ಅಂಕೋಲಾ ಪೊಲೀಸ್ ಠಾಣೆಗೆ ವಿನಾಯಕ ನಾಗಪ್ಪ ನಾಯ್ಕ ಹಾಗೂ ಸಾರ್ವಜನಿಕರು ದೂರನ್ನು ಸಲ್ಲಿಸಿದ್ದರು. 

ಸದರಿ ದೂರಿಗೆ ಸಂಬಂಧಪಟ್ಟಂತೆ ಅಂಕೋಲಾ ತಾಲೂಕಿನ ತಹಶೀಲ್ದಾರರು ಬಿ ಅನಂತ ಶಂಕರ್, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ, ಪಿಎಸ್ಐ ಉದ್ಧಪ್ಪ ದರೆಪ್ಪನವರ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಾರ್ವಜನಿಕರ ರಸ್ತೆಗೆ ಕಲ್ಲು ಹಾಕಿದ ಅಡ್ಡಿ ಪಡಿಸುತ್ತಿದ್ದ ಸ್ಥಳಕ್ಕೆ ಬರುತ್ತಿದ್ದಂತೆ ವಿಷಯ ತಿಳಿದ ಹೊನ್ನೇಬೈಲ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಣ ನಾಯ್ಕ, ಕಾರ್ಯದರ್ಶಿ ಗಣಪತಿ ನಾಯ್ಕ, ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ದು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.


ಸಾರ್ವಜನಿಕ ರಸ್ತೆಗೆ ಅಡ್ಡಲಾಗಿ ಹಾಕಿರುವ ಕಲ್ಲನ್ನು ಕೂಡಲೇ ತೆರುವುಗೊಳಿಸುವಂತೆ ಸ್ಥಳದ ಮಾಲೀಕರಿಗೆ ಸೂಚಿಸಿದ ತಾಲೂಕು ದಂಡಾಧಿಕಾರಿಗಳು. 

ಸಾರ್ವಜನಿಕರ ಅಹವಾಲಿನಂತೆ ಹೊನ್ನೇಬೈಲ್ ಗ್ರಾಮದ ಸಾರ್ವಜನಿಕ ರಸ್ತೆಗೆ ಚೀರೆಕಲ್ಲು ಹಾಕಿದ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ ಬಿ ಅನಂತ್ ಶಂಕರ್ ರವರು ಕಲ್ಲು ಹಾಕಿದ ಸ್ಥಳದ ಮಾಲಿಕರಾದ ಮಂಗಲಾ ನಾಯ್ಕ ಇವರಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ ಸಾರ್ವಜನಿಕ ರಸ್ತೆಗೆ ಹಾಕಿರುವ ಕಲ್ಲನ್ನು ಕೂಡಲೇ ತೆರವುಗೊಳಿಸುವಂತೆ ತಿಳಿಸಿದ್ದಾರೆ. ಒಂದು ವೇಳೆ ರಸ್ತೆಗೆ ಕಲ್ಲನ್ನು ಹಾಕುವುದು ಮುಂದುವರೆದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ಕಾಗಿ ಸೂಚಿಸಿದ್ದಾರೆ. 

ಅರಣ್ಯ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಿಪಿಐ ಚಂದ್ರಶೇಖರ್ ಮಠಪತಿ.

ಅರಣ್ಯ ದಾರಿಯನ್ನು ಬಂದ್ ಮಾಡಿ ಲಗುತ್ತದಾರ ಮಾಲ್ಕಿ ಜಮೀನಿನ ಮಾಲೀಕರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದರು, ದಾರಿಗೂ ತಮಗೂ ಯಾವುದೇ ಸಂಬಂಧವಿಲ್ಲದಂತೆ ಅಸಡ್ಡೆ ವರ್ತನೆ ತೋರುತ್ತಿದ್ದ , ಅರಣ್ಯ ಇಲಾಖೆಯ ಸಿಬ್ಬಂದಿ ಸಿದ್ದು ರವರಿಗೆ ಸಿಪಿಐ ಚಂದ್ರಶೇಖರ್ ಮಠಪತಿ ಇವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.. ಅರಣ್ಯ ಇಲಾಖೆಯ ರಸ್ತೆಯನ್ನು ಬಂದ್ ಮಾಡಿ ಗಲಾಟೆಗಳು ನಡೆಯುತ್ತಿದ್ದರು . ಅರಣ್ಯ ರಕ್ಷಕರಾದ ನೀವುಗಳು ನಿಮ್ಮ ಕರ್ತವ್ಯವನ್ನು ಮರೆತು ನಿರ್ಲಕ್ಷವನ್ನು ತೋರುತ್ತಿದ್ದೀರಿ. ಅರಣ್ಯ ಇಲಾಖೆಯ ಮುಖಾಂತರ ಸಾರ್ವಜನಿಕರು ಹೋಗುವ ದಾರಿಗೆ ಅಡ್ದಲಾಗಿ ಹಾಕಿರುವ ಕಲ್ಲಿನ ಬಗ್ಗೆ ನಿದ್ದೆಗೆ ಜಾರಿರುವ ಅಧಿಕಾರಿಯ ಚಳಿ ಬಿಡಿಸಿದರು.ಅರಣ್ಯ ಇಲಾಖೆಯ ಸಂರಕ್ಷಣೆಯ ಬಗ್ಗೆ ಕರ್ತವ್ಯ ಬದ್ಧತೆಯನ್ನು ಸಿಪಿಐ ರವರು ಅರಣ್ಯ ಸಿಬ್ಬಂದಿಗೆ ಮನವರಿಕೆ ಮಾಡಿದರು. ಪಿಎಸ್ಐ ಉದ್ದಪ್ಪನವರು ಕೂಡ ದಾರಿಗೆ ಅಡ್ಡಲಾಗಿ ಹಾಕಿರುವ ಕಲ್ಲನ್ನು ತೆರೆವು ಗೊಳಿಸುವಂತೆ ಮಂಗಲಾ ನಾಯ್ಕ ಇವರಿಗೆ ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕ ಸಂಚಾರಕ್ಕೆ ಅಡ್ಡಪಡಿಸಿ ರಸ್ತೆಗೆ ಹಾಕಿದ ಕೆಂಪು ಚೀರೆಕಲ್ಲನು ತೆರವು ಗೊಳಿಸಿದ ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ. 


ಅನಾದಿಕಾಲದಿಂದಲೂ ಇರುವ ರಸ್ತೆಗೆ ಬೇಳಂಬಾರದ ನಿವಾಸಿಯಾದ ಮಂಗಲಾ ಮೋಹನ ನಾಯ್ಕ ಏಕಾ ಏಕಿ ಹಾಕಿದ ಕೆಂಪು ಚಿರೆಕಲ್ಲನ್ನು ಪೋಲೀಸ್ ಅಧಿಕಾರಿಗಳ ಹಾಗೂ ತಹಸಿಲ್ದಾರ ಸಮ್ಮುಖದಲ್ಲಿ ಸ್ಥಳೀಯ ಗ್ರಾಮಸ್ಥರು ತೆರವು ಗೊಳಿಸಿದರು. ಅನಾದಿ ಕಾಲದಿಂದಲೂ ಬಳಸುತಿದ್ದ ಈ ರಸ್ತೆಯಲ್ಲಿ ಶಾಲಾ ಮಕ್ಕಳು,ದಿನನಿತ್ಯ ಕೂಲಿ ಕೆಲಸಕ್ಕೆ ಹೊಗುವವರು. ಹಾಗೂ ಅಲ್ಲಿಯೇ ಇರುವ ನಾಗ-ಜಟಕ ಗುಡಿಗೆ ಪುಜೆಗೆ ಹೊಗುವವರಿಗೆ ಅರಣ್ಯ ಇಲಾಖೆಯ ವಹಿವಾಟು ರಸ್ತೆಯನ್ನು ಬಿಟ್ಟು ಬೇರೆ ಯಾವುದೇ ರಸ್ತೆ ಇರುವುದಿಲ್ಲ. 

ಸಾರ್ವಜನಿಕ ಅಹವಾಲಿನಂತೆ ಸ್ಥಳಕ್ಕೆ ಆಗಮಿಸಿದ ಅಂಕೋಲಾದ ತಹಸಿಲ್ದಾರ ಬಿ ಅನಂತ ಶಂಕರ , ಕಂದಾಯ ನಿರೀಕ್ಷಕಮಂಜುನಾಥ ನಾಯ್ಕ. ಹಾಗೂ ಸಿಪಿಐ ಚಂದ್ರಶೇಖರ ಮಠಪತಿ. ಪಿಎಸ್ಐ ಉದಪ್ಪ ಹಾಗೂ ಸಿಬ್ಬಂದಿಗಳು ಮಂಗಲಾ ನಾಯ್ಕ ಹಾಗೂ ಅವಳ ಪತಿ ಮೋಹನ ನಾಯ್ಕ ರಿಗೆ ಸೂಕ್ತ ಮನವರಿಕೆ ಹಾಗೂ ಎಚ್ಚರಿಕೆಯನ್ನು ನೀಡಿದರು . 

ತಹಶೀಲ್ದಾರ್ ಮತ್ತು ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ರಸ್ತೆಗೆ ಅಡ್ಡಲಾಗಿ ಹಾಕಿರುವ ಕಲ್ಲುಗಳಿಂದ ತೊಂದರೆಗಿಡಾದ ಸಾರ್ವಜನಿಕರು ರಸ್ತೆಗೆ ಹಾಕಿದ ಕಲ್ಲನ್ನು ತೆರವು ಪಡಿಸಿದರು. ಇದರಿಂದ ಸಂಚಾರಕ್ಕೆ ಮುಕ್ತವಾಯಿತು.

ರಸ್ತೆಗೆ ಹಾಕಿರುವ ಕಲ್ಲನ್ನು ತೆರವುಗೊಳಿಸಲು ಕಾರಣಿಕರ್ತರಾದ ತಾಲೂಕು ದಂಡಾಧಿಕಾರಿಗಳಿಗೂ  ಕಂದಾಯ ನಿರೀಕ್ಷಕರಿಗೂ. ಪೊಲೀಸ್ ಠಾಣೆಯ ಅಧಿಕಾರಿಗಳಿಗೂ ಹಾಗೂ ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಹೊನ್ನೇಬೈಲ್ ಪಂಚಾಯತ್ ಅಧ್ಯಕ್ಷರಾದ ವೆಂಕಟ್ರಮಣ ನಾಯ್ಕ, ಪಂಚಾಯತಿ ಕಾರ್ಯದರ್ಶಿ ಗಣಪತಿ ನಾಯ್ಕ, ಅರಣ್ಯಾಧಿಕಾರಿಗಳಿಗೆ ವಿನಾಯಕ ನಾಗಪ್ಪ ನಾಯ್ಕ, ಮಂಜುನಾಥ ವೆಂಕಟರಮಣ ನಾಯ್ಕ ಹಾಗೂ ಇವರ ಕುಟುಂಬಸ್ಥರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: