ಅಂಕೋಲಾ ತಾಲೂಕಿನ ಪುರಸಭೆ ವ್ಯಾಪ್ತಿಯ ಶಿರಕುಳಿ ಯಲ್ಲಿ 65 ವರ್ಷದ ವಯೋ ವೃದ್ಧ ಮಹಿಳೆ ಜ್ಯೋತಿ ಜಯರಾಮ ಶೆಟ್ಟಿ ಎಂಬುವರು ತಮ್ಮ ಸ್ವಂತ ಮನೆಯಲ್ಲಿ ವಾಸ ಮಾಡುತ್ತಿದ್ದು . ಜ್ಯೋತಿ ಜಯರಾಮ್ ಶೆಟ್ಟಿ ಅವರು ಯಾವುದೂ ಕೆಲಸಕ್ಕೆ ದೂರದ ಊರಿಗೆ ಹೋದಾಗ ಇವರು ಇಲ್ಲದನ್ನು ಗಮನಿಸಿದ ಪಕ್ಕದ ಮನೆ ನಿವಾಸಿ ಗೋಪಾಲ ಸುಬ್ರಯ್ಯ ಶೆಟ್ಟಿ ಹಾಗೂ ಮಗ ಸುರೇಶ ಗೋಪಾಲ ಶೆಟ್ಟಿ ಇವರು ಸೇರಿಕೊಂಡು ವೃದ್ದೆಯ ಮಲಗುವ ಕೋಣೆ ಹಾಗೂ ಗ್ಯಾಸ್ ಸಿಲಿಂಡರ್ ಇರುವ ಅಡುಗೆ ಕೋಣೆಯ ಕಿಟಕಿಗೆ ಏಕಾಏಕಿ ಕಬ್ಬಿಣದ ತಗಡನ್ನು ಹಾಕಿ ಗಾಳಿ ಬೆಳಕು ಬರದಿರುವ ಹಾಗೆ ಮಾಡಿದ್ದು, ತನ್ನ ಮನೆಯೊಳಗೆ ಬೆಳಕು ಮತ್ತು ಗಾಳಿ ಬರದಿರುವ ಕಾರಣ ಉಸಿರಾಟದ ಸಮಸ್ಯೆಯಿಂದ ಬಳಲಿ ಹತ್ತಿರದ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಪಕ್ಕದ ಮನೆ ನಿವಾಸಿ ತಂದೆ ಮಗನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಎನ್ನಲಾಗಿದೆ.
ಸದರಿ ದೂರಿನಲ್ಲಿ ತಿಳಿಸಿದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗಳು ಗೋಪಾಲ ಮತ್ತು ಅವನ ಮಗ ಸುರೇಶನಿಗೆ ಕೂಡಲೇ ಜ್ಯೋತಿ ಜಯರಾಮ್ ಶೆಟ್ಟಿಯ ಮನೆಯ ಕಿಟಕಿಗೆ ಹಾಕಿರುವ ತಗಡನ್ನು ತೆಗೆಯುವಂತೆ ಸೂಚಿಸಿದ್ದರು. ಮಾತು ಕೇಳದ ಗೋಪಾಲ ಶೆಟ್ಟಿ ಮತ್ತು ಮಗ ಸುರೇಶ ಶೆಟ್ಟಿ ತಗಡನ್ನು ತೆಗೆಯದೇ ವೃದ್ದೆ ಗೆ ತೊಂದರೆಯನ್ನು ಕೊಡುವುದು ಮುಂದುವರಿಸಿದ್ದಾರೆ.
ಮೂಲಭೂತ ಹಕ್ಕಿನ ಉಲ್ಲಂಘನೆಯಾದ ಕಾರಣ ಮಾನವ ಹಕ್ಕುಗಳ ರಕ್ಷಣಾ ಪರಿಷತನ ಮೊರೆ ಹೋದ ವೃದ್ಧೆ , ನ್ಯಾಯ ಸಿಕ್ಕಿತೇ , ವೃದ್ದೆಗೆ ?
ಜ್ಯೋತಿ ಜಯರಾಮ ಶೆಟ್ಟಿ. ತಾನು ಶಿರಕುಳಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು . ತನ್ನ ಪಕ್ಕದ ಮನೆ ನಿವಾಸಿ ಗೋಪಾಲ ಶೆಟ್ಟಿ ಮತ್ತು ಮಗ ಸುರೇಶ್ ಶೆಟ್ಟಿ ಇವರು ತಾನು ಮಲಗುವ ಕೋಣೆ ಕಿಟಕಿಗೆ ತಗಡನ್ನು ಹಾಕಿ ಗಾಳಿ ಬೆಳಕು ಬರದಿರುವ ಹಾಗೆ ಮಾಡಿದ್ದಾನೆ . ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಾಗುತ್ತಿದೆ, ದಯವಿಟ್ಟು ತನಗೆ ನೆರವಿಗೆ ಬರಬೇಕು ಎಂದು ದೂರನ್ನು ನೀಡಿದ್ದಾಳೆ. ಸದರಿ ದೂರಿನ ಅನ್ವಯ ಮಾನವ ಹಕ್ಕುಗಳ ಪರಿಷತ್ನ ಸದಸ್ಯರು ಶಿರಕುಳಿಗೆ ವೃದ್ದೆಯ ಮನೆಗೆ ಹೋದಾಗ ಮನೆಯೊಳಗೆ ಉಸಿರಾಡಲು ಕಷ್ಟ ಪಡುವಂತ ಪರಿಸ್ಥಿತಿ. ಹೊರಗಡೆಯಿಂದ ಕಿಟಕಿಗೆ ತಗಡನ್ನು ಹಾಕಿರುವುದನ್ನು ಗಮನಿಸಿ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿ ನೇರವಾಗಿ ಮಾನ್ಯ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಇವರ ಗಮನಕ್ಕೆ ತಂದಿದ್ದಾರೆ.
ಜ್ಯೋತಿ ಜಯರಾಮ್ ಶೆಟ್ಟಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಶಾಂತ ಚಿತ್ತವಾಗಿ ಆಲಿಸಿದ ಸಿಪಿಐ ರವರು ತಗಡನ್ನು ಹಾಕಿ ತೊಂದರೆ ಕೊಡುತ್ತಿರುವ ಗೋಪಾಲ ಶೆಟ್ಟಿಯನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ಏರು ಧ್ವನಿಯಲ್ಲಿ ಮಾತನಾಡುತ್ತಾ ತಾನು ಯಾವುದೇ ಕಾರಣಕ್ಕೂ ಜ್ಯೋತಿಯ ಮನೆಯ ಕಿಟಕಿಗೆ ಹಾಕಿರುವ ತಗಡನ್ನು ತೆಗೆಯುವುದಿಲ್ಲ. ನೀವು ನನ್ನನ್ನು ಕೊಲೆ ಮಾಡುತ್ತಿರಾ ಮಾಡಿ, ಜೊತೆಗೆ ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ಸದಸ್ಯರಿಗೂ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಠಾಣೆಯಲ್ಲಿ ಹಾಕಿ ವಿಕೃತಿಯನ್ನು ಮೆರೆದಿದ್ದಾನೆ.
ಗೋಪಾಲ ಶೆಟ್ಟಿಯು ಠಾಣೆಯಲ್ಲಿ ಹುಂಬ ಸ್ವಭಾವದಂತೆ ವರ್ತಿಸುತ್ತಿದ್ದು. ಇವನ ಮಗ ಸುರೇಶ ಶೆಟ್ಟಿಯನ್ನು ಠಾಣೆಗೆ ಕರೆಸಿದ ಸಿಪಿಐ ಸಾಹೇಬರು ಕೂಡಲೇ ವೃದ್ದೆಯ ಮನೆಗೆ ಹಾಕಿರುವ ತಗಡನ್ನು ತೆರವುಗೊಳಿಸುವಂತೆ ಗಾಳಿ ಬೆಳಕು ಬರದಿರುವ ಹಾಗೆ ಉಸಿರು ಕಟ್ಟುವ ವಾತಾವರಣ ಸೃಷ್ಟಿ ಮಾಡಿದ ತಂದೆ ಮಗನಿಗೆ ಕಾನೂನು ತಿಳುವಳಿಕೆ ನೀಡಿ ಸಮಸ್ಯೆ ಕೂಡಲೇ ಇರ್ತ್ಯತ್ಯ ಪಡಿಸುವಂತೆ ಖಡಕ್ಕಾಗಿ ಸೂಚಿಸಿದ್ದಾರೆ.
ಪುರಸಭೆ ಅಧ್ಯಕ್ಷರಿಗೆ, ಪುರಸಭೆ ಮುಖ್ಯಾಧಿಕಾರಿಗಳಿಗೆ ದೂರನ್ನು ಸಲ್ಲಿಸಿದ ವೃದ್ದೆ : ಮುಂದೆ ಏನಾಯ್ತು?
ಕಿಟಕಿಗೆ ಹಾಕಿರುವ ತಗಡನ್ನು ತೆಗೆಯದೆ ಇರುವ ಕಾರಣ ಜ್ಯೋತಿ ಜಯರಾಮ ಶೆಟ್ಟಿ ಹಾಗೂ ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ಸದಸ್ಯರು ಪುರಸಭೆ ಅಧ್ಯಕ್ಷರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರ್ಜಿಯನ್ನು ಸಲ್ಲಿಸಿದರು.ಜೊತೆಗೆ ಪುರಸಭೆ ಮುಖ್ಯ ಅಧಿಕಾರಿಗಳಿಗೂ ಭೇಟಿಯಾಗಿ ಮನವಿಯನ್ನು ನೀಡಿ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿದ್ದರು.
ಪ್ರಕರಣದ ಗಂಭೀರತೆಯನ್ನು ಅರಿತ ಅಂಕೋಲಾದ ಪುರಸಭೆಯ ಮುಖ್ಯಾಧಿಕಾರಿ ತಮ್ಮ ಸಿಬ್ಬಂದಿಗಳಾದ ಇಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಉದ್ದಪ್ಪ ರವರನ್ನು ಕರೆದುಕೊಂಡು ಶಿರ್ಕುಳಿಯ ವೃದ್ದೆಯ ಮನೆಗೆ ಹೋದರು. ಆ ಸಂದರ್ಭದಲ್ಲಿ ಶಿರಕುಳಿಯ ವಾರ್ಡ್ ಸದಸ್ಯ ಶ್ರೀಧರ್ ನಾಯ್ಕ್ ಕೂಡ ಸ್ಥಳದಲ್ಲಿದ್ದರೂ.
ವೃದ್ದೆಯ ಮನೆಯ ಕಿಟಕಿಗೆ ಹಾಕಿರುವ ತಗಡನ್ನು ಗಮನಿಸಿದ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಪಿಎಸ್ಐ ಉದಪ್ಪ ರವರು ಗೋಪಾಲ ಶೆಟ್ಟಿಯನ್ನು ಉದ್ದೇಶಿಸಿ ಜ್ಯೋತಿ ಶೆಟ್ಟಿಯ ಮನೆಯ ಕಿಟಕಿಗೆ ಹಾಕಿರುವ ತಗಡನ್ನು ತೆಗೆಯಲು ಸೂಚಿಸಿದ್ದರು. ಮಾತು ಕೇಳದ ಗೋಪಾಲ ಶೆಟ್ಟಿ ಸದರಿ ಜ್ಯೋತಿ ಶೆಟ್ಟಿಯ ಮನೆಗೆ ಹಾಕಿದ ತಗಡನ್ನು ಯಾವುದೇ ಕಾರಣಕ್ಕೂ ತೆಗಿಸಲು ಕೊಡಬೇಡ ಎಂದು ಹೇಳಿದ್ದಾರೆ. ಅದಕ್ಕಾಗಿ ನಾನು ತಗಡನ್ನು ತೆಗೆಯುವುದಿಲ್ಲ ಎಂದು ಅಂಕೋಲದ ಖ್ಯಾತ ವಕೀಲರ ಹೆಸರನ್ನು ಹೇಳಿ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ.
ಸ್ಥಳದಲ್ಲಿ ಅಧಿಕಾರಿಗಳು ಹಾಗೂ ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ಸದಸ್ಯರು ಮಾತನಾಡುತ್ತಿದ್ದಾಗ ಗೋಪಾಲ ಶೆಟ್ಟಿಯ ಮಗ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಮಗ್ನನಾಗಿದ್ದ. ಈ ಬಗ್ಗೆ ಸುರೇಶ ನಿಗೆ ಅಂಕೋಲಾದ ಕಿರಿಯ ಇಂಜಿನಿಯರ್ ಹಾಗೂ ಪರಿಷತ್ನ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತು ಇಂತು ಗೋಪಾಲ ಶೆಟ್ಟಿಯ ಕಿರುಚಾಟಕ್ಕೆ ಪೊಲೀಸರು ಹಾಗೂ ಮುಖ್ಯಾಧಿಕಾರಿಗಳು ಮುಂದೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ, ಬಂದ ದಾರಿಗೆ ಸುಂಕ ಇಲ್ಲದಂತೆ ತಮ್ಮ ಕಚೇರಿ ಕಡೆ ದಾವಿಸಿದ್ದಾರೆ.
ಅಂಕೋಲಾದ ಜೆಎಂಎಫ್‌ಸಿ ನ್ಯಾಯಾಲಯದ ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ದೂರು ದಾಖಲಿಸಿದ ವೃದ್ದೆ.
ಮೂಲಭೂತಿನ ಹಕ್ಕಿನ ಉಲ್ಲಂಘನೆಯಾಗಿ ಎಲ್ಲಿಯೂ ಸರಿಯಾಗಿ ನ್ಯಾಯ ಸಿಗದೇ ಇರುವ ಕಾರಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ವಯೋ ವೃದ್ಧ ಮಹಿಳೆ ತುರ್ತು ನ್ಯಾಯಕ್ಕಾಗಿ ತಾಲೂಕು ಕಾನೂನು ಸೇವಾ ಸಮಿತಿಯ ಮೊರೆ ಹೋಗಿದ್ದಾಳೆ. ಮಾನ್ಯ ನ್ಯಾಯಾಲಯದಿಂದಾದರು ನ್ಯಾಯ ಸಿಗುವ ಭರವಸೆಯಲ್ಲಿ ವೃದ್ದೆ ಹಾಗೂ ವೃದ್ದೆ ಯನ್ನು ಬೆಂಬಲಿಸಿ ಹೊರಡುತ್ತಿರುವ ಮಾನವ ಹಕ್ಕುಗಳ ರಕ್ಷಣಾ ಪರಿಷತ್ನ ಸದಸ್ಯರದ್ದಾಗಿದೆ.
ಸಿವಿಲ್ ವ್ಯಾಜ್ಯ ಏನಿದ್ದರೂ ಗಾಳಿ ಬೆಳಕು ಬರೆದಿರುವ ಹಾಗೆ ಯಾವುದೇ ಮನುಷ್ಯರ ಮೂಲಭೂತನ ಹಕ್ಕಿನ ಉಲ್ಲಂಘನೆ ಮಾಡಿರುವುದು ಅಕ್ಷಮ್ಯ ಅಪರಾಧವೇ ಸರಿ.
ಜ್ಯೋತಿ ಜಯರಾಮ ಶೆಟ್ಟಿ ಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಮಾನವ ಹಕ್ಕುಗಳ ರಕ್ಷಣಾ ಪರಿಷತ್ ಸದಸ್ಯರು ದಿಟ್ಟ ಸಂಕಲ್ಪ ತೊಟ್ಟಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ