ಅಂಕೋಲಾದಲ್ಲಿ ವಿಶೇಷ ಹೋಳಿ ಆಚರಣೆ :ಬೆಳಂಬಾರ ಗ್ರಾಮದ ಹಾಲಕ್ಕಿ ಸಮುದಾಯದವರು ಸಾದರ ಪಡಿಸಿದ ಪ್ರಸ್ತುತ ವಿದ್ಯಮಾನದ ಅಣಕು ಪ್ರದರ್ಶನಕ್ಕೆ ಭಾರಿ ಮೆಚ್ಚುಗೆ.

News Desk
2 Min Read

ಅಂಕೋಲಾ : ದಿನಾಂಕ 13/03/2025.ಹೋಳಿ ಹಬ್ಬದ ಅಂಗವಾಗಿ ಅಂಕೋಲಾ ತಾಲೂಕಿನಲ್ಲಿ ವಿಶಿಷ್ಟವಾದ ನೈಜ ಘಟನೆಗಳ ಅಣಕು ಪ್ರದರ್ಶನ ಮೆರವಣಿಗೆ ನಡೆಯಿತು.

ತಾಲೂಕಿನ ಬೆಳಂಬಾರ ಗ್ರಾಮದ ಹಾಲಕ್ಕಿ ಸಮುದಾಯದವರು ಹೋಳಿಯ ಪ್ರಯುಕ್ತ ನಗರದಲ್ಲಿ ವೇಷ-ಭೂಷಣಗಳನ್ನು ಹಾಕಿಕೊಂಡು ನಿತ್ಯ ಸಮಾಜದಲ್ಲಿನ ಆಗುಹೋಗುಗಳನ್ನು ಅಣಕು ಪ್ರದರ್ಶನ ಮಾಡುವುದು ಇಲ್ಲಿನ ಸಂಪ್ರದಾಯವಾಗಿ ಮುಂದುವರೆದಿದೆ .

ಈ ಒಂದು ದಿನ ಮಾತ್ರ ಇಲ್ಲಿ ಯಾರ ಕುರಿತು ಅಣಕು ಮಾಡಿದರೂ ಯಾವುದೇ ನಿರ್ಬಂಧ ಇರುವುದಿಲ್ಲ. ಸಮಾಜದಲ್ಲಿನ ಅನೇಕ ಘಟನೆಗಳನ್ನು ಇಲ್ಲಿನ ಹೋಳಿ ಆಚರಣೆ ವೇಳೆ ಅಣಕು ಪ್ರದರ್ಶನದ ಮೂಲಕ ಸಾರ್ವಜನಿಕರೆದುರು ತೆರೆದಿಡಲಾಯಿತು.

ಇನ್ನು ಈ ಬಾರಿಯ ಅಣಕು ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಿ ಸರ್ಕಾರವು ಅಂಕೋಲಾದಲ್ಲಿ ಜಾರಿಗೆ ತರಲು ಇಚ್ಚಿಸಿರುವ ವಾಣಿಜ್ಯ ಬಂದರು ಬೇಡ ಎಂದು ವಿರೋಧ ವ್ಯಕ್ತಪಡಿಸಲಾಗಿದೆ ಅದರ ಬದಲಾಗಿ ಜನರ ಜೀವ ಉಳಿಸುವ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಆಗಲಿ ಎಂಬುದಾಗಿ ತೋರ್ಪಡಿಸಲಾಗಿದೆ.

ಶಿರುರು ಗುಡ್ಡ ದುರಂತದಲ್ಲಿ ಪತ್ರಕರ್ತರಿಗೆ ಹಾಗೂ ಟಿವಿ ಮಾಧ್ಯಮದವರಿಗೆ ಪ್ರವೇಶ ನಿರ್ಭರಿಸಲಾಗಿದ್ದ್ ಸನ್ನಿವೇಶ.ಜೊತೆಗೆ ಜೂಜು ಮುಕ್ತ ಕರ್ನಾಟಕ ಅಭಿಯಾನ ಶೀರ್ಷಿಕೆ ಅಡಿ ಅಪರೂಪಕ್ಕೆ ನಡೆಯುವ ಕೋಳಿ ಅಂಕ ಇಸ್ಪೀಟ್ ಆಟವನ್ನು ಮಟ್ಟ ಹಾಕುವ ಸರ್ಕಾರಗಳು ಯುವ ಜನಾಂಗದ ಭವಿಷ್ಯಕ್ಕೆ ಹಾಗೂ ಅವರ ಕುಟುಂಬದ ವಿನಾಶಕ್ಕೆ ಕಾರಣವಾದಂತ ಆನ್ಲೈನ್ ಬೆಟ್ಟಿಂಗ್ ಮತ್ತು ಆನ್ಲೈನ್ ಗೇಮ್ ದಂದೆಯನ್ನು ಕೇವಲ ಕಮಿಷನ್ ಮತ್ತು ತೆರಿಗೆ ಆಸೆಗಾಗಿ ಅವಕಾಶವನ್ನು ನೀಡಿ ರಾಜ್ಯದ ಜನತೆಯನ್ನು ಅಶಾಂತಿಯೆಡೆಗೆ ತಳ್ಳುತ್ತಿರುವುದು ಎಷ್ಟು ಸರಿ? ಎಂದು ನೇರವಾಗಿ ಸರ್ಕಾರವನ್ನು ತೀಕ್ಷ್ಣವಾಗಿ ಅಣಕಿಸಲಾಗಿದೆ.

ರೈತ ಬಂಧು ಚಕ್ಕಡಿ ಗಾಡಿಯಲ್ಲಿ ತರಗೆಲೆಯನ್ನು ತುಂಬಿಕೊಂಡ್ಡು ಪಾರಂಪರಿಕ ಕೃಷಿ ಪದ್ಧತಿಯ ಕಡೆಗೆ ಮುಖ ಮಾಡಿದ ರೈತ. ಮಹಾ ಕುಂಭ ಮೇಳಕ್ಕೆ ಆಗಮಿಸಿರುವ ಸಾಧುಗಳು, ಡ್ರ್ಯಾಗನ್ ಪಕ್ಷಿ ಯ ಜೊತೆ ಕಾಡು ಮನುಷ್ಯರು, ದಕ್ಷ ಯಜ್ಞ ಸನ್ನಿವೇಶ, ಮಾಟ ಮಂತ್ರಗಳಿಗೆ ಮೋಸ ಹೋಗದಿರಿ ಅನಾರೋಗ್ಯ ತುತ್ತಾದರೆ ವೈದ್ಯರನ್ನು ಸಂಪರ್ಕಿಸಿ ಎಂಬ ಸನ್ನಿವೇಶ.

ಅಂಕೋಲಾದಲ್ಲಿ ಗೋಗಳ್ಳರಿಂದ ಗುಂಡಾಗಿರಿ ಸಿಂಹ ಸ್ವಪ್ನವಾದ ಉತ್ತರ ಕನ್ನಡ ಜಿಲ್ಲೆಯ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಸನ್ನಿವೇಶ,

ಸಾಂಬಾಜಿಯ ಪರಾಕ್ರಮ ಹಾಗೂ ಕೊನೆಯಲ್ಲಿ ಮೊಗಲ ದೊರೆಗಳಿಂದ ಚಿತ್ರಹಿಂಸೆ ಪಡೆದು ಸಾವನೋಪ್ಪಿದ ಕೊನೆ ಕ್ಷಣದ ಸನ್ನಿವೇಶ. ತುಂಡು ಉಡುಗೆಯಲ್ಲಿ ಹೆಣ್ಣು ಮಕ್ಕಳ ವೇಷಭೂಷಣ ತೊಟ್ಟವರು .

ವೊಡಾಫೋನ್ ಅಡ್ವರ್ಟೈಸ್ಮೆಂಟ್ ನ ವೇಷ ಭೂಷಣ ತೊಟ್ಟವರು. ಇನ್ನಿತರ ಎಲ್ಲಾ ಪ್ರದರ್ಶನಗಳು ಸಾರ್ವಜನಿಕರ್ ಗಮನ ಸೆಳೆಯಿತು.ಪ್ರತಿ ವರ್ಷದಂತೆ ಈ ವರ್ಷವೂ ಬೃಹದಾಕಾರದ ನಾರಿನಿಂದ ಹಾಗೂ ಸಿಮೆಂಟ್ನ ಚೀಲದಿಂದ ಹಣೆದಿರುವ ಕರಡಿ ವೇಷವು ನೋಡುಗರನ್ನು ಹುಬ್ಬೇರಿಸುವಂತೆ ಮಾಡಿತುಇದರ ಜೊತೆಗೆ ಮರುಕಾಲು ವೇಷ ತೊಟ್ಟ ದೈತ್ಯ ಮನುಷ್ಯ.ನಾಡಿನ ಸುಪ್ರಸಿದ್ಧ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತ ಆಕರ್ಷಣೀಯವಾಗಿತ್ತು.

ಕೊನೆಯಲ್ಲಿ ಈ ಸುಗ್ಗಿ ತಂಡ ತಹಶೀಲ್ದಾರ ಕಛೇರಿ ಒಳಗಡೆ ಪ್ರವೇಶಿಸುವುದರೊಂದಿಗೆ ಬ್ರಿಟಿಷರ ಕಾಲದಲ್ಲಿ ಕೊಟ್ಟಿರುವ ತಾಮ್ರ ಪತ್ರವನ್ನು ತಹಶೀಲ್ದಾರರವರು ಊರಗೌಡರ ಸಮ್ಮುಖದಲ್ಲಿ ತೆರೆದು ಗೌರವ ಸೂಚಿಸುವ ಮೂಲಕ ಈ ವರ್ಷದ ಸುಗ್ಗಿ ಆಚರಣೆ ಸಂಪನ್ನಗೊಳ್ಳುತ್ತದೆ.

ಈ ಸಂದರ್ಭದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ನೇತೃತ್ವದಲ್ಲಿ ಪೊಲೀಸರು ಯಾವುದೇ ಅಹಿತಕರ ಘಟನೆ ಯಾಗದಂತೆ ಬಿಗಿ ಬಂದೋ ಬಸ್ತನ್ನು ನೀಡಿದ್ದಾರೆ. ಅಣಕು ಪ್ರದರ್ಶನ ನೋಡಲು ಅಂಕೋಲಾ ಪಟ್ಟಣದಲ್ಲಿ ಸಾವಿರಾರು ಜನ ಸೇರಿದ್ದರು‌. ಅಂಕೋಲಾದ ಈ ಹೋಳಿ ಅಣಕು ಪ್ರದರ್ಶನ ರಾಜ್ಯದಲ್ಲಿ ಮತ್ತೆಲ್ಲೂ ಕಾಣ ಸಿಗದ ವಿಶಿಷ್ಟ ಆಚರಣೆಯಾಗಿದ್ದು, ಇಂದಿಗೂ ಮುಂದುವರಿದಿದೆ.

Share This Article
Leave a Comment