ಅಂಕೋಲಾ: ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಿದ ಶಿಕ್ಷಣ ತಜ್ಞೆ ಪ್ರೇಮಾತಾಯಿ ಪಿಕಳೆಯವರ ಹದಿನಾಲ್ಕನೇ ವರ್ಷದ ಪುಣ್ಯತಿಥಿ ಇಂದು ದಿನಾಂಕ 26-11-2025,ರಂದು ಭಾವಪೂರ್ಣವಾಗಿ ಆಚರಿಸಲಾಯಿತು. ಆವರಣದಲ್ಲಿರುವ ಅವರ ಸಮಾಧಿಗೆ ಪೂಜೆ ನೆರವೇರಿಸಿ, ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಗೌರವಿಸಲಾಯಿತು.
ಕಾರ್ಯಕ್ರಮವು ಸ್ಥಳೀಯ ಸಮೂಹ ಸಂಸ್ಥೆಯ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ್ ಅವರ ನೇತೃತ್ವದಲ್ಲಿ ನಡೆಯಿತು. ಸುಂದರ ನಾರಾಯಣ ದೇವಾಲಯದ ಅರ್ಚಕರಾದ ಕೇಶವ ಭಟ್ ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಡಾ. ಮೀನಲ್ ನಾರ್ವೇಕರ, ನಿವೃತ್ತ ಪ್ರಾಚಾರ್ಯೆ ಗೀತಾ ಗಾಂವ್ಕರ್, ನಿವೃತ್ತ ಮುಖ್ಯೋದ್ಯಾಪಕ ಎಂ.ಎಂ. ಕರ್ಕಿಕರ್, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಭಾಗವಹಿಸಿ, ಪ್ರೇಮಾತಾಯಿ ಅವರ ಸ್ಮರಣೆಗೆ ಗೌರವ ಸಲ್ಲಿಸಿದರು.
ಕಾರ್ಯಕ್ರಮದ ನಂತರ, ಪ್ರತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೇಮಾತಾಯಿ ಪಿಕಳೆಯವರ ಹೋರಾಟ, ಅವರ ಶಿಕ್ಷಣ ಕ್ಷೇತ್ರದ ಸೇವೆ ಹಾಗೂ ವಿದ್ಯಾರ್ಥಿಗಳಿಗಾಗಿ ಮಾಡಿದ ತ್ಯಾಗಮಯ ಸಾಹಸಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ.
ವರದಿ: ಕಿರಣ ಗಾಂವಕರ

