ಅಂಕೋಲಾದಲ್ಲಿ ಮುಕ್ತ ತಂಬಾಕು ಮಾರಾಟದ ವಿರುದ್ಧ ದಾಳಿ ಶುರು: ಆರೋಗ್ಯ ಇಲಾಖೆಯ ಗಂಭೀರ ಕ್ರಮ..

News Desk
1 Min Read

ಅಂಕೋಲಾ, ಆ. 7: ತಾಲೂಕಿನಲ್ಲಿ ತಂಬಾಕು ಸೇವನೆಯ ನಿಯಂತ್ರಣ ಹಾಗೂ ಮುಕ್ತ ತಂಬಾಕು ಮಾರಾಟವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಕಟ್ಟು ನಿಟ್ಟಿನ ಕ್ರಮಕ್ಕೆ ಕೈಹಾಕಿದ್ದು, ಇತರೆ ಇಲಾಖೆಗಳ ಸಹಕಾರದಿಂದ ದಾಳಿಗಳು ಹಾಗೂ ದಂಡ ವಿಧಿಸುವ ಕಾರ್ಯ ಜೋರಾಗಿಯೇ ಮುಂದುವರಿದಿದೆ. ಕೋಟ್ಪಾ ಕಾಯಿದೆ (COTPA) ಜಾರಿಗೆ ಪ್ರತಿ ತಿಂಗಳ ಸಭೆಗಳನ್ನು ನಡೆಸಿ, ಎಲ್ಲ ಇಲಾಖೆಗಳ ಸಹಯೋಗದಿಂದ ಜಾಗೃತಿ ಕಾರ್ಯಕ್ರಮಗಳು ಪ್ರಾರಂಭವಾಗಿವೆ.

ಅಂಕೋಲಾ ತಹಸೀಲ್ದಾರರು ತಾವೂ ಮುಂದಾಗಿದ್ದು, ತಂಬಾಕು ಮುಕ್ತ ಅಂಕೋಲಾ ನಿರ್ಮಾಣಕ್ಕೆ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಲ್ಲೂಕಿನ ಪ್ರತಿ ಶಾಲೆಯ ಸುತ್ತಲೂ ತಂಬಾಕು ಮಾರಾಟ ನಿಷೇಧ ವಲಯವನ್ನು ಗುರುತಿಸಿ, ನಿರ್ಬಂಧಿತ ಪ್ರದೇಶದ ಸೂಚನಾ ಫಲಕಗಳನ್ನು ಅಳವಡಿಸುವ ಜತೆಗೆ ಸಮಗ್ರ ಸರ್ವೇಕ್ಷಣೆಯೂ ಕೈಗೊಳ್ಳಲಾಗಿದೆ.

ಈ ಅಭಿಯಾನದ ಭಾಗವಾಗಿ ಶಾಲಾ ಮಕ್ಕಳ ಮೂಲಕ ಜಾಥಾ ಹಾಗೂ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ತಂಬಾಕುವಿನ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಂಬಾಕು ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಶಾಲೆಗಳ ಸುತ್ತಮುತ್ತ ಇಂತಹ ಮಾರಾಟ ಕಂಡುಬಂದಲ್ಲಿ, ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಜನತೆಗೆ ಕೋರಲಾಗಿದೆ.

“ಮಹತ್ತ್ವದ ಸೂಚನೆ ನೀಡಿದ ತಾಲೂಕಾ ಆರೋಗ್ಯಾಧಿಕಾರಿಗಳು, ವಿಧಿಸಲಾಗುವ ದಂಡ ಭಾರೀ ಆಗಿರುತ್ತಿದ್ದು, ಅಗತ್ಯವಿದ್ದರೆ ಅಂಗಡಿ ಮುಂಗಟ್ಟುಗಳನ್ನು ಸೀಜ್ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.

Share This Article