ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಪೈಪೋಟಿ ಹಿನ್ನಲೆ: ಅಂಕೋಲಾದ ವಂದಿಗೆಯ ಅಮಾಯಕ ಯುವಕನಿಗೆ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ..

News Desk
2 Min Read

ಅಂಕೋಲಾ : ಕೆಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕಾಗಿ ನಡೆಯುತ್ತಿರುವ ರಾಜಕೀಯ ಪೈಪೋಟಿಯಿಂದಾಗಿ ಅತಿ ದುರಂತವಾಗಿ ಯುವಕನ ಮೇಲೆ ಹಲ್ಲೆಗೆ ಕಾರಣವಾಗಿದೆ. ಈ ಘಟನೆ ರೋಹನ್ ನಾಯಕ ಅವರ ತಲೆಗೆ ಗಂಭೀರ ಗಾಯ ಉಂಟುಮಾಡಿದ್ದು, ಪಟ್ಟಣದಲ್ಲಿ ಭೀತಿ ಮತ್ತು ಚರ್ಚೆಗೆ ಕಾರಣವಾಗಿದೆ.

ದೂರುದಾರ ರೋಹನ್ ನಾಯಕ (ವಯಸ್ಸು 30, ಉದ್ಯೋಗ: ಅಂಗಡಿ ವ್ಯವಹಾರ, ಡಿಪೋ ಕ್ರಾಸ್, ವಂದಿಗೆ, ಅಂಕೋಲಾ) ಅವರು ತಮ್ಮ ಅಣ್ಣ ರಂಜಿತ ರಾಮದಾಸ ನಾಯಕರ ವಿರುದ್ಧ ಘಟಿಸಿದ ಹಲ್ಲೆಯನ್ನು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದರು. ರಂಜಿತ ನಾಯಕರು ವಂದಿಗೆಯ ರೈತರ ಸೇವಾ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿದ್ದು, ಬ್ಯಾಂಕ್ ನಿರ್ದೇಶಕರ ಚುನಾವಣೆಗೆ ಸಂಬಂಧಿಸಿದ ಡೆಲಿಗೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ಅಡ್ಲುರು ಗ್ರಾಮದ ಗೋಪಾಲಕೃಷ್ಣ ರಾಮಚಂದ್ರ ನಾಯಕ ಮತ್ತು ಸೂರಜ ಹಮ್ಮಣ್ಣ ನಾಯಕ ಒತ್ತಡ ಹಾಕಿದರೆಂದು ದೂರಿನಲ್ಲಿ ತಿಳಿಸಿದ್ದಾರೆ.

ರಂಜಿತ ನಾಯಕರು ಒತ್ತಡ ತಿರಸ್ಕರಿದ ಕಾರಣ, ಸಂಘದೊಳಗಿನ ರಾಜಕೀಯ ಪೈಪೋಟಿ ವೈಯಕ್ತಿಕ ದ್ವೇಷಕ್ಕೆ ಪರಿಗಣನೆಯಾಗಿ, ಅವರ ತಮ್ಮ ಅಮಾಯಕ ರೋಹನ್ ಮೇಲೆ ಹಲ್ಲೆಗೆ ತುತ್ತಾದ ಘಟನೆ ಸಂಭವಿಸಿದೆ.

ಘಟನೆ ಸೆಪ್ಟೆಂಬರ್ 21, 2025, ರಾತ್ರಿ 11 ಗಂಟೆಯ ಸುಮಾರಿಗೆ, ರೋಹನ್ ನಾಯಕ ಮನೆ ಹತ್ತಿರ ನಡೆದಿದ್ದು, ನಾಲ್ಕು ಮಂದಿ ಹಲ್ಲೆ ನಡೆಸಿದರು.

ರೋಹನ್ ನಾಯಕ ಲಿಖಿತ ದೂರಿನಲ್ಲಿ ವಿವರಿಸಿರುವಂತೆ: ಸಮೃದ್ದ (ಚಿನ್ನು) ಸುಭಾಶ ನಾಯಕ (ಭಾವಿಕೇರಿ), ಪ್ರೀತಮ್ ಗೋಪಾಲ ನಾಯಕ (ವಂದಿಗೆ), ಹನೀಶ ಬೀರಣ್ಣ ನಾಯಕ (ವಂದಿಗೆ), ರಾಮಚಂದ್ರ ಹರೀಶ ನಾಯಕ (ವಂದಿಗೆ). ಇವರು ಬೈಕ್‌ಗಳಲ್ಲಿ ಬಂದು, ಒಂದು ಆರೋಪಿಯು ಕೈಯಲ್ಲಿ ಹಿಡಿದಿದ್ದ ಕಬ್ಬಿಣದ ಬಳೆಯಿಂದ ತಲೆಗೆ ಪದೆ ಪದೆ ಹೊಡೆದು ಗಂಭೀರ ಗಾಯಕ್ಕೆ ಕಾರಣರಾದರು.

ಹಲ್ಲೆಗೆ ಪ್ರೇರಣೆ ನೀಡಿದವರು ಇಬ್ಬರು, ರೋಹನ್ ದೂರಿನ ಪ್ರಕಾರ: ಗೋಪಾಲಕೃಷ್ಣ ರಾಮಚಂದ್ರ ನಾಯಕ (ಅಡ್ಲುರೂ) ಮತ್ತು ಸೂರಜ ಹಮ್ಮಣ್ಣ ನಾಯಕ (ವಂದಿಗೆ). ಇವರು ಪೂರ್ವ ಉದ್ದೇಶಪೂರ್ವಕವಾಗಿ ಉಳಿದ ನಾಲ್ಕು ಆರೋಪಿಗಳನ್ನು ಪ್ರಚೋದಿಸಿ, ಕುಮ್ಮಕ್ಕು ನೀಡಿ ಹಲ್ಲೆ ನಡೆಸಲು ಕಾರಣಿಕರ್ತರಾದವರು.

ಸದರಿ ರೋಹನ್ ನಾಯಕರ್ ದೂರು ಆದರಿಸಿ ಈ ಮೇಲಿನ 6 ಜನ ಆರೋಪಿಗಳ ಮೇಲೆ ಅಂಕೋಲಾ ಪೊಲೀಸ್ ಠಾಣೆ, ಗುನ್ನಾ ನಂ. 171/2025, ಭಾ.ದಂ.ಸಂ. 109, 118(1), 352, 49, 351(2) ಸಹಿತ 3(5) ಬಿ.ಏನ್ ಎಸ್ -2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ತಕ್ಷಣ ದೂರು ಆಗಿರುವುದರಿಂದ, ಪೊಲೀಸರು ಪ್ರಾಥಮಿಕ ತನಿಖೆಯನ್ನು ನಡೆಸುತ್ತಿದ್ದಾರೆ.

ಮಾನವೀಯ ಅಂಶದಲ್ಲಿ, ರೋಹನ್ ನಾಯಕ್ ಹಾಗೂ ರಂಜಿತ ನಾಯಕ ಅಣ್ಣ-ತಮ್ಮಂದಿರು ಸ್ನೇಹಜೀವಿ ಮತ್ತು ಶ್ರಮಜೀವಿ. ಮೊದಲಿಗೆ ಕೆಲ ಆರೋಪಿಗಳು ಅಣ್ಣ ತಮ್ಮಂದಿರಂತೆ ಇದ್ದರೂ, ರಾಜಕೀಯ ಪ್ರತಿಷ್ಠೆಗಾಗಿ ಉಂಟಾದ ವೈಷಮ್ಯದಿಂದ ಈ ಹಲ್ಲೆ ನಡೆದಿದ್ದು, ಪಟ್ಟಣದ ಜನರಲ್ಲಿ ಭಯ ಮತ್ತು ಆಕ್ರೋಶ ಉಂಟಾಗಿದೆ. ಸ್ಥಳೀಯರು ಈ ರೌಡಿಸಂ ತಕ್ಷಣ ತಡೆಯಬೇಕು ಎಂದು ಆಗ್ರಹಿಸುತ್ತಿದ್ದಾರೆ..

Share This Article