ಅಂಕೋಲಾ: ಬುಧವಾರ ದಿನಾಂಕ 13 ರಂದು ಅಂಕೋಲಾ ರೂರಲ್ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತ ತಪಾಸಣಾ ಶಿಬಿರವನ್ನು ಶಾಂತಿ ಮೆಡಿಕಲ್ ಲ್ಯಾಬೋರೇಟರಿ (ಕೆ.ಸಿ. ರಸ್ತೆ, ಅಂಕೋಲಾ) ಯಲ್ಲಿ ಬೆಳಿಗ್ಗೆ 9.00 ರಿಂದ 1.00 ಗಂಟೆಯವರೆಗೆ ಆಯೋಜಿಸಲಾಗಿದೆ.
ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ರೋಟರಿ ಅಧ್ಯಕ್ಷೆ ಶ್ರೀಮತಿ ಪುಷ್ಪಲತಾ ನಾಯಕ (ಸಂಪರ್ಕ: 9482816517) ಮನವಿ ಮಾಡಿದ್ದಾರೆ. ರಕ್ತದಾನ ಮಾಡುವವರಿಗೆ ಬ್ಲಡ್ ಕೊಲೆಸ್ಟ್ರಾಲ್, ಲಿಪಿಡ್ ಪ್ರೊಫೈಲ್ ಹಾಗೂ ಬ್ಲಡ್ ಶುಗರ್ ತಪಾಸಣೆಗಳನ್ನು ಉಚಿತವಾಗಿ ನಡೆಸಿಕೊಡಲಾಗುವುದು ಎಂದು ದಂತ ವೈದ್ಯ ಡಾ. ಸಂಜು ನಾಯಕ ತಿಳಿಸಿದ್ದಾರೆ.
ಈ ಶಿಬಿರವನ್ನು ಉತ್ತರ ಕನ್ನಡ ಬ್ಲಡ್ ಬ್ಯಾಂಕ್, ಹೆಲ್ತ್ ಸರ್ವೀಸ್ ಸೊಸೈಟಿ ಹಾಗೂ ಶಾಂತಿ ಮೆಡಿಕಲ್ ಲ್ಯಾಬೋರೇಟರಿಯ ಸಹಯೋಗದಲ್ಲಿ ಅಂಕೋಲಾ ರೂರಲ್ ರೋಟರಿ ಕ್ಲಬ್ ಹಮ್ಮಿಕೊಂಡಿದೆ ಎಂದು ರೋಟರಿ ಖಜಾಂಚಿ ನಾಗರಾಜ್ ನಾಯಕ ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ರೋಟರಿ ಸದಸ್ಯರಾದ ಗುರು ಐಗಳ ಹಾಗೂ ರವಿ ನಾಯಕ ಉಪಸ್ಥಿತರಿದ್ದರು.
ವರದಿ: ಕಿರಣ ಗಾಂವಕರ

