ಅಂಕೋಲಾದಲ್ಲಿ ಸಕ್ರಿಯವಾಗಿರುವ ಹಲವು ಅಕ್ರಮ ಚಟುವಟಿಕೆ : ಸೋಮವಾರ ರಾತ್ರಿ ಮಟ್ಕಾ ಬರೆಯುತ್ತಿದ್ದ ಅಂಗಡಿಯ ಮೇಲೆ ದಾಳಿ ಪ್ರಕರಣ ದಾಖಲು..!


26 Sep 2024, 09:28 am, 979 reads

ಅಂಕೋಲಾ : ಮೊನ್ನೆ ಮೊನ್ನೆ ಅಷ್ಟೇ ಮುರುಡೇಶ್ವರದ ಬಸ್ತಿಮಕ್ಕಿಯ ಹೈ ಲ್ಯಾಂಡ್ ಲಾಡ್ಜ್ ಮೇಲೆ ಜಿಲ್ಲಾ ಸಿಸಿಬಿ ಪೊಲೀಸ್ ಅಧಿಕಾರಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮತ್ತು ಲಾಡ್ಜ್ ಮೇಲೆ ದಾಳಿ ನಡೆಸಿ ಹೋಟೆಲ್ ಸಿಬ್ಬಂದಿ ಸೇರಿ ನಾಲ್ವರು ಪುರುಷರನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದರು. ಹಾಗೂ ಇಬ್ಬರು ಯುವತಿಯರು ಪರಾರಿಯಾಗಿದ್ದರು. ಕರ್ತವ್ಯ ಲೋಪ ಮತ್ತು ದುರ್ನಾಡತೆ ಬೇಜವಾಬ್ದಾರಿತನವನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ರವರು ಪಿ.ಎಸ್.ಐ ಮಂಜುನಾಥ್ ರವರನ್ನು ಆ ಕೂಡಲೇ ಅಮಾನತ್ತು ಆದೇಶ ಮಾಡಿದ್ದರು. ಈ ಮೂಲಕ ಅಂಕೋಲಾದಲ್ಲಿ ಬೀಟ್ ಪೊಲೀಸ್ ವ್ಯವಸ್ಥೆಯು ಕೂಡ ಎಚ್ಚೆತ್ತುಕೊಂಡಿದೆ.

ಅಂಕೋಲಾದಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಿಸಲು ಪೊಲೀಸರು ಹೈ ಅಲರ್ಟ್..

ಪಕ್ಕದ ಮುರುಡೇಶ್ವರ ಠಾಣೆಯ ಪಿ.ಎಸ್.ಐ ಅಂದು ಅಮಾನತ್ ಆದ ಹಿನ್ನೆಲೆ ಅಂಕೋಲಾ ಪೊಲೀಸರು ಕೂಡ  ಹೈ ಅಲರ್ಟ್ ಆಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲ ತಾಲೂಕಿನ ಆಗುಹೋಗುಗಳನ್ನು ಅಕ್ರಮ ಚಟುವಟಿಕೆಗಳನ್ನು ಗಮನಿಸುತ್ತಿದ್ದು. ತ್ವರಿತ ಗತಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಅಧಿಕಾರಿಗಳು ತಪ್ಪು ಮಾಡಿದ್ದರೆ ಕೂಡಲೇ ಶಿಸ್ತುಕ್ರಮ ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯ ಮಹಿಳಾ ಡಿವೈಎಸ್ಪಿ ಕಳೆದ ಒಂದು ವಾರದಲ್ಲಿ ಎರಡು ದಿನ ಅಂಕೋಲಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಠಾಣೆ ಅಧಿಕಾರಿಗಳ ಚಲನವಲನ, ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂಬುದು ತಿಳಿದುಬಂದಿದೆ. ಅಂಕೋಲಾ ಪೊಲೀಸ್ ಠಾಣೆಯ ಸಿ.ಪಿ.ಐ ಚಂದ್ರಶೇಖರ ಮಠಪತಿ ನೇತೃತ್ವದಲ್ಲಿ ಶಂಕಿತ ಮಟ್ಕಾ ಅಂಗಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಸೋಮವಾರ ಅಂಕೋಲಾ ಬಸ್ ನಿಲ್ದಾಣದ ಎದುರುಗಡೆ ಅಂಗಡಿ ಒಂದರ ಮೇಲೆ ರಾತ್ರಿ ವೇಳೆಯಲ್ಲಿ ಹಠಾತ್ ದಾಳಿ ನಡೆಸಿದ್ದಾರೆ. 

ಅಂಗಡಿ ಒಂದರಲ್ಲಿ ದಾಳಿ ವೇಳೆ ಸಿಕ್ತು ಬಿಳಿ ಕಾಗದ. ಮೊಬೈಲ್ ಫೋನ್, ಪೆನ್ನು ,2650₹ ನಗದು. 

ಸೋಮವಾರ ರಾತ್ರಿ ಸರಿಸುಮಾರು 8 ಗಂಟೆಗೆ ಅಂಕೋಲಾದ ಪಟ್ಟಣ ಪ್ರದೇಶದಲ್ಲಿ ಹೊಂದಿಕೊಂಡಿರುವ ಎರಡು ಪುಟ್ ಅಗಲದ ಚಿಕ್ಕ ಗೂಡಂಗಡಿಯ ಮೇಲೆ ಮಟ್ಕಾ ಚೀಟಿ ಬರೆಯುತ್ತಿದ್ದಾನೆ ಎಂಬ ಶಂಕೆಯ ಮೇರೆಗೆ ಪೊಲೀಸರು ಏಕಾಏಕಿ ದಾಳಿ ಮಾಡಿದ್ದರು ಎನ್ನಲಾಗಿದೆ. ಈ ದಾಳಿಯ ವೇಳೆಗೆ ರೂ.5000 ಅಂದಾಜು ಮೌಲ್ಯದ ಮೊಬೈಲ್ ಫೋನು, ಪೆನ್ನು, ಬಿಳಿ ಖಾಲಿಹಳೆ ಹಾಗೂ 2650₹ ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮೇಲೆ ಕೆಪಿ ಆಕ್ಟ್ ಅನ್ವಯ 78(3) ರನ್ವಯ್ ಪ್ರಕರಣ ದಾಖಲಾಗಿದೆ. 

ದೊಡ್ಡ ದೊಡ್ಡ ಮಟ್ಕಾ ತಿಮಿಂಗಲಗಳನ್ನು ಹಿಡಿಯಲು ಪೊಲೀಸರ ನಿರಾಶಕ್ತಿ..! ಯಾಕೆ ಹೀಗಾಯಿತು ಪೊಲೀಸ್ ವ್ಯವಸ್ಥೆ?

ಪ್ರತಿ ಮನೆಯಲ್ಲಿ ಜಗಳ ಆದಾಗ ಮೊದಲು ನೆನಪಿಗೆ ಬರುವರು ಪೊಲೀಸರು. ಪೊಲೀಸರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿ ಧೊಂಬಿ ಗಲಾಟೆಗಳು ಆಗುತ್ತಿದ್ದವು. ಪೊಲೀಸರು ಎಂದರೆ ಒಂದು ಧೈರ್ಯ, ಒಂದು ಶಕ್ತಿ. ಪೊಲೀಸ ರಿಲ್ಲದ ಸಮಾಜ ಇತ್ತೀಚಿನ ದಿನಗಳಲ್ಲಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಕೆಲವು ವರ್ಷಗಳ ಹಿಂದೆ ಕ್ರಿಮಿನಲ್ ಹಿನ್ನಲೆಯುಳ್ಳ ಆರೋಪಿಗಳನ್ನು ಚಡ್ಡಿಯ ಮೇಲೆ ಹೊಡೆದು ಪೊಲೀಸ್ ಠಾಣೆಗೆ ಎತ್ತಾಕಿಕೊಂಡು ಹೋದ ಉದಾಹರಣೆಗಳು ಅಂಕೋಲಾದಲ್ಲಿ ಜನರ ಮನಸ್ಸಿನಲ್ಲಿ ಇದೆ.  

ಈ ಮೂಲಕ ದಕ್ಷತೆಗೆ ಹೆಸರಾಗಿರುವ ಅಂಕೋಲಾದ ಪೊಲೀಸ್ ಪಡೆಯ ಕೆಲವು ಅಧಿಕಾರಿಗಳ ಇತ್ತೀಚಿನ ನಡವಳಿಕೆ ತೀರಾ ಅನುಮಾನಕ್ಕೆ ಕಾರಣವಾಗಿದೆ. ತಾಲೂಕಿನ ಹಲವು ಕಡೆಯಲ್ಲಿ ಈ ಮಟ್ಕಾ ದಂದೆ ನಿರಂತರವಾಗಿ ನಡೆಯುತ್ತಿದೆ. ಪಾಪದ ಜೀವಿಗಳನ್ನು ಹೆಚ್ಚಾಗಿ ಬಲಿಕೊಡುತ್ತಿದ್ದು, ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಿಡಿದು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸಬೇಕಿದೆ.


ಅಕ್ರಮ ಮಟ್ಕಾ ಅಷ್ಟೇ ಅಲ್ಲದೆ ಹಲವು ಅಕ್ರಮ ಚಟುವಟಿಕೆಗಳು ಅಂಕೋಲಾದಲ್ಲಿ ಸಕ್ರಿಯ. 

ಅಂಕೋಲಾದಲ್ಲಿ ಹೆಚ್ಚಾಗಿ ಮಟಕಾ ದಂಧೆ ಬಿಟ್ಟರೆ ಬೇರೆ ಯಾವ ದಂದೆಗಳು ಪೊಲೀಸರ ಕಣ್ಣಿಗೆ ಕಾಣುವುದಿಲ್ಲ. ಬಲ್ಲ ಮಾಹಿತಿಗಳ ಪ್ರಕಾರ 10ಕ್ಕು ಹೆಚ್ಚು ಅಕ್ರಮ ದಂಧೆಗಳು ಅಂಕೋಲಾದಲ್ಲಿ ಸಕ್ರಿಯವಾಗಿದೆ. ತಾಲೂಕಿನ ಕೆಲವು ಹಳ್ಳಿಗಳಲ್ಲಿ ಹಗಲು ರಾತ್ರಿ ಎನ್ನದೆ ಅಂಕೋಲಾ ಬಾರ್ ಗಳಿಂದ ತಂದ ಮಧ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದೆ. ಅಬಕಾರಿ ಇಲಾಖೆ ಮೌನಕ್ಕೆ ಶರಣಾಗಿದೆ. ಹಳ್ಳಿಗಳಲ್ಲಿ ಬಾರ್ ಗಳಿಂದ ತಂದ ಮಧ್ಯ ಮಾರಾಟ ಮಾಡುವ ಅಂಗಡಿಗೆ ಪ್ರತಿ ಅಂಗಡಿಗೆ ತಿಂಗಳಿಗೆ 500₹ ದಿಂದ 1000₹ ಮಾಮೂಲಿ ಪೊಲೀಸರಿಗೆ ಫಿಕ್ಸ್ ಮಾಡಲಾಗಿದೆ ಎಂಬ ಮಾಹಿತಿ ಇದೆ. 

ಅಂಕೋಲಾದಲ್ಲಿ ಈ ಅಕ್ರಮ ದಂದೆಗಳನ್ನು ನಡೆಸುತ್ತಿರುವ ಪ್ರಭಾವಿಗಳು ಸಾಮಾನ್ಯದವರಲ್ಲ. ಅಕ್ರಮ ಹಣದಿಂದ ಸಂಪಾದಿಸಿದ ಹಣದಿಂದ ಲಕ್ಷಾಂತರ ಮೌಲ್ಯದ ಕಾರುಗಳ ಮೇಲೆ ಬರುವ ಇವರು ಸಮಾಜ ಸುಧಾರಕರು, ಸಾಹೇಬರು, ಗಣ್ಯ ವ್ಯಕ್ತಿಗಳು, ಎಂದು ಕರೆಯಲಾಗುತ್ತದೆ. ಹಾಗೂ ಇವರು ಧರಿಸಿರುವ ಚಿನ್ನಾಭರಣ ಗಳಿಂದ ಕತ್ತಲೆಯಲ್ಲಿ ಚಿನ್ನದ ಬೆಳಕು ಪ್ರಕಾಶಿಸುವುದು . ನಮ್ಮ ಅಂಕೋಲಾ ಪೊಲೀಸರು ಅಂದರೆ ಭಯ ಅಲ್ಲ ಭರವಸೆಯೆಂದು ಪೊಲೀಸರು ದಕ್ಷತೆ ಹಾಗೂ ಜನಸ್ನೇಹಿ ಯಾಗಿ ವರ್ತನೆ ತೋರಿಸಬೇಕಾಗಿದೆ. ಕಳ್ಳ ಕಾಕರನ್ನು ಮಟ್ಟ್ ಹಾಕಲು ಇಚ್ಚಾ ಶಕ್ತಿ ಬೇಕಾಗಿದೆ. ನಮ್ಮ ಈ ಲೇಖನ ಪೊಲೀಸರ ತೇಜೋವದೆ ಮಾಡುವುದಲ್ಲ.ಈಗ ಹದಗೆಡುತ್ತಿರುವ ಪೊಲೀಸ್ ವ್ಯವಸ್ಥೆ ವಿರುದ್ಧ ಸ್ವಲ್ಪಮಟ್ಟಿಗೆ ಆದರೂ ಸುಧಾರಿಸಲು ಸಮರ್ಪಣೆ ಮಾಡಲಾಗಿದೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: