ಕುಮಟಾ ಪೊಲೀಸರ ದಾಳಿ: 1 ಲಕ್ಷ ಮೌಲ್ಯದ 3 ಕೆ.ಜಿ ಗಾಂಜಾ ವಶ, ಮೂವರು ಅರೆಸ್ಟ್!!

News Desk
1 Min Read

ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಯುವಕರನ್ನೇ ಗುರಿಯಾಗಿಸಿಕೊಂಡು ಹರಡುತ್ತಿದ್ದ ಮಾದಕ ಜಾಲವೊಂದನ್ನು ಕುಮಟಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಮೂರೂರು ಗುಡ್ಡದ ಕಾಗಾಲ ಮಾನೀರ ಬಳಿ ಮಂಗಳವಾರ (ಮಾ. 10) ಮಧ್ಯಾಹ್ನ 1:05 ರ ಸುಮಾರಿಗೆ ದಾಳಿ ನಡೆಸಿ, ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 3 ಕೆ.ಜಿ. ಗಾಂಜಾ, ಗಾಂಜಾ ಮಾರಾಟಕ್ಕೆ ಬಳಸುತ್ತಿದ್ದ 1 ಲಕ್ಷ ರೂ. ಮೌಲ್ಯದ ಸ್ಕೂಟರ್ ಹಾಗೂ 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಕುಮಟಾ ತಾಲೂಕಿನ ಸಾಂತಗಲ್ ನಿವಾಸಿ, ಹೋಟೆಲ್ ಕಾರ್ಮಿಕ ಫ್ರಾಂಕ್ಲಿನ್ ಅಂಭೋಜ್ ಡಿಸೋಜಾ (21), ಶಿರಸಿಯ ಅರೆಕೊಪ್ಪ ನಿವಾಸಿಗಳಾದ ನಿಖಿಲ್ ಪರಶುರಾಮ ಸಾವಂತ (26) ಹಾಗೂ ಮಧುಕೇಶ್ವರ ಜೈ ಬಾದೂರ್ ಕಾರ್ಗಿ (29) ಎಂಬುವವರನ್ನು ಬಂಧಿಸಲಾಗಿದೆ. ಈ ಮೂವರು ಆರೋಪಿಗಳನ್ನು ಕಾರವಾರದ ಮಾನ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಕುಮಟಾ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ಮಯೂರ ಪಟ್ಟಣಶೆಟ್ಟಿ ಮತ್ತು ಸಿಬ್ಬಂದಿಗಳಾದ ಗಣೇಶ ನಾಯ್ಕ, ಸಂತೋಷ ಚನ್ನಣ್ಣನವರ, ಪ್ರದೀಪ ನಾಯಕ, ದಯಾನಂದ ನಾಯ್ಕ ಅವರು ನಡೆಸಿದ್ದಾರೆ.

ಗಾಂಜಾ ಪೆಡ್ಲರ್‌ಗಳ ಬಂಧನಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ತಂಡವನ್ನು ಉತ್ತರ ಕನ್ನಡ ಜಿಲ್ಲಾ ಎಸ್.ಪಿ. ದೀಪನ್ ಎಂ. ಎನ್., ಹೆಚ್ಚುವರಿ ಎಸ್.ಪಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್ಪಿ ಬಿ. ಗಿರೀಶ್ ಅವರು ಅಭಿನಂದಿಸಿದ್ದಾರೆ.

Share This Article
Leave a Comment