
ಅಂಕೋಲಾ : ಬಸ್ಸಿನಲ್ಲಿ ಪುರುಷರಿಗಾಗಿ ಮೀಸಲಾಗಿರುವ ಆಸನವನ್ನು ಪುರುಷರಿಗೇ ಬಿಟ್ಟುಕೊಡಿ ಎಂದು ಮೈಸೂರಿನ ವಿಷ್ಣುವರ್ಧನ್ ಎಸ್ ಎಂಬುವರು ಕೆ.ಎಸ್. ಆರ್.ಟಿ.ಸಿ ಕೇಂದ್ರ ಕಚೇರಿಗೆ ದೂರು ಸಲ್ಲಿಸಿದ್ದರು.ಈ ದೂರಿಗೆ ಕಾರಣ ಮಹಿಳೆಯರಿಗೆ ನೀಡಿರುವ ಉಚಿತ ಪ್ರಯಾಣದ ಇಫೆಕ್ಟ್ ಎನ್ನಲಾಗಿದೆ .
ಕರ್ನಾಟಕ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈಗ ಬಸ್ ನಲ್ಲಿ ಪುರುಷರಿಗೆ ಆಸನವೂ ಸಿಗದಂತಾಗಿದೆ.
ಇದುವರೆಗೆ ಪುರುಷರ ಸೀಟಿನಲ್ಲಿ ಪುರುಷರೇ ಕೂರಬೇಕೆಂದು ಕಡ್ಡಾಯವೇನೂ ಇರಲಿಲ್ಲ. ಆದರೆ ಇದೀಗ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದರಿಂದ ಪುರುಷರ ಆಸನವನ್ನು ಪುರುಷರಿಗೇ ಕಡ್ಡಾಯ ಮಾಡುವುದು ಅನಿವಾರ್ಯವಾಗಿದೆ.
ಇದೀಗ ಮೈಸೂರು ಕೆ.ಎಸ್.ಆರ್.ಟಿ.ಸಿ ವಿಭಾಗ ಈ ವಿಚಾರದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪುರುಷರ ಆಸನವನ್ನು ಪುರುಷರಿಗೇ ಬಿಟ್ಟುಕೊಡಬೇಕು ಎಂದು ಸೂಚನೆ ನೀಡಿದೆ. ಪ್ರಯಾಣಿಕ ವಿಷ್ಣುವರ್ಧನ್ ಎಸ್ ನೀಡಿದ ದೂರಿನ ಅನ್ವಯ ಕೆ.ಎಸ್.ಆರ್.ಟಿ.ಸಿ ಈ ಆದೇಶ ಹೊರಡಿಸಿದೆ.

ಸರ್ಕಾರದ ಸಾರಿಗೆ ಸಂಸ್ಥೆಯ 4 ನಿಗಮಕ್ಕೂ ಈ ಆದೇಶ ಅನ್ವಯಿಸುತ್ತಾ? ಅಂಕೋಲಾ ಘಟಕ ವ್ಯವಸ್ಥಾಪಕರ ಹೇಳಿಕೆಯೇನು?
ವಿಕಾಸವಾಹಿನಿಯು ಈ ಬಗ್ಗೆ ಮೈಸೂರು ನಗರ ವಿಭಾಗದಲ್ಲಿ ಪುರುಷರಿಗೆ ಮೀಸಲಿಟ್ಟಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರೆ ಕುಳಿತು ಪ್ರಯಾಣ ಮಾಡಲು ಹೊರಡಿಸಿರುವ ಆದೇಶದ ಕುರಿತಂತೆ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪುರುಷ ಪ್ರಯಾಣಿಕರಿಗೆ ನಿಗದಿಪಡಿಸಿದ ಆಸನಗಳ ಬಗ್ಗೆ. ಮತ್ತು ಸದರಿ ವಿಷಯದ ಸಾಧಕ ಬಾದಕದ ಬಗ್ಗೆ ಪ್ರಶ್ನೆ ಕೇಳಲಾಗಿ ಪ್ರತಿಕ್ರಿಯಿಸಿದ ಅಂಕೋಲಾ ಘಟಕ ವ್ಯವಸ್ಥಾಪಕರಾದ ಚೈತನ್ಯ ಅಗಳಗಟ್ಟಿ ಅವರು ಮಾತನಾಡಿ
ಸಾರಿಗೆ ಸಂಸ್ಥೆಯಲ್ಲಿ 4 ನಿಗಮಗಳಿದ್ದು , ಅವುಗಳಲ್ಲಿ 1) ಕೆ. ಎಸ್.ಆರ್.ಟಿ .ಸಿ 2) ಕೆ.ಕೆ.ಆರ್.ಟಿ.ಸಿ 3) ಬಿ.ಎಂ.ಟಿ.ಸಿ 4) ಏನ್.ಡಬ್ಲ್ಯೂ. ಕೆ.ಆರ್.ಟಿ.ಸಿ. ಇವುಗಳು ಪ್ರಮುಖವಾಗಿದ್ದು. ಕೆ ಎಸ್ ಆರ್ ಟಿ ಸಿ ಯ ಮೈಸೂರು ವಿಭಾಗದಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಸ್ಥಳದಲ್ಲಿ ಪುರುಷರಿಗೆ ಪ್ರಯಾಣಿಸಲು ಆದೇಶವಾಗಿದ್ದು.ನಮ್ಮ ಗಮನಕ್ಕೆ ಬಂದಿದೆ.
ಕೆ ಎಸ್ ಆರ್ ಟಿ ಸಿ ಯಲ್ಲಿ ಮಹಿಳೆಯರಿಗೆ 33% ಆಸನಗಳನ್ನು ಕಾಯ್ದಿರಿಸಿದ್ದು. ಪುರುಷರಿಗೆ 67% ಆಸನಗಳನ್ನು ಕಾಯ್ದಿರಿಸಲಾಗಿದೆ.

ಆದರೆ 67% ಆಸನಗಳನ್ನು ಪುರುಷರಿಗೆ ನೀಡುವುದರಿಂದ ದೂರದ ಊರುಗಳಿಗೆ ಹೋಗುವ ಮಹಿಳಾ ಪ್ರಯಾಣಿಕರಿಗೂ ಇದರಿಂದ ಸಮಸ್ಯೆಯಾಗುತ್ತದೆ. ಆದಕಾರಣ 50% ಮಹಿಳಾ ಪ್ರಯಾಣಿಕರಿಗೆ . 50% ಪುರುಷ ಪ್ರಯಾಣಿಕರಿಗೆ ಆಸನಗಳನ್ನು ಮೀಸಲಿಡುವ ನಿಯಮಾವಳಿಗಳನ್ನು ಜಾರಿಗೆ ತಂದರೆ ಮಹಿಳಾ ಹಾಗೂ ಪುರುಷ ಪ್ರಯಾಣಿಕರಿಗೂ ಪ್ರಯಾಣಿಸುವ ಸಮಾನ ಹಕ್ಕನ್ನು ನೀಡಿದಂತಾಗುತ್ತದೆ ಎಂದು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅದೇ ರೀತಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 33% ಮಹಿಳೆಯರಿಗೆ ಆಸನವನ್ನು ಮೀಸಲಿಟ್ಟಿದ್ದು ಹಾಗೂ 67% ಜನರಲ ಆಗಿ ಮೀಸಲಿಟ್ಟಿದ್ದು ಇಲ್ಲಿ ಪುರುಷ ಹಾಗೂ ಮಹಿಳೆಯರು ಯಾರೂ ಬೇಕಾದರೂ ಕುಳಿತುಕೊಳ್ಳಬಹುದು. ಎಂಬ ನಿಯಮವಿದೆ.. ನಮ್ಮಲ್ಲಿಯೂ ಕೂಡ 67% ಜನರಲ್ ಗಾಗಿ ಮೀಸಲಿಟ್ಟಿದ್ದರಿಂದ ಅಷ್ಟೇನು ಸಮಸ್ಯೆ ಆಗಿಲ್ಲ.. ಪುರುಷ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ ಮಹಿಳಾ ಪ್ರಯಾಣಿಕರ ಕುಳಿತುಕೊಳ್ಳುವ ಬಗ್ಗೆ ಇದುವರೆಗೆ ತಮಗೆ ಅಂತಹ ಯಾವುದೇ ದೂರುಗಳನ್ನು ಬಂದಿಲ್ಲ. ಅಂತಹ ದೂರಗಳೆನಾದರೂ ಬಂದಲ್ಲಿ ಖಂಡಿತ ಸದರಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ. ಮೇಲಾಧಿಕಾರಿಗಳ ಸಲಹೆಯ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.

ಅಂತೂ ಮಹಿಳೆಯರಿಗೆ ಕರ್ನಾಟಕ ಸರ್ಕಾರದಿಂದ ಉಚಿತ ಟಿಕೆಟ್ ನೀಡಿದಾಗಿಂದ ಪುರುಷ ಪ್ರಯಾಣಿಕರಿಗೆ ಬಸ್ಸಿನಲ್ಲಿ ಆಸನ ಸಿಗದೇ ಪರದಾಡುವ ಪರಿಸ್ಥಿತಿ ಇದ್ದು . ಪ್ರತಿನಿತ್ಯ ಬಸ್ ಗಳೆಲ್ಲ ಮಹಿಳೆಯರಿಂದ ತುಂಬಿ ತುಳುಕುತ್ತಿದೆ .. ಮೈಸೂರಿನ ವಿಷ್ಣುವರ್ಧನ್ ರವರ ದೂರು ಅರ್ಜಿ ಯಂತೆ ಕ್ರಮ ಕೈಗೊಂಡ ಕೇಂದ್ರ ಸಾರಿಗೆ ಸಂಸ್ಥೆಯು ಪುರುಷರಿಗೆ ನಿಗದಿ ಪಡಿಸಿದ ಆಸನದಲ್ಲಿ ಪುರುಷರು ಕುಳಿತುಕೊಳ್ಳಲು ತನ್ನ 4 ನಿಗಮಕ್ಕೂ ಈ ಆದೇಶ ಜಾರಿಗೊಳಿಸಬೇಕಾಗಿ ಪುರುಷ ಪ್ರಯಾಣಿಕರ ಪರವಾಗಿ ವಿಕಾಸ ವಾಹಿನಿಯು ಸರ್ಕಾರಕ್ಕೆ ಆಗ್ರಹಿಸುತ್ತದೆ.
ವರದಿ: ಕಿರಣ ಚಂದ್ರಹಾಸ ಗಾಂವಕರ
..

