ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ.


01 Oct 2024, 10:02 pm, 143 reads

ಅಂಕೋಲಾ ತಾಲೂಕಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಾದ ವಿನೋದ ಶಂಕರ ಗೌಡ 100ಮೀ.ಓಟದಲ್ಲಿ ಪ್ರಥಮ ಸ್ಥಾನ, ಚೈತ್ರಾ ದುರ್ಗು ಗೌಡ 3ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ನಿವೇಕ್ಷಿ ಸುರೇಶ ಗೌಡ 400 ಮೀ ಓಟದಲ್ಲಿ ದ್ವಿತೀಯ ಮತ್ತು 800ಮೀ.ಓಟದಲ್ಲಿ ತೃತೀಯ ಸ್ಥಾನ ಹಾಗೂ ನಿತೀನ ಸುರೇಶ ಗೌಡ 1500ಮೀ.ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ 4×400ಮೀ ರೀಲೆಯಲ್ಲಿ ದ್ವಿತೀಯ ಸ್ಥಾನವನ್ನು ಗಳಿಸುತ್ತಾರೆ.ಸಾಧನೆಗೈದ ವಿದ್ಯಾರ್ಥಿಗಳಿಗೂ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಸುಧೀರ ರಾವ್.ಕೆ. ಇವರಿಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ ಪ್ರಭು, ಕಾರ್ಯದರ್ಶಿಗಳು, ಸರ್ವಸದಸ್ಯರು, ಶಿಕ್ಷಕ ವೃಂದದವರು ಮತ್ತು ಊರ ನಾಗರಿಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.


ವಿಕಾಸ ವಾಹಿನಿ ವರದಿ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: