ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ರಾಷ್ಟ್ರೀಯ ಸೇವಾ ಯೋಜನಾ (NSS) ಕೋಶವು, ವಿಶ್ವವಿದ್ಯಾಲಯ ಮಟ್ಟದ ಡಾ. ಡಿ.ಸಿ. ಪಾವಟೆ ಎನ್‌ಎಸ್‌ಎಸ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಆಯೋಜಿಸಿತ್ತು.
ಈ ಸಂದರ್ಭದಲ್ಲಿ 2023-24ನೇ ಸಾಲಿನ ಡಾ. ಡಿ.ಸಿ. ಪಾವಟೆ ಉತ್ತಮ ಎನ್‌ಎಸ್‌ಎಸ್ ಅಧಿಕಾರಿ ಪ್ರಶಸ್ತಿವನ್ನು ಕೆಎಲ್ಇ ಸಂಸ್ಥೆಯ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯ, ಅಂಕೋಲಾದ ಉಪನ್ಯಾಸಕರಾದ ರಾಘವೇಂದ್ರ ಅಂಕೋಲೆಕರ್ ಅವರಿಗೆ ಪ್ರದಾನ ಮಾಡಲಾಯಿತು.ಅದೇ ರೀತಿಯಲ್ಲಿ, ಉತ್ತಮ ಎನ್‌ಎಸ್‌ಎಸ್ ಘಟಕ ಪ್ರಶಸ್ತಿವನ್ನು ಕಾಲೇಜಿನ ಪ್ರಾಚಾರ್ಯರಾದ ಡಾ. ವಿನಾಯಕ ಜಿ. ಹೆಗಡೆ ಅವರಿಗೆ ಪ್ರಧಾನ ಮಾಡಲಾಯಿತು.

ಪ್ರಶಸ್ತಿಗಳನ್ನು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಅರವಿಂದ ಮೂಲಿಮನಿ, ಮೌಲ್ಯಮಾಪನ ಕುಲಸಚಿವ ಡಾ. ನಿಜಲಿಂಗಪ್ಪ ಮಟ್ಟಿಹಾಳ, ಹಾಗೂ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಎಂ. ಬಿ. ದಳಪತಿ ಅವರು ವಿತರಿಸಿದರು.
ಈ ಸಾಧನೆಗೆ ಸಂಸ್ಥೆಯ ಕಾರ್ಯಧ್ಯಕ್ಷ ಡಾ. ಪ್ರಭಾಕರ ಕೋರೆ, ಬಿ.ಇಡ್ ವಿಭಾಗದ ಅಧ್ಯಕ್ಷ ಜಯಾನಂದ ಮುನವಳ್ಳಿ, ಸದಸ್ಯ ಕಾರ್ಯದರ್ಶಿ ಮಹಾದೇವ ಬಳಿಗಾರ, ಸ್ಥಳೀಯ ಸಮೂಹ ಸಂಸ್ಥೆಯ ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ, ಸಂಯೋಜಕರಾದ ಆರ್. ನಟರಾಜ್, ಸದಸ್ಯೆ ಡಾ. ಮೀನಲ್ ನಾರ್ವೇಕರ ಸೇರಿದಂತೆ ಸಮಸ್ತ ಕೆಎಲ್ಇ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಕಿರಣ ಗಾಂವಕರ

