ಅಂಕೋಲಾ ತಾಲೂಕಿನ ಕೋಟೆವಾಡದ ಮುಕ್ತಿ ಧಾಮದಲ್ಲಿ ವ್ಯಕ್ತಿ ಯೊಬ್ಬ ಹಲವು ದಿನಗಳಿಂದ ಊಟ ತಿಂಡಿ ಇಲ್ಲದೆ ಹಸವಿನಿಂದ ಚಿತಾ ಗಾರದ ಪಕ್ಕದಲ್ಲಿಯೇ ನಿತ್ರಾಣ ಸ್ಥಿತಿಯಲ್ಲಿ ಮಲಗಿದ್ದರು..
ಗುರುವಾರ 11 ಗಂಟೆ ಸಮಯಕ್ಕೆ ಕುಂಬಾರಕೇರಿ ಲಕ್ಷ್ಮೇಶ್ವರದ ನಿವಾಸಿಯಾದ ಮೃತ ರವೀಂದ್ರ ಮುರಾರಿ ನಾಯ್ಕ ಇವರ ಅಂತ್ಯ ಸಂಸ್ಕಾರ ಮಾಡಲು ಕುಂಬಾರಕೇರಿ ಹಾಗೂ ಲಕ್ಷ್ಮೇಶ್ವರ ಭಾಗದ ನೂರಾರು ಜನ ಕೋಟೆವಾಡದ ಮುಕ್ತಿದಾಮದಲ್ಲಿ ನೆರದಿದ್ದರು.
ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಒಬ್ಬ ಸರಿಸುಮಾರು 45 ಪ್ರಾಯದ ವ್ಯಕ್ತಿ ತನ್ನ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡು ಚಿತಾಗಾರದ ಅತಿ ಸಮೀಪವೇ ಮಲಗಿಕೊಂಡು ನಿತ್ರಾಣದ ಸ್ಥಿತಿಯಲ್ಲಿರುವುದನ್ನು ಗಮನಿಸಿದ ಮೃತ ರವೀಂದ್ರ ನಾಯ್ಕ್ ಇವರ ಅಂತ್ಯ ಸಂಸ್ಕಾರಕ್ಕೆ ಹೋದ ಕುಂಬಾರಕೇರಿ ಲಕ್ಷ್ಮೇಶ್ವರದ ನಿವಾಸಿಗಳು ಆ ವ್ಯಕ್ತಿಗೆ ಮಾನವೀಯ ದೃಷ್ಟಿಯಲ್ಲಿ ಊಟ ವನ್ನು ನೀಡಿ ಉಪಚಾರ ಮಾಡಿದರು.ಅಷ್ಟೇ ಅಲ್ಲದೆ ಸರ್ಕಾರಿ ಆಂಬುಲೆನ್ಸ್ ಗೆ ಕರೆ ಮಾಡಿ ಆ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕೆ ಬಂದ 108 ಅಂಬುಲೆನ್ಸ್ ಸಿಬ್ಬಂದಿಗಳಿಗೆ ಚಿತಾಗಾರದ ಪಕ್ಕದಲ್ಲಿ ಮಲಗಿದ್ದ ಅನಾರೋಗ್ಯ ಪೀಡಿತ ಆ ವ್ಯಕ್ತಿಯನ್ನು ಅಂಬುಲೆನ್ಸ್ ಗೆ ಸಾಗಿಸಲು ಅರವಿಂದ ನಾಯ್ಕ, ಪಚ್ಚು ನಾಯ್ಕ ರಘುನಾಥ ನಾಯ್ಕ,ಧನಂಜಯ್ ನಾಯ್ಕ್ ,ಸುರೇಶ ನಾಯ್ಕ್ ವರು ನೆರವಾದರು.
ಅಂಕೋಲಾದ ಜನರಲ್ಲಿ ಇನ್ನು ಮಾನವೀಯತೆ ಜೀವಂತವಾಗಿದೆ ಎಂದು ಈ ಘಟನೆ ಸಾಕ್ಷಿಯಾಯಿತು.
ವರದಿ: ಕಿರಣ ಚಂದ್ರಹಾಸ ಗಾಂವಕರ