ನದಿಬಾಗದ ಉಮೇಶ ಶೇಷು ನಾಯ್ಕರ ಅಕಾಲಿಕ ನಿಧನ; ಊರಲ್ಲಿ ಶೋಕದ ವಾತಾವರಣ..

News Desk
0 Min Read

ಅಂಕೋಲಾ: ತಾಲೂಕಿನ ನದಿಬಾಗದ ನಿವಾಸಿ ಉಮೇಶ ಶೇಷು ನಾಯ್ಕ ಅವರು ಇಂದು ಅಕಾಲಿಕವಾಗಿ ನಿಧನರಾದರು. ನಾಲ್ಕು ಗ್ರಾಮದ ಜಮೀನಿನ ಹಕ್ಕುದಾರರಾಗಿದ್ದ ಶೇಷು ರುಮ್ಮು ನಾಯ್ಕರ ಹಿರಿಯ ಪುತ್ರರಾಗಿದ್ದ ಇವರು, ಅತಿ ಸಣ್ಣ ವಯಸ್ಸಿನಲ್ಲಿ ಜೀವನಯಾನವನ್ನು ಮುಗಿಸಿದ ಸುದ್ದಿ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಶಾಂತ, ಮೃದುಸ್ವಭಾವಿ ಹಾಗೂ ಎಲ್ಲರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುತ್ತಿದ್ದ ಉಮೇಶ ನಾಯ್ಕ ಅವರು ಅಂಕೋಲಾ ಪಟ್ಟಣದಲ್ಲಿ ಹೊಟೇಲ್ ವ್ಯವಹಾರವನ್ನು ನಡೆಸುತ್ತಿದ್ದರು. ಕುಟುಂಬಕ್ಕಾಗಿ ಪರಿಶ್ರಮಪಟ್ಟು ಬದುಕಿದ್ದ ಇವರ ಅಗಲಿಕೆಯಿಂದ ಬಂಧುಬಳಗ, ಸ್ನೇಹಿತರು ಹಾಗೂ ಊರಿನ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ಮೃತರು ತಂದೆ-ತಾಯಿ, ತಮ್ಮಂದಿರು, ತಂಗಿಯರು ಸೇರಿದಂತೆ ಅನೇಕ ಬಂಧುಬಳಗವನ್ನು ಅಗಲಿದ್ದಾರೆ

Share This Article