ಅಂಕೋಲಾದ ಮಟ್ಕಾ ಆಡಿಸುತ್ತಿರುವ ಅಂಗಡಿಗಳ ಮೇಲೆ ನೂತನ ಸಿ.ಪಿ.ಐ ಚಂದ್ರಶೇಖರ ಮಠಪತಿ ದಾಳಿ : ಮಟ್ಕಾ ಮಂತ್ಲಿ ಆಟಕ್ಕೆ ಬ್ರೇಕ್- ಓಸಿ ಬುಕ್ಕಿಗಳ ಕನಸು ನುಚ್ಚುನೂರು : ಪಟ್ಟಣದ ಪ್ರಮುಖ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಪೊಲೀಸ್ ಪಡೆ.


02 Oct 2024, 09:39 am, 991 reads

ಅಂಕೋಲಾ : ತಾಲೂಕಿನ ಪಟ್ಟಣ ಪ್ರದೇಶದಲ್ಲಿ ನಿನ್ನೆ ಮಂಗಳವಾರ ನೂತನ ಸಿ.ಪಿ.ಐ ಚಂದ್ರಶೇಖರ್ ಮಠಪತಿಯವರು ತಮ್ಮ ಸಿಬ್ಬಂದಿಗಳ ಜೊತೆ ಏಕಕಾಲದಲ್ಲಿ ಮೂರು ಕಡೆ ಅಕ್ರಮ ಮಟ್ಕಾ ದಂಧೆ ನಡೆಸುತ್ತಿರುವ ಶಂಕಿತ ಅಂಗಡಿಗಳ ಮೇಲೆ ಹಠಾತ್ ದಾಳಿ ಮಾಡಿ ಮಟ್ಕಾ ಬರೆಯುತ್ತಿದ್ದ ಪಟ್ಟಿಯನ್ನು, ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ಮಟ್ಕಾ ಆಟಕ್ಕೆ ಬ್ರೇಕ್ ಹಾಕಿದ ನೂತನ ಸಿಪಿಐ 

ಅಂಕೋಲಕ್ಕೆ ನೂತನ ಸಿ.ಪಿ.ಐ ಬರುತ್ತಾರೆ ಮಂತ್ಲಿ ಆಟ ಚಾಲು ಆಗುತ್ತದೆ ಎಂದು ಬಕಪಕ್ಷಿಯಂತೆ ಕಾಯುತ್ತಿದ್ದ ಓಸಿ ಬುಕ್ಕಿಗಳ ಕನಸು ಇದೀಗ ನುಚ್ಚುನೂರಾಗಿದೆ. ಅಂಕೋಲಕ್ಕೆ ಕಾಲಿಟ್ಟ ನೂತನ ಸಿಪಿಐ ಚಂದ್ರಶೇಖರ್ ಮಠಪತಿಯವರು ಈಗಾಗಲೇ ತಮ್ಮ ಸಿಬ್ಬಂದಿಗಳಿಂದ ಅಂಕೋಲಾದ ಮಟ್ಕಾ ಮಾಪಿಯಾಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿದುಕೊಂಡು ತಾವೇ ಖುದ್ದಾಗಿ ಮಟ್ಕಾ ದಂದೆಯ ಬುಕ್ಕಿಗಳನ್ನು ಹೆಡೆಮುರಿ ಕಟ್ಟಲು ಫೀಲ್ಡ್ ಗೆ ಇಳಿದಿದ್ದಾರೆ. 

ರಾಜ ಕಳೆ ಬಂದ ಅಂಕೋಲಾ ಪೊಲೀಸ್ ಠಾಣೆ. 

ಕಳೆದ ಕೆಲವು ದಿನಗಳ ಹಿಂದೆ ಅಂಕೋಲಾ ಪೊಲೀಸ್ ಠಾಣೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡಿದ್ದ ಚಂದ್ರಶೇಖರ ಮಠಪತಿ, ಇವರ ಆಗಮನದಿಂದ ಠಾಣೆಗೆ ರಾಜ ಕಳೆ ಬಂದಂತಾಗಿದೆ. ಕಡಕ್ ನಿಲುವು ತಾಳುವುದರ ಮೂಲಕ ಭ್ರಷ್ಟರಿಗೆ ನಡುಕ ಹುಟ್ಟಿಸುತ್ತಿದ್ದಾರೆ .ಸಾರ್ವಜನಿಕರ ದೂರುಗಳು ಬಂದಾಗ ಶಾಂತಚಿತ್ತವಾಗಿ ಆಲಿಸಿ ನೊಂದವರಿಗೆ, ಅನ್ಯಾಯ ಕೊಳಗಾದವರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನೂತನ ಸಿಪಿಐ ಚಂದ್ರಶೇಖರ್ ಮಠಪತಿ ಅವರ ಕಾರ್ಯಕ್ಕೆ ಪ್ರಜ್ಞಾವಂತ ಯುವ ಜನತೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. 


ಅಂಕೋಲಾದ ಪ್ರಮುಖ ಪ್ರದೇಶದಲ್ಲಿ ಸಿಪಿಐ, ಪಿಎಸ್ಐ, ಸಿಬ್ಬಂದಿಗಳು ಪೂಟ್ ಪೆಟ್ರೋಲಿಂಗ್ ಮಾಡಿ ಕಾನೂನು ಅರಿವು ಮೂಡಿಸುತ್ತಿದ್ದಾರೆ.

ನಿನ್ನೆ ಸಂಜೆ 5:45 ಸಮಯಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ. ಪಿಎಸ್ಐ ಗಳಾದ ಉದ್ದಪ್ಪ , ಸುನಿಲ,ಹಾಗೂ ಇತರ ಸಿಬ್ಬಂದಿಗಳು ಅಂಕೋಲಾದ ಬಸ್ಟ್ಯಾಂಡ್ ಗೆ ಗಸ್ತು ತಿರುಗಿ ಪೂಟ್ ಪೆಟ್ರೋಲಿಂಗ್ ಮಾಡಿ ಕಾನೂನು ಅರಿವು ಮೂಡಿಸಿದ್ದಾರೆ.  ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಗುಂಪು ಗುಂಪಾಗಿ ಬಸ್ ಸ್ಟ್ಯಾಂಡಿಗೆ ಗಸ್ತು ಬಂದಾಗ ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಗಮನ ಪೊಲೀಸರ ಕಡೆಗೆ ಹೋಗುತ್ತಿತ್ತು. ಬಸ್ಟ್ಯಾಂಡಿಗೆ ವಿವಿಧ ಊರುಗಳಿಗೆ ಹೋಗಲು ಬಂದಿದ್ದ ಪ್ರಯಾಣಿಕರು ಪಿಳಿಪಿಳಿಯಾಗಿ ಕಣ್ಣು ಮಿಟುಕಿಸಿ ಪೊಲೀಸ್ ಅಧಿಕಾರಿಗಳನ್ನೇ ನೋಡುತ್ತಿದ್ದರು. 

ಮಾನ್ಯ ಉತ್ತರ ಕನ್ನಡ ಪೊಲೀಸ್ ವರಿಷ್ಠ ಅಧಿಕಾರಿಗಳ ಆದೇಶದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಪೋಲಿಸ್ ಅಧಿಕಾರಿಗಳು ಪೂಟ್ ಪೆಟ್ರೋಲಿಂಗ್ ನಡೆಸುತ್ತಿದ್ದು. ತಮ್ಮ ಮೇಲಾಧಿಕಾರಿಗಳಿಗೆ ಪೂಟ್ ಪೆಟ್ರೋಲಿಂಗ್ ಮಾಡಿದ ಬಗ್ಗೆ ಮಾಹಿತಿಯನ್ನು ಅಪ್ಡೇಟ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಪೋಲಿಸ್ ವ್ಯವಸ್ಥೆ ಇನ್ನಷ್ಟು ಚುರುಕು ಮೂಡಿದೆ.

ಅಂಕೋಲಾದ ಕೆಳಗಿನ ಮಂಜುಗುಣಿ ಪ್ರದೇಶದಲ್ಲಿ ಹಗಲು ರಾತ್ರಿ ಎನ್ನದೇ ಅಕ್ರಮ ಮಟ್ಕ ದಂದೆ ನಡೆಯುತ್ತಿದೆಯಂತೆ: ಸಿ.ಪಿ.ಐ ಸರ್ ಗಮನಕ್ಕೆ. 

ಅಂಕೋಲಾ ತಾಲೂಕಿನ ಕೆಳಗಿನ ಮಂಜುಗುಣಿ ಬಂದರು ಪ್ರದೇಶದಲ್ಲಿಯೂ ಕೂಡಾ ಹಗಲು ರಾತ್ರಿ ಎನ್ನದೆ ರಾಜಾ ರೋಷವಾಗಿ ಮನೆಹಾಳು ಮಟ್ಕಾ ದಂದೆ ನಿರಾತಂಕವಾಗಿ ನಡೆಯುತ್ತಿದ್ದು ನಾಗಪ್ಪ -ರಾಜು ಎಂಬ ಎರಡು ಹೆಸರಿನ ವ್ಯಕ್ತಿಗಳು ಈ ಅಕ್ರಮ ಮಟ್ಕಾ ದಂದೆಯನ್ನು ನಿರಾತಂಕವಾಗಿ ನಡೆಸುತ್ತಿದ್ದಾರೆ ಎಂದು ಮಾಹಿತಿ ಇದ್ದು,ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಅಲ್ಲಿನ ಸ್ಥಳಿಯ ಸಾರ್ವಜನಿಕರು ವಿಕಾಸ ವಾಹಿನಿ ಮೂಲಕ ಅಂಕೋಲಾ ಠಾಣೆಯ ಸಿಪಿಐ ರವರಿಗೆ ಆಗ್ರಹಿಸಿದ್ದಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 





ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: