ಕಾರವಾರದ ಕೋಡಿಭಾಗದ ಹತ್ತಿರ ಇರುವ ಕಾಳಿ ಸೇತುವೆ ರಾತ್ರಿ ಕುಸಿತ : ನಾಪತ್ತೆಯಾದವರ ಶೋಧಕ್ಕೆ ಪೋಲಿಸ್ ಇಲಾಖೆಯಿಂದ ಚುರುಕುಗೊಂಡ ರಕ್ಷಣಾ ಕಾರ್ಯ


08 Aug 2024, 11:05 pm, 60 reads

ಕಾರವಾರ : ಗೋವಾ ಮತ್ತು ಕಾರವಾರ ಸಂಪರ್ಕಿಸುವ ಕಾಳಿ ಸೇತುವೆ ರಾತ್ರಿ 1:30ರ ಸುಮಾರಿಗೆ ಕುಸಿದು ಬಿದ್ದಿದೆ.


ಘಟನೆಯಲ್ಲಿ ವಾಹನ ಒಂದು ಸಿಲುಕಿದ್ದು ಗಾಯಗೊಂಡ ಓರ್ವ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



1986 ರಲ್ಲಿ ಈ ಸೇತುವೆ ನಿರ್ಮಾಣಗೊಂಡಿದ್ದು ಕಳೆದ ಕೆಲವು ವರ್ಷಗಳ ಹಿಂದೆ ಈ ಸೇತುವೆ ಬದಿಯಲ್ಲಿ ಇನ್ನೊಂದು ಸೇತುವೆ ಮಾಡಿದ್ದರಿಂದ ಏಕಮುಖ ಸಂಚಾರ ನಡೆಯುತ್ತಿತ್ತು.


 ಈ ಘಟನೆ ರಾತ್ರಿ ಸಮಯದಲ್ಲಿ ಆದ ಕಾರಣ ನಾಪತ್ತೆ ಆದವರ ರಕ್ಷಣಾ ಕಾರ್ಯಕ್ಕೆ ಪೊಲೀಸ್ ಇಲಾಖೆ ರಾತ್ರಿಯಿಂದಲ್ಲೇ ಘಟನಾ ಸ್ಥಳದಲ್ಲಿ ಬೀಡು ಬಿಟ್ಟಿದೆ. ಸದರಿ ಘಟನೆಯಲ್ಲಿ ಮತ್ತಷ್ಟು ಜನರು ಸಿಲುಕಿರಬಹುದು ಎಂದು ಶಂಕಿಸಲಾಗಿದೆ.


ವರದಿ :

ಕಿರಣ ಚಂದ್ರಹಾಸ ಗಾಂವಕರ 

ಅಂಕೋಲಾ

ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: