ಮಿರ್ಜಾನ ಗ್ರಾಮ ದೇವತೆಯಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಿಯ ಬಂಡಿ ಹಬ್ಬದ ಪ್ರಯುಕ್ತ ಶ್ರೀ ಶಾಂತಿಕಾ ಪರಮೇಶ್ವರಿ ಗೆಳೆಯರ ಬಳಗ (ಮಿರ್ಜಾನ) ಹಾಗೂ ರಾಮನಗರದ ಶ್ರೀ ಹುಲಿದೇವರ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ವಿಜೃಂಭಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇದಿಕೆಯಲ್ಲಿ ಪ್ರಮುಖವಾಗಿ ರಣಧೀರ ವೇದಿಕೆ ಕುಮಟಾ ಘಟಕದ ವತಿಯಿಂದ ತಾಲೂಕ ಅಧ್ಯಕ್ಷ ಸಮೀರ್ ಮಿರ್ಜಾನಕರ ನೇತೃತ್ವದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ರ್‍ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿ ದಿಶಾಂತ ದಯಾನಂದ ನಾಯ್ಕ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳಾದ ಕುಮಾರಿ ಮಾದೇವಿ ಮಂಗೇಶ ಗೌಡ, ಕುಮಾರಿ ವೈಷ್ಣವಿ ಬೀರಪ್ಪ ಪಟಗಾರ, ಕುಮಾರಿ ತಸ್ಮಿಯಾ ಮನ್ಸೂರ ಸೈಯದ್ ಹಾಗೂ ದೋಣಿ ನಿರ್ವಾಹಕ ಶ್ರೀ ನಾಗಪ್ಪ ಅಂಬಿಗ ಅವರನ್ನು ಸಹ ಸತ್ಕರಿಸಲಾಯಿತು.
ರಣಧೀರ ವೇದಿಕೆಯ ಈ ಸಮಾಜಮುಖಿ ಸನ್ಮಾನ ಕಾರ್ಯಕ್ರಮವನ್ನು ವಿಶೇಷ ಆಹ್ವಾನಿತರಾದ ರಾಜು ಮಾಸ್ತಿಹಳ್ಳ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಈ ಸಂಯುಕ್ತ ಆಶ್ರಯದ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮೆರುಗನ್ನು ನೀಡುವ ನಿಟ್ಟಿನಲ್ಲಿ ಅಲಗೇರಿಯ ‘ಶ್ರೀ ಸಣ್ಣಮ್ಮ ಬೊಮ್ಮಯ್ಯ ದೇವ ನಾಯ್ಕ ನಾಟ್ಟ ಮಂಡಳಿ’ಯವರಿಂದ ತೃತೀಯ ವರ್ಷದ “ಮಗ ಹೋದರೂ ಮಾಂಗಲ್ಯ ಬೇಕು” ಎಂಬ ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಅದ್ದೂರಿ ಕಾರ್ಯಕ್ರಮವನ್ನು ದೇವರಬಾವಿಯ ಶ್ರೀ ಪ್ರದೀಪ ನಾಯಕ ಅವರು ಉದ್ಘಾಟಿಸಿದರೆ, ಹೊನ್ನಾವರದ ಅಭಿಮಾನ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ಸಂದೀಪ ಪೂಜಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಶ್ರೀಮತಿ ಸುಷ್ಮಾ ರಾಜಗೋಪಾಲ ರೆಡ್ಡಿ, ಶ್ರೀ ಮಹೇಶ ಮೂಡಂಗಿ, ಶ್ರೀ ಮುಖ್ತಿಯಾರ್ ಖಾಜಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಶಾಂತ ಪಿ. ನಾಯ್ಕ, ಶ್ರೀ ಮಂಜುನಾಥ ಎಲ್. ನಾಯ್ಕ ಹಾಗೂ ಅತಿಥಿಗಳಾಗಿ ರಾಮ ಎಸ್. ಪಟಗಾರ, ಮಿರ್ಜಾನದ ಶ್ರೀ ಪುರಂದರ ಗೌಡ, ಶ್ರೀಮತಿ ಮಾಲಾಶ್ರೀ ರಾಜು ನಾಯ್ಕ, ಶ್ರೀಮತಿ ವಿಜಯಾ ಪಟಗಾರ, ಶ್ರೀ ಉಮೇಶ ಅಂಬಿಗ, ಶ್ರೀ ಸಮೀರ ಮಿರ್ಜಾನಕರ ಭಾಗವಹಿಸಿದ್ದರು. ಇದೇ ವೇದಿಕೆಯಲ್ಲಿ ಕಾರ್ಯಕ್ರಮದ ಸಂಘಟಕರಾದ ಗೆಳೆಯರ ಬಳಗ ಹಾಗೂ ಭಜನಾ ಮಂಡಳಿಯ ವತಿಯಿಂದ ಸಾಧಕರಾದ ಬೊಳೆಮನೆ ಮಿರ್ಜಾನದ ಶ್ರೀ ಸಾತು ಉಪ್ಪ ಪಟಗಾರ, ತೆಂಗಿನಗುಂಡಿಯ ಶ್ರೀ ಮಂಜುನಾಥ ತಿಪ್ಪ ಪಟಗಾರ, ಮಾಸೂರಿನ ಶ್ರೀ ಟಾಕೇಶ್ವರ ಕೃಷ್ಣ ಪಟಗಾರ, ಹೆಗಡೆಯ ಶ್ರೀ ಶಿವಪ್ಪ ವಿಠ್ಠಲ ಪಟಗಾರ, ಮಾಸೂರಿನ ಶ್ರೀ ಗಣೇಶ ಜಟ್ಟಪ್ಪ ನಾಯ್ಕ ಹಾಗೂ ರಾಮನಗರ ಮಿರ್ಜಾನದ ಶ್ರೀ ಚಂದ್ರಶೇಖರ ಶಿವಪ್ಪ ನಾಯ್ಕ ಅವರನ್ನು ಸಂಘಟಕರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಇಡೀ ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ರೂಪಿಸಿ, ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕಾರ್ಯಕ್ರಮದ ರೂವಾರಿ ಹಾಗೂ ನಿವೃತ್ತ ಸೈನಿಕರಾದ ಶ್ರೀ ಮಂಜುನಾಥ ನಾಯ್ಕ ಅವರನ್ನು ವೇದಿಕೆಯಲ್ಲಿ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬರ್ಗಿಯ ಶ್ರೀ ಮೋಹನ ನಾಯ್ಕ ಹಾಗೂ ಮಿರ್ಜಾನದ ದಿಶಾಯಿ ಪ್ರಶಾಂತ ದೇಶಭಂಡಾರಿ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸಿ, ಸಭಿಕರ ಗಮನ ಸೆಳೆದರು.
✍️ ವಿಕಾಸ ವಾಹಿನಿ ವರದಿ

