
ಅಂಕೋಲಾ: ಕಾಂಗ್ರೆಸ್ ಪಕ್ಷವು ತನ್ನ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಮಂಜೇಶ್ವರ ಎಂ ನಾಯಕರವರನ್ನು ಸರ್ವಾನುಮತದಿಂದ ಅಂಕೋಲಾ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಮಂಜೇಶ್ವರ ಎಂ ನಾಯಕರವರು ಪಕ್ಷದಲ್ಲಿ ಧೀರ್ಘ ಕಾಲದಿಂದ ಸಕ್ರಿಯರಾಗಿದ್ದು, ಸಂಘಟನಾ ಚಾತುರ್ಯತೆಯನ್ನು ಹೊಂದಿದ್ದಾರೆ.ಪಕ್ಷದಲ್ಲಿ ಸದಾ ಕ್ರಿಯಾಶೀಲತೆಯಿಂದಿರುವ ಹಾಗೂ ನಿಷ್ಟೆಯಿಂದಿರುವ ಮಂಜೇಶ್ವರ ಎಂ ನಾಯಕರವರು ಅಂಕೋಲಾ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಅಂಕೋಲಾ ಕಾಂಗ್ರೆಸ್ ವಲಯದಲ್ಲಿ ಸಂತಸವುಂಟುಮಾಡಿದೆ.
……….
