ಅಂಕೋಲಾ ತಾಲೂಕಿನ ಉಳುವರೆಯ ರೇಲ್ವೆ ಬ್ರಿಜ್ ಹತ್ತಿರ ಗಂಗಾವಳಿ ನದಿಯಲ್ಲಿ ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ಗಂಡಸೊಬ್ಬರು ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ದಿನಾಂಕ 27-04-2026 ರಂದು ಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಗಡಗೇರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಿನಾಯಕ ಈಶ್ವರ ಸಿದ್ದಾಪುರ ಅವರು ನೀಡಿದ ದೂರಿನ ಅನ್ವಯ, ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಮತ್ತು ಮುಂದಿನ ಕಾನೂನು ಕ್ರಮಕ್ಕಾಗಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ. 20/2026 (ಕಲಂ. 194 ಬಿ.ಎನ್.ಎಸ್.ಎಸ್-2023) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೃತ ವ್ಯಕ್ತಿಯು ಸುಮಾರು 5 ಅಡಿ 5 ಇಂಚು ಎತ್ತರವಿದ್ದು, ಸದೃಢ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ ದುಂಡನೆಯ ಮುಖವನ್ನು ಹೊಂದಿದ್ದಾನೆ. ಆತನ ಬಲಕೈ ಭುಜದ ಮೇಲೆ ಕಪ್ಪು ಎಳ್ಳು ಕಲೆ ಇದ್ದು, ಮೃತಪಡುವಾಗ ನೀಲಿ ಬಣ್ಣದ ಗೆರೆಯುಳ್ಳ ಬಿಳಿ ಬಣ್ಣದ ಪೂರ್ತಿ ತೋಳಿನ ಶರ್ಟ್ ಧರಿಸಿರುತ್ತಾನೆ.
ಈ ಮೇಲಿನ ಚಹರೆಯುಳ್ಳ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಲಭ್ಯವಿದ್ದಲ್ಲಿ, ಕೂಡಲೇ ಅಂಕೋಲಾ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಲಾಗಿದೆ. ಮಾಹಿತಿಗಾಗಿ ಠಾಣೆಯ ದೂರವಾಣಿ ಸಂಖ್ಯೆ (08388) 220333, ಮೊಬೈಲ್ ಸಂಖ್ಯೆಗಳಾದ 9480805250, 9480805268 ಅಥವಾ ಇಮೇಲ್ ankolakwr@ksp.gov.in ಅನ್ನು ಸಂಪರ್ಕಿಸಬಹುದಾಗಿದೆ.
ವರದಿ: ಸುಪ್ರಿಯಾ ವಿಷ್ಣು ನಾಯ್ಕ

