ಬಿಎಸ್‌ಎನ್‌ಎಲ್‌ (BSNL) ನ ಹೊಸ ಯೋಜನೆ ಜನಮನ ಗೆದ್ದಿತು — ಕೇವಲ 1 ರೂಪಾಯಿಗೆ ಸಿಮ್ ಕಾರ್ಡ್‌, ಅನಿಯಮಿತ ಕರೆ, ಇಂಟರ್ನೆಟ್ ಮತ್ತು SMS ಸೌಲಭ್ಯ; ಆಫರ್ ನವೆಂಬರ್‌ 15ರವರೆಗೆ ಮಾತ್ರ..

News Desk
1 Min Read

ಅಂಕೋಲಾ : ದೀಪಾವಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ (BSNL) ಹೊಸ ಗ್ರಾಹಕರಿಗಾಗಿ ಆಕರ್ಷಕ ಯೋಜನೆಯನ್ನು ಘೋಷಿಸಿದೆ. ಕೇವಲ ₹1ರೂಪಾಯಿ ಗೆ ಹೊಸ ಸಿಮ್ ಕಾರ್ಡ್‌ ನೀಡುವ ಮೂಲಕ ಜನಮನ ಗೆದ್ದಿದೆ.

ಈ ವಿಶೇಷ ದೀಪಾವಳಿ ಆಫರ್‌ನಡಿ ಗ್ರಾಹಕರು ಅನಿಯಮಿತ ಕರೆಗಳು, ಪ್ರತಿದಿನ 2GB ಡೇಟಾ, ಹಾಗೂ 100 SMS ಪ್ರತಿ ದಿನ ಸೌಲಭ್ಯವನ್ನು ಪಡೆಯಲಿದ್ದಾರೆ. ಈ ಪ್ಯಾಕ್‌ನ ವ್ಯಾಲಿಡಿಟಿ 30 ದಿನಗಳು ಆಗಿದ್ದು, ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಆಫರ್ ಮಾನ್ಯವಾಗಲಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.

ಸಿಮ್ ಪಡೆಯಲು ಆಸಕ್ತರು ತಮ್ಮ ಆಧಾರ್ ಕಾರ್ಡ್‌ ಹಾಗೂ ಗುರುತಿನ ದಾಖಲೆಗಳೊಂದಿಗೆ ಹಾಜರಾಗಬೇಕಾಗಿದೆ. ಪೋರ್ಟ್ ಮಾಡಿಸಲು ಬಯಸುವ ಗ್ರಾಹಕರು ನವೆಂಬರ್ 10ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ಸೇವೆ ನೀಡುತ್ತಿರುವುದರಿಂದ ಜನರು ಬಿಎಸ್‌ಎನ್‌ಎಲ್ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ದೀಪಾವಳಿಯ ಸಿಹಿಯಂತಾದ ಈ ಬಿಎಸ್‌ಎನ್‌ಎಲ್ ಯೋಜನೆ — ಜನರ ಸಂವಹನ ಬದುಕಿಗೆ ಹೊಸ ಬೆಳಕು ತಂದಿದೆ

Share This Article