ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಂಕೋಲಾ ಘಟಕದ ಆದರ್ಶ ವ್ಯಕ್ತಿತ್ವದ ದಕ್ಷ ಅಧಿಕಾರಿ ದತ್ತಾತ್ರೇಯ ನಾರಾಯಣ ನಾಯ್ಕರ ನಿವೃತ್ತಿಗ್ಗೆ ಶುಭ ಹಾರೈಕೆ.

News Desk
4 Min Read

ಅಂಕೋಲಾ : ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿ ಸುದೀರ್ಘ 38 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಾರವಾರ, ಕುಮಟಾ,ಯಲ್ಲಾಪುರ ಘಟಕದಲ್ಲಿ ಕೆಲಸವನ್ನು ನಿರ್ವಹಿಸಿ ಅಂತಿಮವಾಗಿ ಅಂಕೋಲ ಘಟಕದಲ್ಲಿ ಸಿಬ್ಬಂದಿ ಮೇಲ್ವಿಚಾರಕರಾಗಿ ಬಡ್ತಿ ಪಡೆದು ಸತತ ಮೂರುವರೆ ವರ್ಷಗಳ ಕಾಲ ಇಲ್ಲಿನ ಘಟಕದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾಗುತ್ತಿರುವ ದತ್ತಾತ್ರೇಯ ನಾರಾಯಣ್ ನಾಯ್ಕ್ (D.N NAIk)ಗೌರವಾನ್ವಿತರ ನಿವೃತ್ತಿ ಜೀವನಕ್ಕೆ ಶುಭಾಶಯ ಕೋರಿ ಅಂಕೋಲ ಘಟಕದ ಸಿಬ್ಬಂದಿ ವರ್ಗ ದಿನಾಂಕ 28-02-2025ರಂದು ಅದ್ದೂರಿಯಾಗಿ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡ್ಡು,ತಮ್ಮ ಬಿಡುವಿಲ್ಲದ ಒತ್ತಡದ ಕೆಲಸದಲ್ಲಿಯೂ ಕೂಡ ಕೆಲವು ಚಾಲಕ ನಿರ್ವಾಹಕರು ತಮ್ಮ ಕೆಲಸಕ್ಕೆ ರಜೆ ಹಾಕಿ, ಆಡಳಿತಾತ್ಮಕ ದೃಷ್ಟಿ ಅಲ್ಲದೆ ದತ್ತಾತ್ರೇಯ ನಾಯ್ಕರ ಮೇಲಿನ ಅಪಾರ ಅಭಿಮಾನ ಪ್ರೀತಿಯಿಂದ ಸಂಸ್ಥೆಗೆ ನೀಡಿರುವ ನಿಸ್ವಾರ್ಥ ಸೇವೆಗೆ ತಲೆಬಾಗಿ ಒಕ್ಕೋರಲಿನಿಂದ ಸೇರಿ ನಿವೃತ್ತಿ ಜೀವನಕ್ಕೆ ಶುಭಾಶಯ ಕೋರಿದರು.

ಸಜ್ಜನ ಮನೆತನದ ದತ್ತಾತ್ರೇಯ ನಾರಾಯಣ ನಾಯ್ಕರು ಮೂಲತಹ ಕುಮಟಾ ತಾಲೂಕಿನ ಕೋನಳ್ಳಿ ಗ್ರಾಮದವರು. ಇವರು ಪ್ರಥಮವಾಗಿ 1987 ರಲ್ಲಿ ಕಾರವಾರ ಘಟಕದಲ್ಲಿ ಕಿರಿಯ ಸಹಾಯಕ ಅಧಿಕಾರಿಯಾಗಿ ಕೆಲಸವನ್ನು ನಿರ್ವಹಿಸಿದ್ದಾರೆ. ಅಂದಿನ ಕಡಿಮೆ ವೇತನದಲ್ಲಿಯೂ ಕೂಡ ತಮ್ಮ2 ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿದ್ದಾರೆ. ಇವರ ಮಗಳು MSC BAd ಆಗಿದ್ದು, ಮಗ ಈಗ ಜರ್ಮನಿ ದೇಶದಲ್ಲಿ ಭೌತ ವಿಜ್ಞಾನ ವಿಷಯದಲ್ಲಿ PHD ಮಾಡುತ್ತಿದ್ದಾರೆ.

ಅಂಕೋಲ ಘಟಕದಲ್ಲಿ ಸಿಬ್ಬಂದಿ ಮೇಲ್ವಿಚಾರಕರಾಗಿ ಕೆಲಸದ ಜೊತೆ ಲೆಕ್ಕಪತ್ರ ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸಿ ಸೈ ಎನಿಸಿಕೊಂಡು . ಬಸ್ ನಿಲ್ದಾಣದ ವಾಣಿಜ್ಯ ಉದ್ದಿಮೆ ಅಂಗಡಿಗಳ ಬಾಡಿಗೆ ಹಣವನ್ನು ಬಾಡಿಗೆದಾರದಿಂದ ಸಮಯಕ್ಕೆ ಸರಿಯಾಗಿ ಸಂಸ್ಥೆಗೆ ತುಂಬಿಸಿದ್ದು. ಜೊತೆಗೆ ಹೆಚ್ಚುವರಿಯಾಗಿ ಜವಾಬ್ದಾರಿ ನೀಡಿದ ಗೋಕರ್ಣ ಬಸ್ ಸ್ಟಾಂಡ್ ನಲ್ಲಿ ನ ವಾಣಿಜ್ಯ ಮಳಗೆ ಗಳ ಬಾಕಿ ಇರುವ ಎಲ್ಲ ಹಣವನ್ನು ಸಂಸ್ಥೆಗೆ ತುಂಬಿಸಿಕೊಂಡು ಮೇಲಾಧಿಕಾರಿಗಳ ಮೆಚ್ಚುಗೆಗೆ ಕಾರಣರಾಗಿದ್ದರು.

ದತ್ತಾತ್ರೇಯ ನಾಯ್ಕರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ತೊಂದರೆ ತೊಡಕುಗಳು ಬಂದಾಗ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಜೊತೆಗೆ ತಮ್ಮ ಘಟಕದಲ್ಲಿ ಕಿರಿಯ ಹುದ್ದೆಯ ಅಧಿಕಾರಿಗಳಿಗೂ ಕೂಡ ಯಾವುದೇ ಸಮಸ್ಯೆಗಳು ಬಂದಾಗ ತಮ್ಮ ಅನುಭವದ ಜ್ಞಾನವನ್ನು ದಾರೆ ಎರೆದು ಅವರಿಗೆ ತರಬೇತಿ ನೀಡುವುದರೊಂದಿಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಲು ಕಾರಣಿಭೂತರಾಗಿದ್ದರು.

ಘಟಕದ ಹೆಣ್ಣು ಮಕ್ಕಳನ್ನು ತಮ್ಮ ಮಗಳಂತೆ ಕಾಣುತ್ತಿದ್ದ ದತ್ತಾತ್ರೇಯ ನಾಯ್ಕರು – ನಿವೃತ್ತಿ ಜೀವನಕ್ಕೆ ಶುಭವಾಗಲಿ ಘಟಕ ವ್ಯವಸ್ಥಾಪಕರು-ಚೈತನ್ಯ ಅಗಳಗಟ್ಟಿ

ಅಂಕೋಲಾ ಘಟಕದಲ್ಲಿ ಏರ್ಪಡಿಸಿದ್ದ ದತ್ತಾತ್ರೇಯ ನಾಯ್ಕ್ ನಿವೃತ್ತಿ ಜೀವನಕ್ಕೆ ಶುಭ ಕೋರಿ ಮಾತನಾಡಿದ ಘಟಕ ವ್ಯವಸ್ಥಾಪಕಿ ಚೈತನ್ಯ ಅಗಳಗಟ್ಟಿಯವರು ತಾನು ಅಂಕೋಲದಲ್ಲಿ ಘಟಕ ವ್ಯವಸ್ಥಾಪಕಿಯಾಗಿ ಬಂದಾಗ ತನಗೆ ಯಾವುದೇ ಚಿಕ್ಕ ಚಿಕ್ಕ ಆಡಳಿತಾತ್ಮಕ ವಿಷಯದಲ್ಲಿ ಅನುಮಾನಗಳು ಇದ್ದಾಗ ದತ್ತಾತ್ರೇಯ ನಾಯ್ಕ ರಿಂದ ಹೆಚ್ಚಾಗಿ ಸಲಹೆಯನ್ನು ಪಡೆದುಕೊಳ್ಳುತ್ತಿದ್ದೆ. ಇವರು ನಮ್ಮತಂದೆಯ ಸಮಾನರು,ಯಾವಾಗ್ಲೂ ದತ್ತಾತ್ರೇಯ ನಾಯ್ಕರು ಘಟಕದ ಮಹಿಳಾ ಅಧಿಕಾರಿಗಳನ್ನು ತಮ್ಮ ಮಗಳಂತೆ ಕಾಣುತ್ತಿದ್ದರು. ನಾನು ಅವರಿಂದ ತಾಳ್ಮೆಯನ್ನು ಕಲಿತಿದ್ದೇನೆ. ಅವರ ಮಾರ್ಗದರ್ಶನ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅವರು ನಮ್ಮ ಘಟಕದಲ್ಲಿ ಕೆಲಸ ಮಾಡಿದ್ದು ನಮ್ಮ ಪುಣ್ಯ. ದತ್ತಾತ್ರೇಯ ನಾಯ್ಕ ರ ಬೆನ್ನೆಲುಬಾಗಿ ಅವರ ಪತ್ನಿಯ ಪ್ರೋತ್ಸಾಹ ಇದ್ದು ಅವರಿಗೂ ಒಳ್ಳೆಯದಾಗಲಿ.ಎಂದು ನಿವೃತ್ತ ಜೀವನಕ್ಕೆ ಶುಭ ಕೋರಿದರು.

ಇದೇ ಸಂದರ್ಭದಲ್ಲಿ ಅಂಕೋಲ ಘಟಕದ ಸಂಚಾರ ಅಧೀಕ್ಷಕರಾದ ಶಿವಾನಂದ ನಾಯ್ಕರು ತಮ್ಮ ಹಾಗೂ ದತ್ತಾತ್ರೇಯ ನಾಯ್ಕರ ಒಡನಾಟದ ಬಗ್ಗೆ, ಕೆಲಸದಲ್ಲಿರುವ ಬದ್ಧತೆ,ಪ್ರಾಮಾಣಿಕತೆ, ಶಿಸ್ತನ್ನು ವೇದಿಕೆಯಲ್ಲಿ ಹಂಚಿಕೊಂಡರು.

ವೇದಿಕೆಯಲ್ಲಿದ್ದ ಸಹಾಯಕ ಕಾರ್ಯ ಅಧೀಕ್ಷಕ ಅಧಿಕಾರಿ ಎಂಎಲ್ ನಾಯ್ಕ್ ರವರು ಮಾತನಾಡಿ ದತ್ತಾತ್ರೇಯ ನಾಯ್ಕರು ಅತ್ಯುತ್ತಮ ಕೆಲಸಗಾರ, ಇವರ ಕರ್ತವ್ಯದಲ್ಲಿರುವ ಪ್ರಾಮಾಣಿಕ ನಿಷ್ಠೆ ನಮ್ಮನ್ನು ಯಾವತ್ತು ನೆನಪಿಸುತ್ತದೆ. ಇವರ ನಿವೃತ್ತಿ ಜೀವನಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಪತ್ರಕರ್ತರ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ ದತ್ತಾತ್ರೇಯ ನಾಯ್ಕ್ ರಿಗೆ ವಯಸ್ಸಾದಂತೆ ಕಾಣುವುದಿಲ್ಲ. ಈಗಲೂ ಅವರು ಲವಲವಿಕೆಯಿಂದ ಇದ್ದಾರೆ.ಯಾರು ಬೇರೆಯವರ ಕೆಡಕನ್ನು ಬಯಸುದಿಲ್ಲವೋ. ತಮ್ಮ ಬಗ್ಗೆ ಮಾತೃ ತಾವು ಯೋಚನೆ ಮಾಡುತ್ತಾರೋ ಅಂತ ವ್ಯಕ್ತಿಗಳು ಮಾತ್ರ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂಬುದರ ಅರ್ಥದೊಂದಿಗೆ ತಮ್ಮ ಅನಿಸಿಕೆಯನ್ನು ಮಾತನಾಡಿ ನಿವೃತ್ತಿ ಜೀವನಕ್ಕೆ ಶುಭ ಕೋರಿದರು.

ಘಟಕದ ಹಿರಿಯ ಕಿರಿಯ ಅಧಿಕಾರಿಗಳು, ಚಾಲಕ ನಿರ್ವಾಹಕರು ಸೇರಿ ದತ್ತಾತ್ರೇಯ ನಾಯ್ಕ ಇವರಿಗೆ ತಲೆಗೆ ಮೈಸೂರು ಪೇಟ,ಸಾಲುಹೊದಿಸಿ, ಫಲ ಪುಷ್ಪ ಹಾರ ಸೇರಿದಂತೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಜೊತೆಗೆ ದತ್ತಾತ್ರೇಯ ನಾಯ್ಕ್ ರವರ ಧರ್ಮಪತ್ನಿಗೂ ಹಣೆಗೆ ಅರಿಶಿನ ಕುಂಕುಮ ಹಚ್ಚುವುದರ ಮೂಲಕ ಆತ್ಮೀಯವಾಗಿ ಗೌರವಯೂತ ವಾಗಿ ಸನ್ಮಾನಿಸಿದರು.

ಸದರಿ ಕಾರ್ಯಕ್ರಮವನ್ನು ದಿಲೀಪ್ ನಾಯ್ಕ, ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಇವರ ನೇತೃತ್ವದಲ್ಲಿ ಸಂಘಟಿಸಿದ್ದು. ಘಟಕ ವ್ಯವಸ್ಥಾಪಕ ಚೈತನ್ಯ ಅಗಳಗಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.ಸಾಗರ ಎಸ್ ನಾಯ್ಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಸದರಿ ಕಾರ್ಯಕ್ರಮದಲ್ಲಿ ರಾಜು ನಾಯಕ್, ಪ್ರತಿಮಾ ಶೆಟ್ಟಿ, ವೇದ ನಾಯ್ಕ್, ಮನೋಜ, ಮನೀಷ, ಏಜಾಜ್ ಖಾನ್, ಸೇರಿದಂತೆ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಹಾಲಕ್ಷ್ಮಿ ನಾಯ್ಕ ವಂದನಾರ್ಪಣೆ ಮಾಡಿದರು.

ವರದಿ: ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment