ಅಂಕೋಲಾ ಶಹರದಲ್ಲಿ ಮಹಿಳೆ ಹಾಗೂ ಆಕೆಯ ಮೂರು ವರ್ಷದ ಮಗ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿದಾರರಾದ ಸದ್ದಾಂಹುಸೇನ ತಂದೆ ಅಲಿಸಾಬ್ ಮುಕ್ತೇದಾರ (ಪ್ರಾಯ 30 ವರ್ಷ, ವೃತ್ತಿ: ಸೆಂಟ್ರಿಂಗ್ ಕೆಲಸ), ಸಾ. ಮಾವಿನಕೇರಿ, ಹಟ್ಟಿಕೇರಿ, ತಾ. ಅಂಕೋಲಾ, ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ 02-01-2026 ರಂದು ಸಂಜೆ 4 ಗಂಟೆಗೆ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಅವರ ಹೆಂಡತಿ ಶ್ರೀಮತಿ ಮುಮ್ತಾಜ್ ಗಂಡ ಸದ್ದಾಂಹುಸೇನ ಮುಕ್ತೇದಾರ (ಪ್ರಾಯ 28 ವರ್ಷ, ವೃತ್ತಿ: ಗೃಹಿಣಿ) ಅವರು ದಿನಾಂಕ 30-12-2025 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ, ತಮ್ಮ ಮಗ ಕು.ಅರ್ಮಾನ್ ಸದ್ದಾಂಹುಸೇನ ಮುಕ್ತೇದಾರ (ಪ್ರಾಯ 3 ವರ್ಷ) ಅವರನ್ನು ಜೊತೆದುಕೊಂಡು “ಮಗನ ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಕಾರವಾರಕ್ಕೆ ಹೋಗಿ ಬರುತ್ತೇನೆ” ಎಂದು ಹೇಳಿ ಅಂಕೋಲಾದಲ್ಲಿರುವ ತಮ್ಮ ಬಾಡಿಗೆ ಮನೆಯಿಂದ ಹೊರಟಿದ್ದರು. ಆದರೆ ಆ ಬಳಿಕ ಅವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ.
ಬಂಧುಮಿತ್ರರು ಹಾಗೂ ಸಂಬಂಧಿಕರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ತಡವಾಗಿ ಠಾಣೆಗೆ ದೂರು ನೀಡಲಾಗಿದ್ದು, ಗುನ್ನಾ ಸಂಖ್ಯೆ 02/2026 ಅಡಿ ಮಹಿಳೆ ಮತ್ತು ಮಗು ಕಾಣೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಾಣೆಯಾದವರ ಚಹರೆ ಗುರುತು
ಶ್ರೀಮತಿ ಮುಮ್ತಾಜ್ ಗಂಡ ಸದ್ದಾಂಹುಸೇನ ಮುಕ್ತೇದಾರ
ಪ್ರಾಯ: 28 ವರ್ಷವಿಳಾಸ: ಸಾ. ಮಾವಿನಕೇರಿ, ಹಟ್ಟಿಕೇರಿ, ತಾ. ಅಂಕೋಲಾ, ಎತ್ತರ: 5 ಫೂಟ್, ಭಾಷೆ: ಹಿಂದಿ, ಕನ್ನಡ, ಚಹರೆ: ಗೋಧಿ ಮೈಬಣ್ಣ, ಉದ್ದನೆಯ ಮುಖ, ಸದೃಢ ಮೈಕಟ್ಟು, ಧರಿಸಿದ್ದ ಬಟ್ಟೆ: ನೀಲಿ ಬಣ್ಣದ ಚೂಡಿಧಾರ, ಬೂದು ಬಣ್ಣದ ಪ್ಯಾಂಟ್.ಆಭರಣ: ಕುತ್ತಿಗೆಯಲ್ಲಿ ಕರಿಮಣಿ ಸರ, ಕಿವಿಯಲ್ಲಿ ಓಲೆ.
ಕು| ಅರ್ಮಾನ್ ಸದ್ದಾಂಹುಸೇನ ಮುಕ್ತೇದಾರ ಪ್ರಾಯ: 3 ವರ್ಷಧರಿಸಿದ್ದ ಬಟ್ಟೆ: ನೀಲಿ ಬಣ್ಣದ ಟಿ-ಶರ್ಟ್, ಕೆಂಪು ಚಡ್ಡಿ, ಭಾಷೆ: ಹಿಂದಿ ಮೇಲ್ಕಂಡ ಚಹರೆ ಗುರುತು ಹೊಂದಿರುವ ಮಹಿಳೆ ಹಾಗೂ ಮಗುವಿನ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ತಕ್ಷಣ ಅಂಕೋಲಾ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.📞 ದೂರವಾಣಿ: (08388) 220333📱 ಮೊಬೈಲ್: 9480805250 / 9480805268. — ಠಾಣಾಧಿಕಾರಿಗಳು ಅಂಕೋಲಾ ಪೊಲೀಸ್ ಠಾಣೆ
ವರದಿ: ಕಿರಣ ಗಾಂವಕರ

