ಅಂಕೋಲೆಯ ಪ್ರಸಿದ್ಧ ಉತ್ಸವಗಳಲ್ಲಿ ಒಂದಾಗಿರುವ ನಾಮಧಾರಿ ದಹಿಂಕಾಲ ಉತ್ಸವದ ಪೂರ್ವ ಸಿದ್ಧತೆಗಾಗಿ ಅಂಕೋಲಾ ತಾಲೂಕಾ ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಗೇಶ ವಿ. ನಾಯ್ಕ (ಆಚಾ) ರವರ ಅಧ್ಯಕ್ಷತೆಯಲ್ಲಿ ಸಮಾಜ ಭಾಂದವರ ಸಭೆಯು ರವಿವಾರ 13-10-2024 ರಂದು ನಡೆಯಿತು.
ಈ ಸಂಧರ್ಬದಲ್ಲಿ ದಹಿಂಕಾಲ ಮಹೋತ್ಸವಕ್ಕಾಗಿ ಕಾರ್ಯಕಾರಿ ಸಮಿತಿಯನ್ನು ರಚಿಸಿ ಸಮಿತಿಯ ಅಧ್ಯಕ್ಷರನ್ನಾಗಿ ಬಾಲಕೃಷ್ಣ ನಾರಾಯಣ ನಾಯ್ಕ ಬೊಬ್ರುವಾಡ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮಿತಿಯ ಪಧಾದಿಕಾರಿಗಳ ವಿವರ ಹೀಗಿದೆ ಮಂಜುನಾಥ ದತ್ತಾ ನಾಯ್ಕ ಬೇಳಾಬಂದರ ಗೌರವಾಧ್ಯಕ್ಷರು ,ವಿ.ಎಸ್. ನಾಯ್ಕ (ಉಪಾಧ್ಯಕ್ಷರು), ನಾಗರಾಜ ಎಸ್. ನಾಯ್ಕ (ಪ್ರಧಾನ ಕಾರ್ಯದರ್ಶಿ) ,ಚಂದ್ರಶೇಖರ ಎಸ್. ನಾಯ್ಕ (ವ್ಯವಸ್ಥಾಪಕರು) ,ಪವನ್ ಎನ್. ನಾಯ್ಕ (ಸಹಕಾರ್ಯದರ್ಶಿ) ,ಪ್ರಥ್ವಿ ಉದಯ ನಾಯ್ಕ ( ಸಹಕಾರ್ಯದರ್ಶಿ) ,ಅಕ್ಷಯ ಕೆ. ನಾಯ್ಕ (ಸಹಕಾರ್ಯದರ್ಶಿ) ,ಮಂಜುನಾಥ ಟಿ. ನಾಯ್ಕ (ಸಹಕಾರ್ಯದರ್ಶಿ) ,ಸಂತೋಷ ಆರ್. ನಾಯ್ಕ (ಆದಿ) (ಸಹಕಾರ್ಯದರ್ಶಿ), ಲಕ್ಷ್ಮೀಕಾಂತ್ ಎಸ್. ನಾಯ್ಕ (ಸಂಘಟನಾ ಕಾರ್ಯದರ್ಶಿ) ,ರಮೇಶ್ ಎಸ್. ನಾಯ್ಕ (ಸಂಘಟನಾ ಕಾರ್ಯದರ್ಶಿ), ನಾಗರಾಜ ಹನುಮಂತ ನಾಯ್ಕ (ಖಜಾಂಚೆ), ಸದಸ್ಯರು ಗಣಪತಿ ಬಿ. ನಾಯ್ಕ, ವೆಂಕಪ್ಪ ಟಿ. ನಾಯ್ಕ ಅಶೋಕ ಎಸ್. ನಾಯ್ಕ, ಸಂತೋಷ ಎಮ್. ನಾಯ್ಕ ಗಜಾನನ ಜಿ. ನಾಯ್ಕ, ಸ್ವರೂಪ ನಾಯ್ಕ, ಅಭಿಷೇಕ ನಾಯ್ಕ, ರಾಘವೇಂದ್ರ ಆರ್. ನಾಯ್ಕ, ಭಾಸ್ಕರ ನಾಯ್ಕ, ಚೇತನ ನಾಯ್ಕ, ಪ್ರದೀಪ ಡಿ. ನಾಯ್ಕ, ಸಂದೇಶ ಎಸ್. ನಾಯ್ಕ ಇವರು ಕಮಿಟಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ .
ಈ ವರ್ಷದ ದಹಿಂಕಾಲ ಉತ್ಸವವು ನವೆಂಬರ್ 25ಮತ್ತು26 ನೆರವೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. ಕಳೆದ ಸಾಲಿನ ಪದಾಧಿಕಾರಿಗಲಿಗೆ ಕೃತಜ್ಞತೆ ಸಲ್ಲಿಸಿ, ಪ್ರಸ್ತುತ ಸಾಲಿನ ಪದಾಧಿಕಾರಿಗಳಿಗೆ ಸ್ವಾಗತ ಕೋರಲಾಯಿತು. ಈ ಸಭೆಯಲ್ಲಿ ಸಮಾಜದ ಅಂಕೋಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ.ಪಿ. ನಾಯ್ಕ ಕಾರ್ಯದರ್ಶಿ, ಉಪೇಂದ್ರ ಬಿ. ನಾಯ್ಕ ಹಾಗೂ ತಾಲೂಕಾ ನಾಮಧಾರಿ ದಹಿಂಕಾಲ ಉತ್ಸವ ಕಮಿಟಿ ಅಧ್ಯಕ್ಷರಾದ ರಮೇಶ ನಾಯ್ಕ, ಹಾಗೂ ಪದಾಧಿಕಾರಿಗಳಾದ ರಾಜೇಂದ್ರ ನಾಯ್ಕ ಗೋಪಾಲಕೃಷ್ಣ ನಾಯ್ಕ, ಉದಯ ನಾಯ್ಕ, ಏಕನಾಥ ನಾಯ್ಕ, ಮಂಜುನಾಥ ನಾಯ್ಕ, ರಾಜು ನಾಯ್ಕ (ಕೈಗಾ), ನಾಗೇಂದ್ರ ನಾಯ್ಕ, (ಬೇಳಾ) ಪ್ರಮುಖರಾದ ಭೈರವ ನಾಯ್ಕ, ಹೊನ್ನಪ್ಪ ನಾಯ್ಕ, ವಾಸು ನಾಯ್ಕ ವಿಜಯ ನಾಯ್ಕ ಹಾಗೂ ಸಮಾಜದ ಅನೇಕ ಹಿರಿ-ಕಿರಿಯ ಮುಖಂಡರು ಹಾಜರಿದ್ದರು.
ವರದಿ: ಕಿರಣ ಚಂದ್ರಹಾಸ ಗಾಂವಕರ