ಅಂಕೋಲಾ : ತಾಲೂಕಿನ ಬಸ್ ನಿಲ್ದಾಣದೊಳಗೆ ದಿನಾಂಕ 21/09/2024 ರಂದು ಶ್ರೀ ಮಹಮ್ಮದ್ ಗೌಸ್ . ಪಿ .ಎಂ .ಹೈಸ್ಕೂಲ್ ಹತ್ತಿರದ ಲಕ್ಷ್ಮೇಶ್ವರ ನಿವಾಸಿಗಳು ತಮ್ಮ ದ್ವಿಚಕ್ರ ವಾಹನವನ್ನು ಇಟ್ಟು ಕೆಲಸದ ನಿಮಿತ್ತವಾಗಿ ಹುಬ್ಬಳ್ಳಿಗೆ ಹೋಗಿದ್ದರು.
ಕೆಲಸದಿಂದ ಮರಳಿ 22/09/2024 ರಂದು ಅಂಕೋಲಾ ಬಸ್ ಸ್ಟ್ಯಾಂಡಿಗೆ ಬಂದಾಗ ತಾವು ನಿಲ್ಲಿಸಿಟ್ಟ ಸ್ಥಳದಲ್ಲಿ ತನ್ನ ಮೋಟಾರ್ ವಾಹನ ಸಂಖ್ಯೆ KA30U8012 ಕಾಣದೇ ಇದ್ದಾಗ, ಮಾರನೇ ದಿನ 23/09/2024 ರಂದು ಹತ್ತಿರದ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ತನ್ನ ದ್ವಿಚಕ್ರ ವಾಹನ ಕಳ್ಳತನ ವಾಗಿದೆ ಎಂದು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು , ಅಂಕೋಲಾ ಪೊಲೀಸ್ ಠಾಣೆ ಅಧಿಕಾರಿಗಳು ಗುನ್ನಾ ನಂಬರ್ 156/2024. ಕಲಂ: 303(2). ಬಿ ಏನ್.ಎಸ್ -2023 ನೇದರಂತೆ ಪ್ರಕರಣ ದಾಖಲಿಸಲಾಗಿರುತ್ತದೆ.
ಅಂಕೋಲಾ ಪೋಲೀಸರ ಅತ್ಯಂತ ಚುರುಕಿನ ಕಾರ್ಯಾಚರಣೆ
ಅಂಕೋಲಾ ಪೊಲೀಸ್ ಠಾಣೆಗೆ 23/09/2024 ರಂದು ದಾಖಲಾದ ಬೈಕ್ ಕಳ್ಳತನ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಈ ಹಿಂದಿನಿಂದಲೂ ಅಂಕೋಲಾ ಬಸ್ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳು ಹೆಚ್ಚಾಗಿ ಟಾರ್ಗೆಟ್ ಮಾಡಿ ಹೊತ್ತೊಯುತ್ತಿದ್ದ ಕಳ್ಳರ ಬಗ್ಗೆ ಅಂಕೋಲಾ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಸ್ವತಃ ಅಂಕೋಲಾ ಪೊಲೀಸರು ಅಂಕೋಲಾ ಬಸ್ ನಿಲ್ದಾಣದ ಒಳಬರುವ ಹಾಗೂ ಹೊರಹೋಗುವ ಪ್ರವೇಶ ದ್ವಾರದಲ್ಲಿ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ ಕಳ್ಳತನ ಭೇದಿಸಲು ಪಣತೊಟ್ಟಿದ್ದರು.
ಅಂತೂ 23/09/2024 ರಂದು ದ್ವಿಚಕ್ರ ವಾಹನದ ಕಳ್ಳನನ್ನು ಬೆನ್ನಟ್ಟಿದ ಅಂಕೋಲಾ ಪೊಲೀಸ್ ತಂಡ ತನ್ನ ಹಿರಿಯ-ಕಿರಿಯ ಮೇಲಾಧಿಕಾರಿಗಳ ನಿರ್ದೇಶನದಂತೆ. ಮಲ್ಲಿಕಾರ್ಜುನ ಕೋಟೆಪ್ಪ ದೇವಿಶೆಟ್ಟಿ. ಪ್ರಾಯ 39 ವರ್ಷ ಸಾಕಿನ್ನ ನಾರಾಯಣಪುರ ಮುಂಡಗೋಡ ರಸ್ತೆ ,ಬಾಡ, ಶಿಗ್ಗಾವ್ ಹಾವೇರಿ ಆರೋಪಿತನನ್ನು ವಶಕ್ಕೆ ಪಡೆದು, ಡಿಯೋ ಮೋಟರ್ ಸೈಕಲ್ KA30U8012 , ಅಂದಾಜು ಕಿಮ್ಮತ್ತು 20.000/ ರೂಪಾಯಿನೇದನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ತನಿಖೆ ಮುಂದುವರೆಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಶ್ರೀ ನಾರಾಯಣ ಎಮ್ ಮಾನ್ಯ ಪೋಲಿಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ , ಇವರ ನಿರ್ದೇಶನದಂತೆ ಶ್ರೀ ಸಿ.ಟಿ ಜಯಕುಮಾರ್ ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಮತ್ತು ಶ್ರೀ ಎಮ್ ಜಗದೀಶ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ಉತ್ತರ ಕನ್ನಡ ಜಿಲ್ಲೆ ಕಾರವಾರ ಮಾರ್ಗದರ್ಶನದಂತೆ ಶ್ರೀ ಗಿರೀಶ್ ಎಸ್ ವಿ ಮಾನ್ಯ ಪೋಲಿಸ್ ಉಪಾದೀಕ್ಷಕರು ಕಾರವಾರ ಉಪ ವಿಭಾಗ, ಕಾರವಾರ ರವರ ನೇತೃತ್ವದಲ್ಲಿ ಹಾಗೂ ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಚಂದ್ರಶೇಖರ್ ಮಠಪತಿ ರವರ ಮಾರ್ಗದರ್ಶನದಲ್ಲಿ ತನಿಖಾದಿಕಾರಿಯಾ ದ ಕುಮಾರಿ ಜಯಶ್ರೀ ಪ್ರಭಾಕರ್ ಮತ್ತು ಠಾಣೆಯ ಸಿಬ್ಬಂದಿಗಳಾದ ಪ್ರಶಾಂತ ನಾಯ್ಕ ,ಆಶಿಫ್ ಆರ್ ಕೆ, ಮನೋಜ್ ಡಿ, ಶ್ರೀಕಾಂತ ಕಟಬರ್, ಸಲೀಂ ಮೋಕಾಶಿ ಯವರು ಪ್ರಕರಣ ದಾಖಲಾದ 24 ಗಂಟೆಯಲ್ಲಿ ದ್ವಿಚಕ್ರದ ವಾಹನದ ಸಮೇತ ಕಳ್ಳನನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಈ ಪತ್ತೆ ಕಾರ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಕಾರವಾರ ಅವರು ಅಭಿನಂದಿಸಿ ಪ್ರಸಂಶನೆ ವ್ಯಕ್ತಪಡಿಸಿದ್ದಾರೆ.
ವರದಿ: ಕಿರಣ ಚಂದ್ರಹಾಸ ಗಾಂವಕರ