ಕರ್ನಾಟಕ ರಣಧೀರರ ವೇದಿಕೆ ಬಲಿಷ್ಠ ಹೆಜ್ಜೆ: ಕುಮಟಾ ಮತ್ತು ಭಟ್ಕಳ ಘಟಕಗಳ ಉದ್ಘಾಟನೆ – ಕರ್ನಾಟಕ ದಲ್ಲಿ ಕನ್ನಡಿಗನಿಗೆ ಅನ್ಯಾಯ ವಾದರೆ ಸಹಿಸಲ್ಲ- ಶಂಕರ್ ಗೌಡ್ರು ಕೆ.ಆರ್. ಸಂದೇಶ..

News Desk
2 Min Read

ಕುಮಟಾ: ಕರ್ನಾಟಕ ರಣಧೀರ ವೇದಿಕೆ ಕುಮಟಾ ಹಾಗೂ ಭಟ್ಕಳ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಕುಮಟಾದ ಮಿರ್ಜಾನ್‌ನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭವ್ಯವಾಗಿ ನೆರವೇರಿತು.

ಕಾರ್ಯಕ್ರಮಕ್ಕೆ ವೇದಿಕೆಯ ಸಂಸ್ಥಾಪಕ ರಾಗಿರುವ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಶಂಕರ ಗೌಡ್ರು ಕೆ.ಆರ್. ಅವರ ಜೊತೆಗೆ ರಾಜ್ಯ ಸಮಿತಿಯ ಹಲವು ಸದಸ್ಯರು ಬೆಂಗಳೂರಿನಿಂದ ಆಗಮಿಸಿದ್ದರು. ಮಹೇಶ್ ಗೌಡ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷೆ ಕುಮಾರಿ ಸುಪ್ರಿಯಾ ವಿಷ್ಣು ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ – “ಕನ್ನಡ ನಾಡು, ನುಡಿ, ನೆಲ, ಜಲದ ಬಗ್ಗೆ ನಮಗೆ ಸದಾ ಅಭಿಮಾನ ಇರಬೇಕು. ಅವಕ್ಕೆ ಧಕ್ಕೆ ಉಂಟಾದಾಗ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಜೊತೆಗೆ ಶೋಷಿತರ ಪರವಾಗಿ ನಿಲ್ಲುವ ಸಂಘಟನೆ ಆಗಬೇಕಿದೆ” ಎಂದು ಹೇಳಿದರು.

ಕರ್ನಾಟಕ ರಣಧೀರ ವೇದಿಕೆಯ ನೂತನ ಕುಮಟಾ ತಾಲೂಕು ಅಧ್ಯಕ್ಷರಾಗಿ ಸಮೀರ್ ಅಹಮದ್ ಮಹಮ್ಮದ್ ಗೌಸ ಹಾಗೂ ಭಟ್ಕಳದ ತಾಲೂಕು ಅಧ್ಯಕ್ಷರಾಗಿ ಮಂಜುನಾಥ ಶನಿಯಾರ ನಾಯ್ಕ ಅವರಿಗೆ ನೇಮಕಾತಿ ಮಾಡಿದ್ದೂ ಸದರಿಯವರಿಗೆ ನೇಮಕಾತಿ ಆದೇಶವನ್ನು ನೀಡಲಾಯಿತು. ಇದರ ಜೊತೆಗೆ ಕುಮಟಾ ಹಾಗೂ ಭಟ್ಕಳ ತಾಲೂಕಿನ ಇತರ ಪದಾಧಿಕಾರಿಗಳಿಗೂ ನೇಮಕಾತಿ ಆದೇಶ ಹಾಗೂ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷರು ಹಾಗೂ ಜಿಲ್ಲಾ ಅಧ್ಯಕ್ಷರಾದ ಶ್ರೀ ಸೂರಜ್ ಪಾಂಡುರಂಗ ನಾಯ್ಕ್ ಮಾತನಾಡಿ – “ಸಂಘಟನೆಯ ಪ್ರತಿಯೊಬ್ಬರೂ ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಜಿಲ್ಲಾಸಮಿತಿ ಹಾಗೂ ರಾಜ್ಯಾಧ್ಯಕ್ಷರು ಸದಾ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಮುಂದಿನ ದಿನಗಳಲ್ಲಿ ದಾಂಡೇಲಿ ಸೇರಿದಂತೆ ವಿವಿಧ ಘಟಕಗಳ ಉದ್ಘಾಟನೆ ನಡೆಯಲಿದೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪದಾಧಿಕಾರಿಗಳಾದ ಶ್ರೀ ಭೈರವ್, ಮೂರ್ತಿ, ಮಹೇಶ್ ಗೌಡ ಜಿ, ಪ್ರವೀಣ್ ಗೌಡ, ಶಿವರಾಜ್ ಗೌಡ ಹಾಗೂ ಲೋಕೇಶ್ ಎಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೂತನ ತಂಡಕ್ಕೆ ಶುಭ ಹಾರೈಸಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಸುಪ್ರಿಯಾ ವಿಷ್ಣು ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಶ್ರೀ ಕಿರಣ ಚಂದ್ರಹಾಸ್ ಗಾಂವಕರ ಹಾಗೂ ಉತ್ತರ ಕನ್ನಡ ಜಿಲ್ಲಾ ಘಟಕದ ಸರ್ವ ಪದಾಧಿಕಾರಿಗಳ ಸಾನ್ನಿಧ್ಯವು ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಈ ಸಂದರ್ಭದಲ್ಲಿ ಕುಮಟಾ ಮತ್ತು ಭಟ್ಕಳದ ನೂತನ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This Article