ಕನ್ನಡ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾಗಿ ಮಹೇಶ ನಾಯಕ ಆಯ್ಕೆ..


30 Sep 2024, 06:26 pm, 125 reads

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಸಂಘದ ಎರಡನೇ ಅವಧಿಯ ನೂತನ ಜಿಲ್ಲಾಧ್ಯಕ್ಷರಾಗಿ ಅಂಕೋಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಮಹೇಶ ಬಿ ನಾಯಕ ಹಿಚ್ಕಡ ಆಯ್ಕೆಯಾಗಿದ್ದಾರೆ. 

ಸಂಘದ ಗೌರವಾಧ್ಯಕ್ಷರಾಗಿ ಅಮೃತ್ ರಾಮರಥ, ಉಪಾಧ್ಯಕ್ಷರಾಗಿ ಡಾ. ದತ್ತಾತ್ರಯ ಗಾಂವಕರ ಮತ್ತು ಶ್ರೀಮತಿ ಮೇಘನಾ ನಾಯ್ಕ ಹಾಗೂ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಹೆಗಡೆ ಆಯ್ಕೆಗೊಂಡರು. ಇತ್ತೀಚಿಗೆ ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ನಡೆದ ಕನ್ನಡ ಪಠ್ಯ ವಿಷಯಾಧಾರಿತ ಕಾರ್ಯಗಾರದ ನಂತರ ಆಯ್ಕೆ ಪ್ರಕ್ರಿಯೆ ನಡೆಯಿತು. 

ಅಂಕೋಲಾ ತಾಲೂಕಿನ ಹಿಚ್ಕಡದವರಾದ ಮಹೇಶ ನಾಯಕ ಕ್ರಿಯಾಶೀಲ ಉಪನ್ಯಾಸಕರಾಗಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳೊಂದಿಗಿನ ಸೌಹಾರ್ದಯುತ ವ್ಯಕ್ತಿತ್ವಕ್ಕೆ ಹೆಸರಾಗಿದ್ದು, ಅವರ ಆಯ್ಕೆಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.


ವಿಕಾಸ ವಾಹಿನಿ ವರದಿ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: