ಅಂಕೋಲಾ : ತಾಲೂಕಿನ ಕೆ.ಎಲ್.ಇ ಸೊಸೈಟಿಯ ಕೆ ಜಿ ಸ್ಕೂಲ್ ನ ಬಾಲವಾಡಿ ಯಲ್ಲಿ ಕಳೆದ 25 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ, ಕೋಟೆವಾಡದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿದ್ದ , ಅಮಿತಾ ಯಾನೆ ವಸಂತಿ ಅನಿಲ ಮಾಲವಣಕರ್. ಪ್ರಾಯ 51 ವರ್ಷ ಇವರು ಇಂದು ಬೆಳಿಗ್ಗೆ 5:30 ಕಾರವಾರದ ಕಿಮ್ಸ್ ನಲ್ಲಿ ಕೊನೆಉಸಿರು ಎಳೆದಿದ್ದಾರೆ.
ಘಟನೆ ವಿವರ : ಕಳೆದ ಒಂದು ವಾರದ ಹಿಂದೆ ಅಂಕೋಲಾ ದಿಂದ ಕಾರವಾರಕ್ಕೆ ತನ್ನ ಗಂಡನ ಜೊತೆಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಕಾರವಾರದ ಸಮೀಪ ಸಂಕ್ರು ಭಾಗದ ಹತ್ತಿರ ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು. ಅಲ್ಲಿನ ಕೆಲವು ಸ್ಥಳೀಯರು ಇವರನ್ನು ಕಾರವಾರದ ಕಿಮ್ಸ್ ಗೆ ದಾಖಲಿಸಿದ್ದರು. ಅಪಘಾತದಲ್ಲಿ ಶಿಕ್ಷಕಿಯ ಕೈ ಮೂಳೆ ಮುರಿದು ಹೋಗಿದ್ದು, ಕಿಮ್ಸ್ ನಲ್ಲಿ ಶಿಕ್ಷಕಿಯ ಕೈಗೆ ಸರ್ಜರಿಯನ್ನು ಮಾಡಲಾಗಿದ್ದು ನಂತರ ಚೇತರಿಸಿಕೊಂಡು ಅಂಕೋಲಾದ ಮನೆಗೆ ಬಂದು ಗುಣಮುಖರಾಗಿದ್ದರು.
ದಿನಾಂಕ 10-10-2024 ರಂದು ಏಕಾಏಕಿ ಕಾಲು ಮತ್ತು ಸೊಂಟ ಸ್ವಾಧೀನ ಕಳೆದುಕೊಂಡ ಶಿಕ್ಷಕಿಯನ್ನು ಕಾರವಾರದ ಕಿಮ್ಸ್ ಗೆ ಪುನಃ ಕರೆದುಕೊಂಡು ಬಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು . ವೈದ್ಯಕೀಯ ಪರೀಕ್ಷೆಯಲ್ಲಿ ಶಿಕ್ಷಕಿಯ ಎಲ್ಲಾ ರಿಪೋರ್ಟ್ ಗಳು ನಾರ್ಮಲ್ ಬಂದಿದ್ದವು ಎಂದು ಹೇಳಲಾಗಿದೆ. ಕಾರವಾರದ ಕಿಮ್ಸ್ ವೈದ್ಯರು ಶಿಕ್ಷಕಿಗೆ ನರದ ಸಮಸ್ಯೆ ಇರಬಹುದೆಂಬ ಕಾರಣಕ್ಕಾಗಿ ಮಂಗಳೂರಿಗೆ ಹೋಗಿ ನರದ ಸ್ಕ್ಯಾನಿಂಗ್ ಮಾಡಲು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಕೂಡಲೇ ಕುಟುಂಬಸ್ಥರು ಶಿಕ್ಷಕಿಯನ್ನು ಮಂಗಳೂರಿಗೆ ಕರೆದು ಕೊಂಡು ಹೋಗುತ್ತಿರುವಾಗ. ಶಿಕ್ಷಕಿಗೆ ಉಸಿರಾಟದಲ್ಲಿ ಏರುಪೇರಾಗಿ . ಎದೆ ಬಡಿತ ಹೆಚ್ಚಾದ ಕಾರಣ ಮಣಿಪಾಲದ ಕಸ್ತೂರಬಾ ಹಾಸ್ಪಿಟಲ್ಗೆ ದಾಖಲಿಸಿ ಪರೀಕ್ಷೆಯನ್ನು ಮಾಡಿದ್ದಾರೆ . ಮಣಿಪಾಲದ ವೈದ್ಯರು ಶಿಕ್ಷಕಿಯನ್ನು ತಪಾಸಣೆ ಮಾಡಿ ಅಪರೂಪದ ಜಿಬಿಎಸ್ ಎಂಬ ಕಾಯಿಲೆ ವಕ್ಕರಿಸಿದ್ದ್ದು. ಲಕ್ಷಾಂತರ ಜನರಲ್ಲಿ ಒಬ್ಬರಿಗೆ ಬರುವ ಖಾಯಿಲೆ ಇದ್ದಾಗಿದ್ದು ಎಂದಿದ್ದಾರೆ. ಶಿಕ್ಷಕಿಯನ್ನು ಬದುಕಿಸಬೇಕಾದರೆ ಪ್ರತಿ ಇಂಜೆಕ್ಷನ್ ಗೆ 5 ಲಕ್ಷ ಹಾಗೂ ಐಸಿಯು ಚಾರ್ಜ ಪ್ರತಿ ದಿನಕ್ಕೆ 30000₹ ಎಂದಿದ್ದಾರೆ.. ಆದರೂ ಶಿಕ್ಷಕಿ ಉಳಿಯುವುದು ಅನುಮಾನವನ್ನು ವ್ಯಕ್ತಪಡಿಸಿದ ನುರಿತ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ದಿಕ್ಕು ತೋಚದ ಕುಟುಂಬಸ್ಥರಿಗೆ ಬರ ಸಿಡಿಲು ಅಪ್ಪಳಿಸಿದಂತಾಗಿದೆ. ವಿಧಿಯಾಟಕ್ಕೆ ನಲಗಿ ಹೋದ ಶಿಕ್ಷಕಿಯ ಕುಟುಂಬಸ್ಥರು ಮಣಿಪಾಲದಿಂದ ತುರ್ತು ಅಂಬುಲೆನ್ಸ್ ಮೂಲಕ ಕಾರವಾರದ ಕಿಮ್ಸ್ ಗೆ ಪುನಹ ದಾಖಲಿಸಿದ್ದಾರೆ.
ದಿನಾಂಕ 12/10/2024 ರಂದು ಶಿಕ್ಷಕಿ ಬೆಳಗಿನ ಜಾವ 5:30 ಕ್ಕೆ ದುರಂತ ಸಾವು ಕಂಡಿದ್ದಾರೆ.
ಮೃತ ಶಿಕ್ಷಕಿಯನ್ನು ಕಳೆದುಕೊಂಡ ಮಗ ಗೌರೀಶ,ಮಗಳು ಗೌತಮಿ, ಪತಿ ಅನಿಲ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಗುಮೊಗದ ಶಿಕ್ಷಕಿ ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ. ಶಿಕ್ಷಕಿಯ ಅಂತಿಮ ದರ್ಶನವನ್ನು ಪಡೆಯಲು ಕೆಎಲ್ಇ ಶಿಕ್ಷಣ ಸಂಸ್ಥೆಯ ಶಿಕ್ಷಕರು ಅಧಿಕಾರಿ ವರ್ಗ, ಕೋಟಿವಾಡದ ನಾಗರಿಕರು, ಶಿಕ್ಷಕಿಯ ಬಂಧು ಬಳಗ ಶವಗಾರದ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಕಂಬನಿ ಮಿಡಿದಿದ್ದಾರೆ.
ಕೈ ಮೂಳೆ ಮುರಿದುಕೊಂಡು ಚೇತರಿಸಿಕೊಂಡಿದ್ದ ಶಿಕ್ಷಕಿಯು ವಿಜಯದಶಮಿ ಹಬ್ಬದಂದು ದಾರುಣ ಸಾವನಪ್ಪಿದ್ದು. ಬಾರದ ಲೋಕಕ್ಕೆ ಪ್ರಯಾಣಿಸಿ, ವಿಧಿಯ ಕ್ರೂರತೆಗೆ ಸಾಕ್ಷಿಯಾಗಿದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ