ಉತ್ತರ ಕನ್ನಡದಲ್ಲಿ ಡಾಕ್ಟರ್ ಚಲೋ ಇದ್ದಾರೆ – ಆದರೆ ಇಲ್ಲಿನ ವ್ಯವಸ್ಥೆಯೇ ಸರಿ ಇಲ್ಲ. ಜಿಲ್ಲೆಯಲ್ಲಿ ಓಶಿ – ಕುಟು ಕುಟಿ- ಕ್ಲಬ್ ಶುರುಮಾಡುವ ಚಿಂತೆ.! ದೊಡ್ಡ ಆಸ್ಪತ್ರೆ ಮಾಡುವ ಚಿಂತೆ ಯಾರಿಗೂ ಇಲ್ಲ?ಅಂಕೋಲಾದ ತಂದೆ ಮಗನ ರೀಲ್ಸ್ ಬಾರಿ ವೈರಲ್..

News Desk
3 Min Read

ಅಂಕೋಲಾ :(ದಿ29-03-2025) ಉತ್ತರ ಕನ್ನಡದಲ್ಲಿ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಜನರ ಬಹು ಬೇಡಿಕೆ ಇರುವ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಒದಗಿಸಲು ಸಾಧ್ಯವಾಗದೆ ಸರ್ಕಾರವು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿ ಪ್ರಜೆಗಳಿಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣದ ಆಶ್ವಾಸನೆ ನೀಡುತ್ತಾ ಮೂಗಿಗೆ ತುಪ್ಪ ಸವರಿದ್ದು ಬಿಟ್ಟರೆ. ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದರು ಇಲ್ಲಿಯವರೆಗೆ ಸರಿಯಾದ ಆಶಾದಾಯಕ ಪ್ರಗತಿಯು ಇನ್ನು ಕಂಡುಬಂದಿಲ.. ಕೆಲವು ಜನ ಪ್ರತಿನಿಧಿಗಳು ಘಟ್ಟದ ಕೆಳಗಿನ ಪ್ರದೇಶದಲ್ಲಿ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಬೇಕು ಎಂದು ಘರ್ಜಿಸಿದರೆ . ಇನ್ನು ಕೆಲವರು ಘಟ್ಟದ ಮೇಲಿನ ಪ್ರದೇಶದಲ್ಲಿ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ನಿರ್ಮಾಣವಾಗಬೇಕು ಎನ್ನುತ್ತಾರೆ.

ಇನ್ನು ಕೆಲವರು ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಹೇಳುತ್ತ ಜನಪ್ರತಿನಿಧಿಗಳು ತಮ್ಮ ತಮ್ಮ ನಿಲುವನ್ನು ತಾಳಿದ್ದು.. ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಲ್ಲಿ ಒಮ್ಮತ ಮೂಡಿ ಬರದೇ ಇರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಿರ್ಮಾಣ ಆಗುವ ಕನಸು ಈಡೇರುವಂತೆ ಕಂಡುಬರುವುದಿಲ್ಲ.. ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ನಡೆಸಲ್ಪಟ್ಟಿರುವ ಸರ್ಕಾರಗಳು ಜನಸಾಮಾನ್ಯರಿಗೆ ಅತಿ ಅವಶ್ಯಕವಿರುವ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳದೆ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ ..

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಅಂಕೋಲಾದ ತಂದೆ ಮಗನ ರಿಲ್ಸ್ ಬಾರಿ ವೈರಲ್ : ಜನ ಮೆಚ್ಚುಗೆ..

ಮೋಜಿನ ಸಂಭಾಷಣೆ ಮೂಲಕ ರಿಲ್ಸಗಳನ್ನು ಮಾಡುತ್ತಾ ಅಂಕೋಲದ ತಂದೆ -ಮಗ ಸಕ್ಕತ್ ಸಂಚಲನವನ್ನು ಉಂಟು ಮಾಡಿದ್ದಾರೆ.. ಅಂಕೋಲಾದ ತೆಂಕಣಕೇರಿ ಗ್ರಾಮದ ಶ್ರೀಯುತ ವಿನಾಯಕ ನಾಯ್ಕರು ರಂಗಭೂಮಿಯ ಖ್ಯಾತ ಹಾಸ್ಯ ಕಲಾವಿದರಾಗಿದ್ದಾರೆ. ಇವರು ನೂರಕ್ಕೂ ಹೆಚ್ಚು ನಾಟಕಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರು ಅಭಿನಯಿಸಿದ ಪ್ರತಿಯೊಂದು ನಾಟಕದ ಹಾಸ್ಯ ತುಣುಕು ನೋಡಿದ ಎಂತಹ ಗಂಭೀರ ವ್ಯಕ್ತಿತ್ವದ ಗಂಟು ಮುಖದ ವ್ಯಕ್ತಿಗಳು ಸಹ ಇವರ ಹಾಸ್ಯಕ್ಕೆ ಮನಸೋಲದೇ ನಕ್ಕದೇ ಇರಲಾರ. ಇವರು ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ.

ಕೆಲವು ತಿಂಗಳಿಂದ ತಂದೆಯ ಜೊತೆ ಮಗನು ಕೂಡ ತನ್ನ ಶಿಕ್ಷಣದ ಜೊತೆಗೆ ರಿಲ್ಸನಲ್ಲಿ ತನ್ನ ತಂದೆಗೆ ಪೈಪೋಟಿ ನೀಡುತ್ತಿದ್ದಾನೆ.. ಈ ಪುಟ್ಟ ಬಾಲಕ ಅಮಯ ನಾಯ್ಕ್.. ಹಿಮಾಲಯ ಸ್ಕೂಲಿನ್ 6 ವರ್ಷದ LKG ಯ ಬಾಲಕನಾಗಿದ್ದು. ತಂದೆ ಜೊತೆಗಿನ ಬಾಲಕನ ರೀಲ್ಸ್ ನ್ ಸಂಭಾಷಣೆಯ ಮುಗ್ದ ತೊದಲು ನುಡಿ. ಸನ್ನಿವೇಶಕ್ಕೆ ತಕ್ಕಂತೆ ಪ್ರಾರಂಭದಿಂದ- ಕೊನೆಯಲ್ಲಿ ಕಡಕ್ ಡೈಲಾಗ್ ನೋಡುಗರನ್ನು ನಕ್ಕು ನಗಿಸುವಂತೆ ಮಾಡಿದೆ.

ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಅಗತ್ಯತೆ ಬಗ್ಗೆ ತಂದೆ-ಮಗನ ರೀಲ್ಸ್ ನ್ ಸಂಭಾಷಣೆ ಈ ಕೆಳಗಿನಂತಿದೆ 👇

ತಂದೆ: ಮಗ ನೀನು ದೊಡ್ಡ ಆದ ಮೇಲೆ ಏನು ಆಗುತ್ತೀಯ ಕೇಳಿದ ಪ್ರಶ್ನೆಗೆ

ಮಗನು ಉತ್ತರಿ ಸುತ್ತ: ಅಪ್ಪ ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಲು ಇಚ್ಚಿಸಿದ್ದೆ ಆದರೆ ನಾನು ಡಾಕ್ಟರ್ ಆಗುವುದಿಲ್ಲ?

ತಂದೆ : ಯಾಕೆ ನೀನು ಡಾಕ್ಟರ ಆಗುವುದಿಲ್ಲ.. ನೀನು ಡಾಕ್ಟರ್ ಆದರೆ ಸುಮಾರು ಜನ ರೋಗಿಗಳ ಜೀವವನ್ನು ಉಳಿಸಬಹುದಾಗಿದೆ.

ಎಂದಾಗ ಇದಕ್ಕೆ ಮಗನ ಉತ್ತರ: ಅಪ್ಪಾ ಜನರ ಜೀವ ಹೇಗೆ ಉಳಿಸುವುದು. ಈ ಸರ್ಕಾರ ಮಾಡಿದ ತಪ್ಪಿಗೆ ಈ ಡಾಕ್ಟರ ಮಂದಿ ಬೈಸಿಕೊಳ್ಳಬೇಕಾಗಿದೆ. ನಮ್ಮ ಉತ್ತರ ಕನ್ನಡದಲ್ಲಿ ಡಾಕ್ಟರ್ ಚಲೋ ಇದ್ದಾರೆ. ಆದರೆ ವ್ಯವಸ್ಥೆನೆ ಸರಿಯಾಗಿ ಇಲ್ಲ. ಇಲ್ಲಿ ಕುಟುಕುಟಿ ಯಾವಾಗ ಶುರು ಮಾಡುವ, ಓಸಿ ಯಾವಾಗ ಶುರು ಮಾಡುವ, ಕ್ಲಬ್ ಯಾವಾಗ ಶುರು ಮಾಡುವ ಇದೇ ಚಿಂತೆ. ಇಲ್ಲಿ ಹೊರತು! ಆಸ್ಪತ್ರೆ ಮಾಡುವ ಚಿಂತೆ ಯಾರಿಗೂ ಇಲ್ಲ ಅಪ್ಪ! ದೊಡ್ಡ ದೊಡ್ಡ ಕೇಸ್ ಬಂದರೆ ಮಣಿಪಾಲ್ ಹೋಗಬೇಕಂತೆ! ಹೋಗ್ತಾ ಹೋಗ್ತಾ ದಾರಿಲಿ ಆ ಜನ ಸಾಯ್ತಾರೆ . ಈ ಸರ್ಕಾರಕ್ಕೆ ನಮ್ಮ ಉತ್ತರ ಕನ್ನಡ ದೊಡ್ಡ್ ಆಸ್ಪತ್ರೆ ಬಗ್ಗೆ ಯಾವಾಗ ಕಾಣುತ್ತದೆಯೋ ಏನು?..ಎಂದು ನಿರಾಸೆದಾಯಕವಾಗಿ ನುಡಿದಿದ್ದಾನೆ.

ಕೊನೆಯದಾಗಿ ಪ್ಲೀಸ್ ಸಪೋರ್ಟ್ ಮಾಡಿ. ನಮ್ಮ ಉತ್ತರ ಕನ್ನಡದಲ್ಲೊಂದು ” ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್” ಗಾಗಿ ಇದು ನಮ್ಮ ಉತ್ತರ ಕನ್ನಡದ ಕೂಗು ಎಂದು ಬರೆದು ಅಂತ್ಯ ಗೊಳಿಸಿದ್ದಾರೆ. ರಿಲ್ಸ್ ಗಳು ಕೇವಲ ಮನೋರಂಜನೆ ಮಾತ್ರವಲ್ಲ. ಈ ರಿಲ್ಸ್ ಗಳಿಂದ ಸಾರ್ವಜನಿಕ ಜವಾಬ್ದಾರಿಯನ್ನು ಸಂಬಂಧಪಟ್ಟವರಿಗೆ ಎಚ್ಚರಿಸುವುದು ಸಾರ್ವಜನಿಕ ಸೇವಕರ ಕರ್ತವ್ಯ ಪ್ರಶ್ನೆಯಲ್ಲಿ ಬದಲಾವಣೆ ತರಲು ಕೂಡ ಪ್ರಮುಖ ಪಾತ್ರ ವಹಿಸುತ್ತದೆ..

ಸದರಿ ತಂದೆ ಮಗನ ಆಸ್ಪತ್ರೆ ಕುರಿತಾದಂತೆ ಮಾಡಿದ ರೀಲ್ಸ್ ಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ಮೆಚ್ಚುಗೆ ಗಳಿಸಿದ್ದು. “ಮಸ್ಕರಿ ಪೊರ್ಗಳು ” ಅಂಕೋಲಾದ ವಾಟ್ಸಾಪ್ ಗ್ರೂಪ್ ಕೂಡ ವಿಕಾಸ ವಾಹಿನಿಯ ಮೂಲಕ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತದೆ.

Share This Article
Leave a Comment