
ಅಂಕೋಲಾ : ತಾಲೂಕಿನ ಉಪ ನೊಂದಣಾಧಿಕಾರಿಗಳು ಕಳೆದ ಕೆಲವು ತಿಂಗಳಿಂದ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ಬರುವುದನ್ನು ಮರೆತುಬಿಟ್ಟಿದ್ದು. ಪ್ರತಿ ದಿನ 11:30ಕ್ಕೆ ಕಚೇರಿಗೆ ಆಗಮಿಸುತ್ತಿರುವ ಸಾಕಷ್ಟು ಸಾರ್ವಜನಿಕ ಚರ್ಚೆ-ಗೀಡು ಮಾಡಿದೆ..
ಈ ಹಿಂದೆ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಉಪನೊಂದಣಾದಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಸುದ್ದಿಯನ್ನು ಬಿತ್ತರ ಮಾಡಿತ್ತು. ಆದರೆ ಇದ್ಯಾವುದನ್ನು ತಲೆ ಕೆಡಿಸಿಕೊಳ್ಳದೆ ಸಾರ್ವಜನಿಕ ಸೇವಕರಾದ ನಮ್ಮ ತಾಲೂಕಿನ ಉಪ ನೊಂದಣಾಧಿಕಾರಿಗಳು ಪ್ರತಿನಿತ್ಯ ಎನ್ನುವಂತೆ ಬೆಳಗ್ಗೆ 11:30ಕ್ಕೆ ಒಂದೊಂದು ದಿನ 12 ಹೀಗೆ ಮನಸ್ಸಿಗೆ ಕಂಡಂತೆ ಕಚೇರಿಗೆ ಬರುತ್ತಿರುವುದರಿಂದ ಸದ್ರಿ ಅಧಿಕಾರಿಗಳ ಕರ್ತವ್ಯ ಬದ್ಧತೆ ಶಿಸ್ತುನ್ನು ತೋರ್ಪಡಿಸುವುದರ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ತಾಲೂಕಿನ ಬೇರೆ ಎಲ್ಲಾ ಕಚೇರಿಗೆ ಹೋಲಿಸಿದರೆ ಅಂಕೋಲಾದ ಸಬ್ ರಿಜಿಸ್ಟರ್ ಕಚೇರಿಯು ಕಡ್ಡಾಯವಾಗಿ 10 ಗಂಟೆ ಒಳಗೆ ತೆರೆದಿಡಬೇಕು. ಮತ್ತು ಅಧಿಕಾರಿಗಳು ಹಾಜರಿರಲೇಬೇಕು. ಕಾರಣ ಆನ್ಲೈನ್ ನಲ್ಲಿ ವಿವಿಧ ತರಹದ ರಿಜಿಸ್ಟ್ರೇಷನ್ ಗಳನ್ನು ಮಾಡಲು ಸಾರ್ವಜನಿಕರು ಸ್ಲಾಟ್ಗಳನ್ನು ಬುಕ್ ಮಾಡುತ್ತಾರೆ. ಇದರಂತೆ ಬೆಳಿಗ್ಗೆ 10:15ಕ್ಕೆ ನಿಗದಿಪಡಿಸಿದ ಸ್ಲಾಟ್ಗಳನ್ನು ಪ್ರಾರಂಭವಾಗುತ್ತದೆ. ಆ ವೇಳೆ ಉಪನೊಂದಾವಣಿ ಅಧಿಕಾರಿಗಳು ಸದರಿ ಬುಕಿಂಗ್ ಆದ ಸ್ಲಾಟ್ಗಳನ್ನು ಪಾಸ್ವರ್ಡ್ ಅನ್ನು ಹಾಕಿ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಸಲೇಬೇಕಾಗುತ್ತದೆ .
ಆದರೆ ಅಂಕೋಲಾದಲ್ಲಿ ಮಾತ್ರ ಉಪನೊಂದಾವಣೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ದೂರದ ಕಾರವಾರದಿಂದ ಬರುತ್ತಿರುವ ಕಾರಣ ಪ್ರತಿನಿತ್ಯ ಲೇಟಾಗಿ ಬರುವುದು ವಾಡಿಕೆ ಯಾಗಿದೆ. ಸದ್ರಿ ಕಚೇರಿಯಲ್ಲಿ ಉಪನೊಂದಾವಣಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಖಾಸಗಿ ಮೂಲದ ಕೆಲವು ಸಿಬ್ಬಂದಿಗಳು ಕಳೆದ ಕೆಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು . ಇವರಿಗೆ ಸಬ್ ರಿಜಿಸ್ಟರ್ ಪ್ರಕ್ರಿಯೆ ಬಗ್ಗೆ ಸಾಕಷ್ಟು ತರಬೇತಿಗಳು ಇದ್ದು. ಇವರು ಕಚೇರಿಗೆ ಬೇಗ ಬಂದು ಉಪ ನೊಂದಣಿ ಅಧಿಕಾರಿಗಳು ಮಾಡಬೇಕಾದ ಕರ್ತವ್ಯವನ್ನು ಇವರೇ ನಿಭಾಯಿಸುತ್ತಾರೆ.

ಕಚೇರಿಗೆ ಸಮಯಕ್ಕೆ ಉಪ ನೊಂದಣಿ ಅಧಿಕಾರಿ ಬರದಿದ್ದರೂ ಇವರು ಉಪ ನೊಂದಣಿ ಅಧಿಕಾರಿಗಳ ಲಾಗಿನಿಂದ್ ನಿಗದಿಪಡಿಸಿರುವ ಸ್ಲಾಟ್ ಗಳನ್ನು ಮೊದಲೇ ಪಾಸ್ ಮಾಡಿಕೊಂಡು ಉಪನೊಂದಣಿ ಅಧಿಕಾರಿ ಕಚೇರಿಗೆ ಬಂದ ನಂತರ ಅಂತಿಮ ಹಂತದ ನೊಂದಣಿ ಪ್ರಕ್ರಿಯೆಗಳು ನಡೆಯುತ್ತದೆ.. ಈ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು… ಇಲ್ಲಿ ಒಂದು ವೇಳೆ ಲೋಕಾಯುಕ್ತ ಅಧಿಕಾರಿಗಳು ರೈಡು ಮಾಡಿದಲ್ಲಿ ಸದರಿ ಸಿಬ್ಬಂದಿಗಳ ಜೊತೆಗೆ ಅಧಿಕಾರಿಗಳು ಜೈಲು ಊಟಮಾಡೋದು ಗ್ಯಾರೆಂಟಿ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ…..
ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಗೂ ಸಿಸಿಟಿವಿ ಅಳವಡಿಸಿಲ್ಲದ ಕಾರಣ ಇಲ್ಲಿನ ವ್ಯವಸ್ಥೆ . ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಕಡಿವಾಣವೇ ಹಾಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ … ದೂರದ ಊರುಗಳಿಂದ ವಿವಿಧ ತರಹದ ನೋಂದಣಿ ಕಾರ್ಯವನ್ನು ಮಾಡಲು ಬರುತ್ತಿರುವ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕೆಲಸವಾಗದೆ . ಅನಾನುಕೂಲ ಉಂಟಾಗುತ್ತಿದ್ದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸದರಿ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಕಚೇರಿಗೆ ವಿಳಂಬವಾಗಿ ಬರುತ್ತಿರುವ ಉಪ ನೊಂದಣಿ ಅಧಿಕಾರಿಗಳಿಗೆ ಕರ್ತವ್ಯ ಪ್ರಜ್ಞೆ ಮತ್ತು ಶಿಸ್ತನ್ನು ಮೂಡಿಸಲು ಸೂಕ್ತ ಕ್ರಮ ಜರುಗಿಸಲು ವಿಕಾಸ ವಾಹಿನಿ ಈ ಮೂಲಕ ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ.

