ಗಂಗಾವಳಿ ಸೇತುವೆಯ ಅವೈಜ್ಞಾನಿಕ ತಿರುವಿನಲ್ಲಿ ದಿಢೀರ್ ಎದುರಾಗುವ ಬ್ಯಾರಿಕೇಡ್; ತಿರುವಿನ ಎರಡೂ ತುದಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ಅಗತ್ಯ..

News Desk
1 Min Read

ಅಂಕೋಲಾ: ಮಂಜುಗುಣಿಯಿಂದ ಗಂಗಾವಳಿ ಕಡೆಗೆ ಸಂಪರ್ಕಿಸುವ ಗಂಗಾವಳಿ ಸೇತುವೆಯ ಸಂಪರ್ಕವಿರುವ ರಸ್ತೆ ತಿರುವು ವಾಹನ ಸಂಚಾರಕ್ಕೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಮಂಜುಗುಣಿ ಕಡೆಯಿಂದ ಗಂಗಾವಳಿ ಕಡೆಗೆ ಸಾಗುವಾಗ, ಇಲ್ಲಿನ ಅವೈಜ್ಞಾನಿಕ ತಿರುವಿನಲ್ಲಿ ವಾಹನಗಳ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ.

ಪ್ರಸ್ತುತ ಈ ಜಾಗದಲ್ಲಿರುವ ಬ್ಯಾರಿಕೇಡ್ ಚಾಲಕರಿಗೆ ತೀರಾ ಹತ್ತಿರ ಬಂದಾಗಲಷ್ಟೇ ಗೋಚರಿಸುತ್ತಿದ್ದು, ಇಲ್ಲಿನ ಅವೈಜ್ಞಾನಿಕ ತಿರುವಿನಲ್ಲಿ ದಿಡೀರನೆ ಬ್ಯಾರಿಕೇಡ್ ಎದುರಾಗುವುದರಿಂದ ಚಾಲಕರು ಗಲಿಬಿಲಿಗೊಂಡು ವಾಹನ ನಿಯಂತ್ರಿಸಲು ಕಷ್ಟಪಡುವಂತಾಗಿದೆ.

ರಸ್ತೆ ಮತ್ತು ತಿರುವಿನ ರಚನೆ ಈ ರೀತಿಯಾಗಿರುವುದರಿಂದ, ಬ್ಯಾರಿಕೇಡ್ ಕೂಡ ಕಾಣದಂತೆ ಇರುವುದು ಅಪಾಯವನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು ಅನಿವಾರ್ಯವಾಗಿದೆ.

ಕೇವಲ ತಿರುವಿನ ಮಧ್ಯದಲ್ಲಿ ಬ್ಯಾರಿಕೇಡ್ ಇಡುವ ಬದಲು, ತಿರುವಿನ ಎರಡೂ ಕಡೆಯಲ್ಲಿ ಸ್ವಲ್ಪ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದರೆ ವಾಹನ ಸವಾರರಿಗೆ ದೂರದಿಂದಲೇ ಎಚ್ಚರಿಕೆ ಸಿಗುತ್ತದೆ. ಇದರಿಂದ ಚಾಲಕರು ತಿರುವಿಗೂ ಮುನ್ನವೇ ವಾಹನದ ವೇಗ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಈ ಅವೈಜ್ಞಾನಿಕ ತಿರುವಿನ ಎರಡೂ ಬದಿಯಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ ಬ್ಯಾರಿಕೇಡ್ ಅಳವಡಿಸಲು ಅಥವಾ ಸ್ಪೀಡ್ ಬ್ರೇಕರ್ ನಿರ್ಮಿಸಲು ಕ್ರಮ ಕೈಗೊಳ್ಳಬೇಕಿದೆ.

Share This Article