ಅಂಕೋಲಾದ ಸರ್ವೆ ಅಧಿಕಾರಿ ದೇಶಭಕ್ತಿಯಿಂದ ಖಂಡಿಸಿದ ಹಿಂದುಗಳ ನರಮೇಧ: “ಹೃದಯದಿಂದ ಹೊಮ್ಮಿದ ಪ್ರತಿಭಟನೆ”..

News Desk
1 Min Read

ಅಂಕೋಲಾ, ಏಪ್ರಿಲ್ 30 – ಪಟ್ಟಣದ ಪ್ರಮುಖ ರಸ್ತೆಯಲ್ಲಿ “ಫಕ್ ಯು ಪಾಕಿಸ್ತಾನ”, “ಮಿಟ್ಟಿಮೇ ಮಿಲಾಯೆಂಗೆ ತುಮೆ ” ಎಂಬ ಪಾಕಿಸ್ತಾನ ವಿರೋಧಿ ಬರಹಗಳಿರುವ ಬಿತ್ತಿ ಚಿತ್ರವೊಂದನ್ನು ಅಂಟಿಸಿದ ಘಟನೆ ಸಾರ್ವಜನಿಕರ ಗಮನ ಸೆಳೆದಿದೆ. ಈ ಬಿತ್ತಿ ಚಿತ್ರವನ್ನು ಸರ್ಕಾರಿ ಸೇವೆಯಲ್ಲಿರುವ ಸರ್ವೆ ಅಧಿಕಾರಿ ಯೊಬ್ಬರು ಹಾಕಿರುವುದು ದೃಢವಾಗಿದ್ದು, ಈ ಮೂಲಕ ಅವರು ಕಾಶ್ಮೀರದಲ್ಲಿ ನಡೆದ ಹಿಂದುಗಳ ಮೇಲಿನ ಭೀಕರ ಹತ್ಯಾಕಾಂಡವನ್ನು ಖಂಡಿಸಿದ್ದಾರೆ.

“ಕಾಶ್ಮೀರದ ನೆಲದಲ್ಲಿ ಪಾಕಿಸ್ತಾನ ಪ್ರಚೋದಿತ ಉಗ್ರಗಾಮಿಗಳಿಂದ ನಡೆದ ನಿರ್ದಯ ಹಿಂದುಗಳ ನರಮೇಧವನ್ನು ನಾನು ಸುಮ್ಮನೆ ನೋಡಲು ಸಾಧ್ಯವಿಲ್ಲ. ಇದು ನನ್ನ ದೇಶಪ್ರೇಮದ ಆಕ್ರೋಶದ ಪ್ರತಿಫಲ!” ಎಂದು ಅಂಕೋಲಾ ಸರ್ವೆ ಇಲಾಖೆಯ ರಾಘವ ಮಂಜುನಾಥ ನಾಯಕ್ ವಿಕಾಸ ವಾಹಿನಿಗೆ ಪ್ರತಿಕ್ರಿಯಿಸಿದರು.

ಅವರು ಮತ್ತಷ್ಟು ವಿವರಿಸುತ್ತಾ, “ನಾನು ಒಂದು ಕಡೆಯ ಸರ್ಕಾರಿ ನೌಕರ, ಆದರೆ ಇನ್ನೊಂದು ಕಡೆ ಭಾರತ ನನ್ನ ಮಾತೃಭೂಮಿ, ಈ ನಾಡಿನಲ್ಲಿ ಯಾವುದೇ ನಿಷ್ಕಷ್ತ ಕ್ರೂರತೆಗೆ ನಾನು ಕಣ್ಣು ಮುಚ್ಚಲಾರೆ,” ಎಂದರು.

ಸಮಾಜದಲ್ಲಿ ಈ ಘಟನೆಯು ಚರ್ಚೆಗೆ ಕಾರಣವಾದರೂ, ಅನೇಕರು ಅವರ ದೇಶಭಕ್ತಿಯಿಂದ ಪ್ರೇರಿತ ಈ ಕ್ರಮವನ್ನು ಶ್ಲಾಘಿಸಿದ್ದಾರೆ. “ಇದು ಕೇವಲ ಬರಹವಲ್ಲ, ಕೋಟ್ಯಾಂತರ ಭಾರತೀಯರ ಹೃದಯದ ಧ್ವನಿ,” ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಈ ಕ್ರಮವು ಕೇವಲ ವ್ಯಕ್ತಿಗತ ಆಕ್ರೋಶವಲ್ಲ, ದೇಶದ ಸ್ವಾಭಿಮಾನಕ್ಕಾಗಿ ನಿಂತ ವ್ಯಕ್ತಿಯ ನಿಭಾಯಿತ ಧೈರ್ಯವನ್ನೂ ಪ್ರತಿಬಿಂಬಿಸುತ್ತದೆ. ಇಂತಹ ನೌಕರರು ಕಚೇರಿಯ ಗಡಿಯನ್ನಷ್ಟೇ ಅಲ್ಲ, ನೈತಿಕ ಧರ್ಮದ ಗಡಿಯನ್ನು ದಾಟಿಯೂ ರಾಷ್ಟ್ರದ ಪರವಾಗಿ ನಿಂತಿದ್ದಾರೆ.

Share This Article
Leave a Comment