ಅಪಾಯಕಾರಿ ಹೊಂಡವನ್ನು ಮುಚ್ಚಿಸಲು ರಿಕ್ಷಾ ಚಾಲಕನ ಮನವಿ – ತ್ವರಿತವಾಗಿ ಸ್ಪಂದಿಸಿದ ವಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ..

News Desk
2 Min Read

ಅಂಕೋಲಾ : ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಿಂದ ಜಮಗೋಡ್ ರೈಲ್ವೆ ನಿಲ್ದಾಣಕ್ಕೆ ಹೋಗುವ ತಿರುವಿನ ಪ್ರಾರಂಭದ ಸಿಮೆಂಟ್ ರಸ್ತೆಯ ಬಲ ಭಾಗದಲ್ಲಿ ಲಗತ್ತಾಗಿ ಚೌಕಾಕಾರದ ಗುಂಡಿಗಳನ್ನು ಟೆಲಿಕಾಂ ನವರು ತೆರೆದು. ತಮ್ಮ್ ಕೆಲಸ ಮುಗಿದ ನಂತರ ಗುಂಡಿಯನ್ನು ಮುಚ್ಚದೇ ನಿರ್ಲಕ್ಷ ತೋರಿ ಹಾಗೇ ಬಿಟ್ಟಿದ್ದರು..

ಆ ಗುಂಡಿಯಲ್ಲಿ ಸುಮಾರು ಚಿಕ್ಕ-ಚಿಕ್ಕ ಗಿಡಗಳು ಬೆಳೆದು ಎಲೆಗಳಿಂದ ಆವರಿಸಿಕೊಂಡಿತ್ತು. ರಾತ್ರಿ ಸಮಯದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೆಚ್ಚಾಗಿ ಸಂಚರಿಸುವ ವಾಹನ ಸವಾರರಿಗೆ ರಸ್ತೆ ಲಗತ್ತಾಗಿಯೇ ಗುಂಡಿ ಇರುವುದು ಹೆಚ್ಚಾಗಿ ಗಮನಕ್ಕೆ ಬರದೆ ಇರುವ ಕಾರಣ ಒಮ್ಮೊಮ್ಮೆ ರಸ್ತೆಯ ಎರಡು ಭಾಗದಲ್ಲಿ ವಾಹನಗಳು ಬಂದಾಗ ರಸ್ತೆ ಪಕ್ಕದಲ್ಲಿ ವಾಹನ ಸಂಚರಿಸಲು ಹೋಗಿ ಅಪಾಯಕಾರಿ ಗುಂಡಿ ಯಿಂದ ನಿಯಂತ್ರಣ ತಪ್ಪಿ ವಾಹನದ ಜೊತೆ ವಾಹನ ಸವಾರರಿಗೂ ಅನೇಕ ಬಾರಿ ಅಪಘಾತವಾದ ಘಟನೆ ನಡೆದಿದೆ ಎನ್ನಲಾಗಿದೆ..

ಸದ್ರಿ ಅಪಾಯಕಾರಿ ಗುಂಡಿಯಿಂದ ಯಾವಾಗಲಾದರೂ ವಾಹನ ಸವಾರರಿಗೆ ಅಪಾಯವಾಗುದು ಖಚಿತ ಎಂದು ಅರಿತ ರಿಕ್ಷಾ ಚಾಲಕ ದೀಪಕ ನಾಯ್ಕ ಇವರು ಗುಂಡಿಯ ಫೋಟೋ ಸಮೇತ ವಿಕಾಸ ವಾಹಿನಿ ಮೂಲಕ ವಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರೀಶ್ ನಾಯಕ ಇವರ ಗಮನಕ್ಕೆ ನಿನ್ನೆ ದಿನಾಂಕ 2-04-2025ರಂದು ರಾತ್ರಿ ವಾಟ್ಸಪ್ ಮೂಲಕ ಸಂದೇಶ ರವಾನಿಸಿ ಸಮಸ್ಯೆ ಗಂಭೀರತೆ ಬಗ್ಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ಸದರಿ ರಿಕ್ಷಾ ಚಾಲಕನ ಮನವಿಗೆ ಸ್ಪಂದಿಸಿ ವಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಮ್ಮ್ ಗ್ರಾಮ ಪಂಚಾಯತ ಕಾರ್ಯದರ್ಶಿ ವಸಂತ ನಾಯ್ಕ ಹಾಗೂ ಸ್ಚಚ್ಚತಾಗಾರ ನಾಗೇಂದ್ರ ನಾಯಕ ರವರಿಗೆ ಸೂಚನೆ ಕೊಟ್ಟು ತ್ವರಿತವಾಗಿ ಇಂದು ಬೆಳಿಗ್ಗೆಯೇ ಗುಂಡಿಯನ್ನು ಮುಚ್ಚಿಸಿದ್ದಾರೆ.

ಸಾರ್ವಜನಿಕರ ಅರ್ಜಿಗಳು ಕಚೇರಿಗೆ ಬಂದಾಗ ಯಾವುದೊ ಕುಂಟು ನೆಪ ಹೇಳಿ ನುಣುಚಿಕೊಳ್ಳುವ ಅಧಿಕಾರಿಗಳ ಮಧ್ಯೆ, ಕೇವಲ ವಾಟ್ಸಪ್ ಮೂಲಕ ಬಂದ ಮನವಿಗೆ 24 ಗಂಟೆಯಲ್ಲಿ ಪರಿಹಾರ ಒದಗಿಸಿದ ವಂದಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಿರೀಶ್ ನಾಯಕರ ಕರ್ತವ್ಯ ಪ್ರಜ್ಞೆಯನ್ನು ರಿಕ್ಷಾ ಚಾಲಕ ದೀಪಕ್ ನಾಯ್ಕ ಇವರು ಆಟೋ ರಿಕ್ಷಾ ಚಾಲಕರು ಹಾಗೂ ಮಾಲಕರ ಪರವಾಗಿ ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಜೊತೆಗೆ ಸಾರ್ವಜನಿಕರ ಪರವಾಗಿ ವಿಕಾಸ ವಾಹಿನಿಯು ಕೂಡ ಇಂತಹ ದಕ್ಷ ಅಧಿಕಾರಿಗಳಿಗೆ ಶ್ಲಾಘನೆ ವ್ಯಕ್ತಪಡಿಸುತ್ತದೆ.

……

Share This Article
Leave a Comment