ಅಂಕೋಲಾದ ಶಾರದಾಂಬಾ ಮಹಿಳಾ ಸಹಕಾರ ಸಂಘದಲ್ಲಿ ಭಾರಿ ಹಣಕಾಸು ವಂಚನೆ ಪ್ರಕರಣ. ನಕಲಿ ದಾಖಲೆ ಸೃಷ್ಟಿಸಿದ ಆರೋಪಿಗಳಿಗೆ ಜಾಮೀನು ಅರ್ಜಿ ತಿರಸ್ಕಾರ ಮಾಡಿದ ಜಿಲ್ಲಾ ನ್ಯಾಯಾಲಯ.

News Desk
3 Min Read

ಅಂಕೋಲಾ ಪಟ್ಟಣದ ಶಾರದಾಂಬಾ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಂಭವಿಸಿರುವ ರೂ. 10 ಲಕ್ಷದ ಸಾಲ ವ್ಯವಹಾರಕ್ಕೆ ಸಂಬಂಧಿಸಿದ ಭಾರಿ ಹಣಕಾಸು ವಂಚನೆ ಪ್ರಕರಣ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸಂಘದ ಸಿಬ್ಬಂದಿ ಮಂಜುಷಾ ಅರುಣ್ ಜೋಥಾಡಿ ನೀಡಿದ ದೂರಿನ ಆಧಾರದ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ FIR ಪ್ರಕಾರ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ರಾಘು ಅಶೋಕ್ ನಾಯ್ಕ್ ಸೇರಿ ಒಟ್ಟು ಏಳು ಮಂದಿಯ ವಿರುದ್ಧ ನಾನಾ ಗಂಭೀರ ಆರೋಪಗಳು ಕೇಳಿಬಂದಿವೆ.

ಸಂಘದ ಲೆಟರ್‌ಹೆಡ್ ನಕಲಿ ಮಾಡಿ, ಮೃತ ವ್ಯಕ್ತಿಯ ಹೆಸರಿನಲ್ಲಿ ಜಮೀನಿನ ವ್ಯವಹಾರ.

ಆರೋಪಿಗಳು ಸಂಘದ ಅಧಿಕೃತ ಲೆಟರ್‌ಹೆಡ್ ನಕಲಿ ಮಾಡಿಕೊಂಡಿದ್ದು, ಹಾಗು ಸಂಘದ ಸದಸ್ಯೆ ಯೊಬ್ಬಳ ಹೆಸರಿನಲ್ಲಿ ರೂ. 10 ಲಕ್ಷದ ಸಾಲ ಪ್ರಕ್ರಿಯೆ ನಡೆಸಿದ್ದಾರೆ. ‘ವತ್ತಿ ಕುಲಾಸೆ’ ಯಲ್ಲೂ ಅಕ್ರಮ ನಡೆಸಲಾಗಿದೆ – ಇದು ನಿಖರವಾಗಿ ಕಾನೂನು ವಿರುದ್ಧವಾದ ಅಪರಾಧ ಎಂದು FIR ನಲ್ಲಿದೆ.

ಜಿಲ್ಲಾ ನ್ಯಾಯಾಲಯದಿಂದ ಖಡಕ್ ತೀರ್ಪು: ಜಾಮೀನು ಅರ್ಜಿ ವಜಾ

2025 ಜುಲೈ 23 ರಂದು ಕಾರವಾರ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ 1, 3, 5, 6 ಮತ್ತು 7ನೇ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.

ನ್ಯಾಯಾಲಯ ಹೇಳಿದ್ದು ಹೀಗೆ:

ರಾಘು ನಾಯ್ಕ್ ವಿರುದ್ಧ ತೀವ್ರ ಜನ ಆಕ್ರೋಶ

ಸ್ಥಳೀಯ ಮೂಲಗಳ ಪ್ರಕಾರ, ರಾಘು ನಾಯ್ಕ್ ವಿರುದ್ಧ ಹಿಂದಿನಿಂದಲೂ ಹಲವಾರು ಹಣಕಾಸು ವಂಚನೆಗೆ ಸಂಬಂಧಿಸಿದ ಆರೋಪಗಳು ಕೇಳಿಬಂದಿವೆ.ಅವರಿಂದ ತೊಂದರೆ ಅನುಭವಿಸಿದ ಹಲವರು ತಮ್ಮ ಜಮೀನನ್ನು ಕಳೆದುಕೊಂಡಿದ್ದಾರೆ ಅಥವಾ ತಮ್ಮ ಹೆಸರಿನಲ್ಲಿ ನಕಲಿ ದಾಖಲೆಗಳಿಂದ ಸಾಲ ಮಾಡಲಾಗಿದೆ ಎಂಬ ಆಘಾತಕಾರಿ ಬೆಳವಣಿಗೆಗಳ ನಡುವೆ ನ್ಯಾಯಕ್ಕಾಗಿ ಮುಂದೆ ಬರುತ್ತಿದ್ದಾರೆ.

ಸತ್ಯ ಬಯಲಾಗಬೇಕೆಂಬ ಆಗ್ರಹ ಹೆಚ್ಚುತ್ತಿದೆ

ಈ ಪ್ರಕರಣದಲ್ಲಿ FIR ಅಂಶಗಳು ಹಾಗೂ ನ್ಯಾಯಾಲಯದ ತೀರ್ಪು ಭದ್ರತಾ ದಾಖಲೆಗಳ ದುರ್ಬಳಕೆ, ನಕಲಿ ಸಹಿ, ಜಮೀನಿನ ಕಬಳಿಕೆ ಮತ್ತು ಸಂಘದ ಸದಸ್ಯರ ನಂಬಿಕೆ ದುರ್ಬಳಕೆ ಯಂತಹ ಗಂಭೀರ ಅಂಶಗಳನ್ನು ಬಹಿರಂಗ ಪಡಿಸಿದ್ದವು.ಈತನಿಖೆ ಮುಂದುವರಿ ಯುತ್ತಿದ್ದು, ಇನ್ನೂ ಹಲವರು ತೊಂದರೆ ಅನುಭವಿಸಿದವರು ಮುಂದೆ ಬರುವ ನಿರೀಕ್ಷೆಯಿದೆ.

ತಲೆಮರೆಸಿದ ಆರೋಪಿಗಳು – ನಾಗರಿಕರಿಂದ ಆರೋಪಿಗಳ ಬಂಧನಕ್ಕೆ ಆಗ್ರಹ

ಬಲ್ಲ ಮೂಲಗಳ ಪ್ರಕಾರ, ಆರೋಪಿಗಳಾದ ರಾಘು ಅಶೋಕ್ ನಾಯ್ಕ್, ಜಯವಂತ ಅಶೋಕ್ ನಾಯ್ಕ್ ಮತ್ತು ಸುನಿತಾ ರಾಘು ನಾಯ್ಕ್ ತಲೆಮರೆಸಿಕೊಂಡಿದ್ದಾರೆ.ಜಾಮೀನು ಅರ್ಜಿ ವಜಾ ಆದ ನಂತರ ಈ ಮೂವರು ಉಚ್ಚ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಮುಂದಾಗುತ್ತಿರುವ ಮಾಹಿತಿ ಲಭ್ಯವಾಗಿದೆ.ಪೋಲೀಸ್ ಇಲಾಖೆ ಈತನ್ಮಧ್ಯೆ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೆಂಬ ಸಾರ್ವಜನಿಕ ಒತ್ತಡ ಹೆಚ್ಚುತ್ತಿದೆ.

ಇನ್ನೂ ಹಲವಾರು ನಾಗರಿಕರು ವಂಚನೆಗೆ ಒಳಪಟ್ಟಿದ್ದಾರೆ

ಈ ಪ್ರಕರಣದಲ್ಲಿ ಹೊರಬಂದಿರುವ ಇತ್ತೀಚಿನ ವಿವರಗಳು ಪ್ರಕರಣದ ವ್ಯಾಪ್ತಿಯು ಮತ್ತಷ್ಟು ವಿಸ್ತೃತ ವಾಗಿರುವುದನ್ನು ತೋರಿಸುತ್ತಿವೆ. ಗಂಗಾವಳಿಯ ಸುಧಾಕರ ಗಣಪತಿ ತಾಂಡೇಲಾ ಎಂಬುವವರು, “ರಾಘು ನಾಯ್ಕ್ ಬೋಟಿಗೆ ಸಾಲ ಮಾಡಿಸಿ ಕೊಡುತ್ತೇನೆ” ಎಂದು ಭರವಸೆ ನೀಡಿದ್ದಾನೆ ಎಂದು ಹೇಳಿ, ರೂ. 17 ಲಕ್ಷ ನಗದು ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂದು ತೀವ್ರವಾಗಿ ಅಳಲು ತೋಡಿಕೊಂಡಿದ್ದಾರೆ.

ಇದಾದ ಮೇಲೂ, ಶಶಿಕಲಾ ಉದಯ ನಾಯ್ಕ್ (ಕೇಣಿ) ಅವರು ಮಾಹಿತಿ ನೀಡಿದ್ದು, ಪತಿ ಉದಯ ನಾಯ್ಕ್ ಮರಣ ಹೊಂದಿದ ಬಳಿಕ, ಅವರ 14 ಗುಂಟೆ ಆಸ್ತಿ ವಾರಸುದಾರರ ಹೆಸರಿನಲ್ಲಿ ನೋಂದಾಯಿಸು ವುದಾಗಿ ಹೇಳಿ, ರಾಘು ನಾಯ್ಕ್ ಅವರನ್ನು ಅಂಕೋಲಾ ಉಪ ನೋಂದಣಿ ಕಚೇರಿಗೆ ಕರೆದುಕೊಂಡು ಹೋಗಿ, ಅದರಲ್ಲಿನ 10 ಗುಂಟೆ ತನ್ನ ಹೆಸರಿಗೆ ಮಾಡಿಕೊಂಡು, ನಂತರ ಅದನ್ನು ಶೀಘ್ರವಾಗಿ ಪತ್ನಿಯ ಹೆಸರಿಗೆ ದಾನಪತ್ರ ಮಾಡಿಸಿದ್ದಾನೆ ಎಂದು ಹೇಳಿದ್ದಾರೆ.ಅದೇ ರೀತಿ, ಕೇಣಿಯ ಆನಂದ ಕೃಷ್ಣ ಶೆಟ್ಟಿ ಸೇರಿದಂತೆ ಇನ್ನೂ ಅನೇಕರು ಈ ಆರೋಪಿಗಳಿಂದ ವಂಚನೆಗೊಳಗಾದ ಮಾಹಿತಿ ಲಭ್ಯವಾಗಿದ್ದು, ಅವರು ಶೀಘ್ರದಲ್ಲೇ ಕಾನೂನು ಮೆಟ್ಟಿಲು ಏರುವ ಸಾಧ್ಯತೆ ಹೆಚ್ಚಿದೆ.

Share This Article