ಅಂಕೋಲಾದ ಜೈ ಹಿಂದ್ ಹೈಸ್ಕೂಲ್ ಮೈದಾನದಲ್ಲಿ ಕಸದ ರಾಶಿಯನ್ನು ಸುರಿದ ಕಿಡಿಗೇಡಿಗಳು..


20 Sep 2024, 02:33 pm, 259 reads

ಅಂಕೋಲಾ ತಾಲೂಕಿನ ಏಕೈಕ ಪ್ರಸಿದ್ಧ ಜೈ ಹಿಂದ್ ಹೈ ಸ್ಕೂಲ್ ಕ್ರೀಡಾಂಗಣವು ಕಸದ ಡಂಪಿಂಗ್ ಯಾರ್ಡ್  ಆಗಿ  ಮಾರ್ಪಡುತ್ತಿದ್ದೆ. ಕಳೆದ ಕೆಲವು ದಿನಗಳಿಂದ ಯಾರೋ ಕಿಡಿಗೇಡಿಗಳು ಕಸದ ರಾಶಿಯನ್ನು ತಂದು ಕ್ರೀಡಾಂಗಣದಲ್ಲಿ ಬಿಸಾಡಿ ಹೋಗಿದ್ದಾರೆ. ಅಷ್ಟೇ ಅಲ್ಲದೆ ರಾತ್ರಿ ಹೊತ್ತಿನಲ್ಲಿ ಬಿಯರ್ ಬಾಟಲ್ ಗಳನ್ನು ಕ್ರೀಡಾಂಗಣದಲ್ಲಿ ತಂದು ಕುಡಿದು ಎಸೆಯುತಿದ್ದಾರೆ. ಅಲ್ಲಲ್ಲಿ ಮಲ ವಿಸರ್ಜನೆ ಮಾಡಿದ್ದಾರೆ. 

ಈ ಕ್ರೀಡಾಂಗಣದಲ್ಲಿ ಸ್ಥಳೀಯರು ಬೆಳಗಿನ ಜಾವ ಕ್ರಿಕೆಟ್ ಆಡಲು ಬರುತ್ತಾರೆ. ಶಾಲೆಯ ಮಕ್ಕಳು ಕೂಡ ಆಟವಾಡಲು ಬರುತ್ತಾರೆ. ಅಲ್ಲಲ್ಲಿ ಮಲ ವಿಸರ್ಜನೆ , ಒಡೆದು ಬಿದ್ದಿರುವ ಬಿಯರ್ ಬಿಯರ್ ಬಾಟಲಿಗಳಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ. ಸಾಕಷ್ಟು ಪ್ರಮಾಣದಲ್ಲಿ ಬಿದ್ದ ಕಸವನ್ನು ನೋಡಿ ಪ್ರಜ್ಞಾವಂತ ನಾಗರಿಕರು ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಹೊತ್ತಿನಲ್ಲಿ ಈ ಕಸವನ್ನು , ಬಿಯರ್ ಬಾಟಗಳನ್ನು ಬಿಸಾಡಿರಬಹುದು ಎಂದು ಸಾಮಾಜಿಕ ಕಾರ್ಯಕರ್ತ ಅರವಿಂದ್ ನಾಯ್ಕ್ ಕುಂಬಾರಕೇರಿ ಇವರು ಮಾಹಿತಿ ನೀಡಿದ್ದಾರೆ.


ಜೈಹಿಂದ ಆಡಳಿತ ಕಮಿಟಿಯವರು ಸದರಿ ಕ್ರೀಡಾಂಗಣಕ್ಕೆ ಸಿಸಿಟಿವಿ ಅಳವಡಿಸಿ.. ಪ್ರತಿನಿತ್ಯ ಮಲ ಮೂತ್ರ, ಬಿಯರ್ ಬಾಟಲ್ ಗಳನ್ನು ತಂದು ಕುಡಿಯುವುದು,ಕಸದ ರಾಶಿಯನ್ನು ಬಿಸಾಡುವರನ್ನು ಪತ್ತೆ ಹಚ್ಚಿ  ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸೂಕ್ತ ಕ್ರಮ ಜರುಗಿಸಿ ಅಂಕೋಲಾದ ಪಾಲಿಗೆ ಉಳಿದಿರುವ ಏಕೈಕ ನೆಚ್ಚಿನ ಕ್ರೀಡಾಂಗಣವನ್ನು ಉಳಿಸಿಕೊಳ್ಳಬೇಕೆಂದು ಸಾರ್ವಜನಿಕರು ಈ ಮೂಲಕ ವಿನಂತಿಸಿದ್ದಾರೆ.


ವರದಿ: ಕಿರಣ ಚಂದ್ರಹಾಸ ಗಾಂವಕರ 




ಸೂರಜ ಪಾಂಡುರಂಗ ನಾಯ್ಕ

[ಸಂಪಾದಕ]

M: +91-83104-33297

Share on: