
ವರದಿ : ಕಿರಣ ಗಾಂವಕರ
ಉತ್ತರ ಕನ್ನಡ : ನ್ಯಾಯ ಎಲ್ಲಿದೇ.. ಎಲ್ಲಿದ್ದೀಯೋ ನ್ಯಾಯ. ಬಡವನು ನ್ಯಾಯ ಕೇಳುವುದೇ ಅನ್ಯಾಯ.. ದ್ವಾರಕೀಶ್ ಅಭಿನಯದ ಈ ಹಾಡು ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಅಧಿಕಾರಿಗಳ ದೌರ್ಜನ್ಯವನ್ನು ಸಾದರಪಡಿಸುತ್ತದೆ.
ಕರ್ತವ್ಯ ಮತ್ತು ಸಮಯ ಪ್ರಜ್ಞೆ ಹಾಗೂ ವಿವೇಚನಾಯುತ ವರ್ತನೆಯನ್ನು ತೋರಿಸಬೇಕಾದ ಪೊಲೀಸ್ ಅಧಿಕಾರಿಗಳು ನ್ಯಾಯ ಕೇಳಲು ಬಂದ ದೀನರು ದುರ್ಬಲರಿಗೆ ರಕ್ಷಣೆ ಒದಗಿಸದೆ ಕೇವಲ ಬಲಿಷ್ಠರು, ಹಣವಂತರಿಗೆ ಮಾತ್ರ ಮಣೆ ಹಾಕುತ್ತಾರೆ ಎನ್ನುವ ಬಲವಾದ ಆಪಾದನೆ ಇದೆ.
ವಿಷಯಕ್ಕೆ ಬರೋಣ : ಉತ್ತರ ಕನ್ನಡ ಜಿಲ್ಲೆಯ ಠಾಣೆಯೊಂದರಲ್ಲಿ ಫೈನಾನ್ಸ್ ಮಾಲಿಕನೊಬ್ಬ ಗ್ರಾಹಕರ ಪಿಕ್ಸೆಡ್ ಡಿಪೋಸಿಟ್ ಇಟ್ಟಿದ್ದ ಬರೋಬ್ಬರಿ 25 ಲಕ್ಷ ಹಣವನ್ನು ನೀಡದೆ ವಂಚನೆ ಮಾಡುತ್ತಿರುವ ಕುರಿತು ತಾಲೂಕು ಕಾನೂನು ಸೇವಾ ಸಮಿತಿಯಲ್ಲಿ ದೂರು ದಾಖಲಿಸಿದ್ದರು. ಸದರಿದೂರಿಗೆ ಸಂಬಂಧಪಟ್ಟಂತೆ ಫೈನಾನ್ಸ್ ಮಾಲೀಕನಿಗೆ ಬರೋಬ್ಬರಿ 5 ನೋಟಿಸ್ ಗಳನ್ನು ಕಳುಹಿಸಿದರು ಫೈನಾನ್ಸ್ ಮಾಲಿಕ ನ್ಯಾಯಾಲಯಕ್ಕೆ ಹಾಜರಾಗದೆ ನ್ಯಾಯಾಂಗದ ಸ್ಪಷ್ಟ ಉಲ್ಲಂಘನೆಯನ್ನು ಮಾಡಿದ್ದ , ಫೈನಾನ್ಸ್ ಮಾಲಿಕ ಪ್ರಭಾವಿಯಾಗಿದ್ದು ದಿಕ್ಕು ತೋಚದೆ ಗ್ರಾಹಕ ಪೊಲೀಸ್ ಠಾಣೆ ಮೆಟ್ಟಿಲನ್ನು ಏರಿದ್ದ, ಠಾಣೆಯಲ್ಲಿ ಪೊಲೀಸರು FIR ದಾಖಲಿಸದೆ ಲೈಟ್ ಪೆಟಿಷನನ್ನು ತೆಗೆದುಕೊಂಡು ದೂರಿಗೆ ಸ್ವೀಕೃತಿ ನೀಡಿದ್ದರೂ.
ದೂರನ್ನು ದಾಖಲಿಸಿಕೊಂಡ್ದು ವಿಚಾರಣೆಗೆ ಬರುವಂತೆ ಫೈನಾನ್ಸ್ ಮಾಲಿಕನಿಗೆ ಪೊಲೀಸ್ ಠಾಣೆಯಿಂದ ಕರೆ ಹೋಗಿತ್ತು. ನ್ಯಾಯಾಲಯವು ಐದು ಸಲ ವಿಚಾರಣೆಗೆ ಬರುವಂತೆ ನೋಟಿಸ್ ಕಳುಹಿಸಿದರು ಬರದೇ ಇರುವ ವ್ಯಕ್ತಿ ಪೋಲಿಸರ ಒಂದು ಕರೆಗೆ ಓಡೋಡಿ ಬಂದಿದ್ದ. ಗ್ರಾಹಕ ತನಗೆ ಪೊಲೀಸ್ ಅಧಿಕಾರಿಗಳಿಂದ ನ್ಯಾಯ ದೊರಕಿಸಿ ಕೊಡಬಹುದು ಎಂದು ನಿರೀಕ್ಷೆಯಲ್ಲಿದ್ದ.. ವಿಚಾರಣೆ ಸಮಯದಲ್ಲಿ ಠಾಣೆಯ ಸಿಪಿಐ ಹಾಜರಿದ್ದರು. ಹಾಗೂ ಗ್ರಾಹಕ ಕೈ ಚೀಲದಲ್ಲಿ ತನ್ನ ದಾಖಲೆಗಳನ್ನೆಲ್ಲ ತಂದಿದ್ದ . ಫೈನಾನ್ಸ್ ಮಾಲೀಕ ಠಾಣೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದ.
ವಿಚಾರಣೆ ಇನ್ನೇನು ಪ್ರಾರಂಭವಾಗಿತ್ತು. ಸಿಪಿಐ ಸಾಹೇಬರಿಗೆ ಠಾಣೆಯ ASI ದೂರಿನ ಬಗ್ಗೆ ಹೇಳಿದರು. ದೂರು ನೀಡಿದ ಗ್ರಾಹಕನಿಗೆ ನೋಡುತ್ತಲೇ ಏರು ಧ್ವನಿಯಲ್ಲಿ. ಸ*** ಮಗನೇ ಬೋಳಿಮಗನೆ. ನಿನ್ನ ತಾಯಿನ ಹಡ, ನಿನ್ನ ಬಾಯಿಗೆ ಬೂಟು ಇಡುತ್ತೇನೆ , ನೀನ್ಯಾಕೆ ಸ್ಟೇಷನ್ ಗೆ ಬಂದಿದ್ದೀಯಾ ? ಹಣದ ಮ್ಯಾಟರ್ ನಮಗೆ ಸಂಬಂಧ ಇಲ್ಲ ? ನಿನ್ ಮೇಲೆ ಈ ಹಿಂದೆ ಮಟ್ಕಾ ಕೇಸ್ ಇತ್ತಲ್ಲ? ಮತ್ತೆ ನೀನು ಸ್ಟೇಷನ್ ಗೆ ಬಂದಿದ್ದೀಯಾ ? ಇಲ್ಲಿಂದ ಹೊರಟು ಹೋಗು. ಹೀಗೆ ಕೆಟ್ಟ ಕೆಟ್ಟ ಪದಗಳಿಂದ ವಿಚಾರಣೆಗೆ ಬಂದ ದೂರುದಾರನಿಗೆ ಹಿರಿಯ ವ್ಯಕ್ತಿ ಎಂದು ನೋಡದೆ ತೀರಾ ಅವಾಚ್ಯ ಪದಗಳಿಂದ ನಿಂದಿಸಿದ್ದರು.

ಆದರೆ ಇದೆ ಅಧಿಕಾರಿ ಫೈನಾನ್ಸ್ ಮಾಲೀಕನಿಗೆ ಒಂದು ಮಾತು ತುಟಿಪಿಟಿಕ್ ಅನ್ನಲಿಲ್ಲ. ಈ ಘಟನೆಯನ್ನು ನೋಡುತ್ತಿದ್ದ ನನಗೆ ಈ ವರದಿಯ ಪ್ರಾರಂಭದಲ್ಲಿ ಹೇಳಿರುವ ಮಾತು ನೆನಪಿಗೆ ಬಂತು. ದೂರು ನೀಡಿದ ತಪ್ಪಿಗೆ ತಾನೇ ಬಯಸಿಕೊಳ್ಳಬೇಕಾದ ಅನಿವಾರ್ಯತೆ ಅರ್ಜಿದಾರನಿಗೆ ಬಂತು. ಮೊದಲ 25 ಲಕ್ಷ ಕಳೆದುಕೊಂಡ ದುಃಖದಲ್ಲಿ ಇದ್ದ ಆ ಹಿರಿಯ ಜೀವ ನೊಂದು ಪೆಚ್ಚು ಮೊರೆ ಹಾಕಿ ಮನೆಯ ಕಡೆ ಹೋದರು.
ಠಾಣಾಧಿಕಾರಿ ದೌರ್ಜನಕ್ಕೆ ನೊಂದಿರುವ ಅರ್ಜಿದಾರನು ತಾಲೂಕಿನ ಗಲ್ಲಿಯೊಂದರಲ್ಲಿ ಚಿಕ್ಕ ಅಂಗಡಿಯನ್ನು ಜೀವನೋಪಾಯಕ್ಕೆ ಈ ಹಿಂದಿನಿಂದಲೂ ನಡೆಸುತ್ತಿದ್ದು ಕಳೆದ ಒಂದು ತಿಂಗಳ ಹಿಂದೆ ಸದರಿ ಠಾಣೆಯ ಸಿಪಿಐ ಹಾಗೂ ಒಬ್ಬ ಸಿಬ್ಬಂದಿ ದಾಳಿ ನಡೆಸಿ ಅಂಗಡಿಯಲ್ಲಿದ್ದ 23,000 ರೂಪಾಯಿ ತೆಗೆದುಕೊಂಡು ಹೋಗಿ ಮಟ್ಕಾ ಚೀಟಿ ಬರೆಯುತ್ತಿದ್ದಾರೆ ಎಂದು ಕೇವಲ ಒಂದು ಸಾವಿರ ರೂಪಾಯಿಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸಿ.ಪಿ.ಐ ಲಂಚಾವತಾರ ಹಾಗೂ ಠಾಣೆಯಲ್ಲಾದ ತನಗೆ ಅನ್ಯಾಯವನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಿದ್ದಾರೆ. ಆದರಿಂದ ಈ ಅಧಿಕಾರಿಗಳು ಎಷ್ಟು ಪ್ರಾಮಾಣಿಕರು ಎಂದು ವಾಸ್ತವತೆ ತಿಳಿಯಬೇಕಿದೆ.
ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾಧಿಕಾರಿ ಬಾಡಿ ಕ್ಯಾಮರವನ್ನು ಧರಿಸದೆ, ಅರ್ಜಿದಾರನೊಂದಿಗೆ ನಡೆದುಕೊಂಡ ರೀತಿ, ದರ್ಪ ಹಾಗೂ ಆ ಹಿರಿಯ ಜೀವ ಅನುಭವಿಸಿದ ನರಕಾಯತನೆ ಕನಸಿನಲ್ಲಿಯೂ ನನಗೆ ಪ್ರತಿಧ್ವನಿಸುತ್ತಿದೆ.
ಅಕ್ರಮ ಚಟುವಟಿಕೆ ಕೋರರಿಂದ ಮಾಮೂಲಿ ಆಸೆಗೆ ಕೈ ಚಾಚುತ್ತಿರುವ ಇಂತಹ ಭ್ರಷ್ಟ ಅಧಿಕಾರಿಗಳಿಂದ ಸಾರ್ವಜನಿಕರು ನ್ಯಾಯ ಪಡೆಯಬಹುದೇ? ಜನಸ್ನೇಹಿ ಆಗಬೇಕಿದ್ದ ಪೊಲೀಸ ಅಧಿಕಾರಿಗಳು ಸಾರ್ವಜನಿಕರಲ್ಲಿ ಭಯ ಹುಟ್ಟಿಸುತ್ತಿದ್ದು, ಭ್ರಷ್ಟ ಪೋಲಿಸ ಅಧಿಕಾರಿಗಳ ವಿರುದ್ಧ ಪ್ರಜ್ಞಾವಂತ ನಾಗರಿಕರು ಜನಾಂದೋಲನ ಮಾಡುವ ಅನಿವಾರ್ಯತೆ ಇದೆ..

