ಅಂಕೋಲಾ: ಸೆಪ್ಟೆಂಬರ್ 21, ಅಂಕೋಲಾ ವಲಯದ ಶಿರೂರು ಶಾಖೆಯ ತಳಗದ್ದೆ ಗ್ರಾಮದ ದೊಣ್ಣೆ ಜಲಪಾತದಲ್ಲಿ “ನದಿ ಕಣಿವೆ ಸ್ವಚ್ಛತ ಕಾರ್ಯಕ್ರಮ” ಅಡಿಯಲ್ಲಿ ಅರಣ್ಯ ಇಲಾಖೆ ಮತ್ತು ಜಿ.ಸಿ ಕಾಲೇಜು NSS ಮತ್ತು NCC ಘಟಕದ ಸಹ ಭಾಗಿತ್ವದಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಅಂಕೋಲಾ ಉಪ ವಿಭಾಗ ,ವಲಯ ಅರಣ್ಯಾಧಿಕಾರಿಗಳು ಅಂಕೋಲಾ ಮತ್ತು ರಾಮನಗುಳಿ ,ಉಪ ವಲಯ ಅರಣ್ಯಾಧಿಕಾರಿಗಳು ,ಗಸ್ತು ಅರಣ್ಯ ಪಾಲಕರು ,ವೀಕ್ಷಕರು , ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಯಿತು.
ವಿಕಾಸ ವಾಹಿನಿ ವರದಿ