ಸುಡುವ ಬಿಸಿಲಿನಲ್ಲೂ ಬೆಲೇಕೇರಿ ಯಲ್ಲಿ ನೀರಿಗಾಗಿ ಹೋರಾಟ.

News Desk
3 Min Read

ಪೊಲೀಸರ ಬಿಗಿ ಬಂದೋಬಸ್ತ್ : ಪಂಚಾಯತ ಅಧಿಕಾರಿಗಳು ಹಾಗೂ ಸದಸ್ಯರಿಗೆ ಪ್ರತಿಭಟನಾಕಾರರಿಂದ ದಿಕ್ಕಾರ ಘೋಷಣೆ. ನೀರಿನ ಸಮಸ್ಯೆ ಬಗೆಹರಿಯದಿದ್ದರೆ 15 ದಿನದ ನಂತರ ಮತ್ತೆ ಪ್ರತಿಭಟನೆಯ ಎಚ್ಚರಿಕೆ..

ಅಂಕೋಲಾ : ತಾಲೂಕಿನ ಬೇಲೇಕೆರಿಯಲ್ಲಿ ದಿನಾಂಕ 13-02-2025 ರಂದು ಖಾರ್ವಿವಾಡ ಮತ್ತು ಬಂಗ್ಲೆವಾಡ. ಪೊಲೀಸ್ ಸ್ಟೇಷನ್ ವಾಡದ ಜನರು ನೀರಿಗಾಗಿ ಹೋರಾಟ ಹಮ್ಮಿಕೊಂಡಿದ್ದು. ಇಂದು ಬೆಳಿಗ್ಗೆ 10 ಗಂಟೆಗೆ ಬೆಲೇಕೆರಿಯ ದತ್ತಾತ್ರೇಯ ದೇವಸ್ಥಾನದ ಹತ್ತಿರ ಮೀನುಗಾರ ಮಹಿಳೆಯರು ಹಾಗೂ ಪುರುಷರು ನೂರಾರು ಸಂಖ್ಯೆಯಲ್ಲಿ ಸೇರಿದ್ದು. ಹೋರಾಟ ಪ್ರಾರಂಭವಾಗುವ ಮೊದಲು ಪದ್ಮಶ್ರೀ ಪುರಸ್ಕತೆ ಸುಕ್ರಿ ಬೊಮ್ಮ ಗೌಡ ಇವರ ನಿಧನದ ಹಿನ್ನೆಲೆ ಸುಕ್ರಜ್ಜಿಯ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನ ಆಚರಣೆಯನ್ನು ಆಚರಿಸಿ ನಂತರ ಪ್ರತಿಭಟನೆಯನ್ನು ಮುಂದುವರಿಸಿದರು. ಮೆರವಣಿಗೆ ಪೊಲೀಸ್ ಬಂದೋಬಸ್ತ್ ಅನ್ನು ನೀಡಲಾಗಿತ್ತು.

ಬೇಲಿಕೆರಿಯ ಮಹಿಳೆಯರು ಮತ್ತು ಪುರುಷರು ಮೆರವಣಿಗೆ ಮೂಲಕ ಹೋಗುವಾಗ ಪಂಚಾಯತ ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ.. ರೇಡಾರ್ ಗೆ ನೀರಿನ ಸಂಪರ್ಕ ನೀಡಿರುವ ಅಧಿಕಾರಿಗಳಿಗೆ ದಿಕ್ಕಾರ, ಅರ್ಜಿ ಕೊಟ್ಟರು ಸ್ಪಂದಿಸದ ಗ್ರಾಮ ಪಂಚಾಯಿತಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಹೊರಟು ಬೇಲಿಕೆರೆ ಪಂಚಾಯತಿ ಹತ್ತಿರ ಮೆರವಣಿಗೆ ಬಂದು ಮುಟ್ಟಿತು.

ಪ್ರತಿಭಟನಾಕಾರರು ಗ್ರಾಮ ಪಂಚಾಯತಿ ಕಚೇರಿ ಒಳಗಡೆ ನುಗ್ಗದಂತೆ ಅಂಕೋಲಾ ಪೊಲೀಸ್ ಇಲಾಖೆಯ ಪಿಎಸ್ಐ ಉದ್ದಪ್ಪ ಧರೆಪ್ಪನವರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಪಂಚಾಯತಿಯ ಸುತ್ತಮುತ್ತ ಬಿಗಿ ಬಂಧೋ ಬಸ್ತನ್ನು ಏರ್ಪಡಿಸಲಾಗಿತ್ತು.

ಬೆಲೇಕೇರಿಯ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಗೌಡ ಹಾಗೂ ಕೆಲವು ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು. ಪಂಚಾಯಿತಿ ಸದಸ್ಯರನ್ನು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು ಈಗಾಗಲೇ ಬೆಲೇಕೇರಿಯಲ್ಲಿ ತೀವ್ರತರನಾದ ನೀರಿನ ಸಮಸ್ಯೆ ಉಲ್ಬಣಿಸಿದೆ. ಜೆಜೆಎಂ ಕಾಮಗಾರಿಯಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ. ಅಂತರ್ಜಲವನ್ನು ಗುರುತಿಸದೆ ಒಂದುವರೆ ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸಿ ನೀರು ಬರದೇ ಹ್ಯಾಂಡವವರನ್ನು ತೆಗೆದುಕೊಂಡಿದ್ದು ಯಾಕೆ? ರೆಡಾರ್ ಗೆ ನೀರಿನ ಸಂಪರ್ಕ ಕೊಡುವಾಗ ಯಾಕೆ ಸ್ಥಳೀಯ ಜನರಿಗೆ ಮಾಹಿತಿ ನೀಡಿಲ್ಲ.. ಹೀರೆಕಟ್ಟದಲ್ಲಿ ನೀರಿನ ಬಾವಿತೋಡದಂತೆ ಪಂಚಾಯಿತಿಗೆ ಅರ್ಜಿಯನ್ನು ಕೊಟ್ಟವರು ಯಾರು? ಅವರ ಹೆಸರನ್ನು ಈ ಸಂದರ್ಭದಲ್ಲಿ ಹೇಳಿ? ನಾವು ಮತ ಹಾಕಿದ ಪಂಚಾಯಿತಿ ಸದಸ್ಯರು ಎಲ್ಲಿ ಹೋದರು ಅವರನ್ನು ಇಲ್ಲಿ ಕರೆಸಿ ಎಂದು ಪ್ರತಿಭಟನಾಕಾರರು ಬಿಗಿಪಟ್ಟು ಹಿಡಿದರು.. ಮಹಿಳೆಯರು ತಲೆಯ ಮೇಲೆ ಕೊಡ ಹಿಡಿದು ಪ್ರತಿಬಟಿಸುತ್ತಾ. ಪಂಚಾಯಿತಿಯ ಪಿಡಿಒ ಹಾಗೂ ಪಂಚಾಯಿತಿಯ ಸದಸ್ಯರಿಗೆ ವಿರುದ್ಧ ಜೋರಾಗಿ ಧಿಕ್ಕಾರವನ್ನು ಕೂಗಿದರು.

ಸುಡು ಬಿಸಿಲಿನಲ್ಲೂ ಘೋಷಣೆಗಳು ಜೋರಾಗಲು ಪ್ರಾರಂಭಿಸಿದಾಗ ಅಂಕೋಲಾ ಠಾಣೆಯ ಪೊಲೀಸ್ ಪಿಎಸ್ಐ ಪ್ರತಿಭಟನಕಾರರಿಗೆ ಶಾಂತವಾಗಿ ವರ್ತಿಸುವಂತೆ, ಹಾಗೂ ತಮ್ಮ ಸಮಸ್ಯೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪರಿಹಾರ ಪಡೆದುಕೊಳ್ಳುವಂತೆ. ಅಭಿವೃದ್ಧಿ ಅಧಿಕಾರಿಗಳಿಗೆ ಮಾತನಾಡಲು ಅವಕಾಶ ನೀಡಿ ಎಂದರು.

ಪಂಚಾಯತ್ ಅಭಿವೃದ್ಧಿ ಪೂರ್ಣಿಮಾ ಗೌಡರು ಮಾತನಾಡಿ ಈಗಾಗಲೇ 800 ಜನರಿಗೆ ಜಲಜೀವನ್ ಮಷೀನ್ ಯೋಜನೆಯಡಿ ನೀರಿನ ಸಂಪರ್ಕ ನೀಡಿದ್ದು.. 2.50 ಲಕ್ಷ ಲೀಟರ್ ಟ್ಯಾಂಕ್ ನೀರನ್ನು ಅರ್ಬನ್ ವಾಟರ್ ಹೊನ್ನಳ್ಳಿಯಿಂದ ಪ್ರತಿನಿತ್ಯ ಬೆಲೆಕೇರಿಗೆ ಸರಬರಾಜು ಮಾಡುತ್ತಿದ್ದು. ಆದರೂ ನೀರಿನ ಸಮಸ್ಯೆ ತಲೆದೋರುತ್ತಿದೆ . ಅದಕ್ಕೆ ಬೆಲೆಕೇರಿ ಪಂಚಾಯಿತಿಗೆ ನೀರಿನ ಪ್ರಮಾಣ ಸಾಕಾಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಹಾಗೂ ಹೀರೆಕಟ್ಟಾದಲ್ಲಿ ನೀರಿನ ಜಲ ಇದೆ.. ಅಲ್ಲಿ ಬಾವಿ ಕೋರೆಸಬಾರದು ಎಂದು ಪಂಚಾಯಿತಿಗೆ 21 ಜನರ ಸಹಿ ಹಾಕಿ ಸಾರ್ವಜನಿಕರು ಅರ್ಜಿಯನ್ನು ನೀಡಿದ್ದಾರೆ . ಹಾಗೂ ಹೀರೆಕಟ್ಟದಲ್ಲಿ ಗುರುತಿಸಿದ ಜಮೀನು ಅರಣ್ಯ ಇಲಾಖೆಯವರು ಆಗಿದೆ. ಹಾಗಾಗಿ ನಮಗೆ ಬಾವಿ ತೋಡಲು ಅನಾನುಕೂಲ ಉಂಟಾಗಿದೆ ಎಂದರು.

ಪ್ರತಿಭಟನಾಕಾರರು ಹಿರೆಕಟ್ಟಾದಲ್ಲಿ ಬಾವಿ ತೋಡಬಾರದು ಎಂದು ಯಾವ ಸಾರ್ವಜನಿಕರು ಅರ್ಜಿ ನೀಡಿದ್ದಾರೆ. ಅವರ ಹೆಸರನ್ನು ಹೇಳಿ ಎಂದು ಬಿಗಿಪಟ್ಟು ಹಿಡಿದರು . ಸಾರ್ವಜನಿಕರ ಆಕ್ರೋಶ ಕಾವೇರುತ್ತಿದ್ದಂತೆ ಪಿಡಿಓ ಸದರಿ ಅರ್ಜಿಯನ್ನು ಓದಿ ಹೇಳಿದರು. ಆ ಅರ್ಜಿಯಲ್ಲಿ ಪಂಚಾಯಿತಿ ಸದಸ್ಯರಿಬ್ಬರೂ ಸಹಿ ಹಾಕಿದ್ದು. ಜೊತೆಗೆ ಒಂದು ಸಮುದಾಯದವರೇ ಹೆಚ್ಚಾಗಿ ಸಹಿ ಹಾಕಿದ್ದು ಬಹು ಸಂಖ್ಯಾತ ಬೆಲೇಕೇರಿಯ ಮೀನುಗಾರರ ಮಹಿಳೆಯರು ಹಾಗೂ ಪುರುಷರು ತೀವ್ರ ಆಕ್ರೋಶವನ್ನು ಹೊರ ಹಾಕಿದರು. ಸದರಿ ಸಹಿ ಹಾಕಿದ ಸದಸ್ಯರಿಗೆ ಆ 21 ಜನ ಮಾತ್ರ ಮತ ಹಾಕಿದ್ದಾರೆಯೇ.. ನಾವ್ಯಾರು ಮತವನ್ನು ಹಾಕಿಲ್ಲವೇ? ನೀರನ್ನು ಕೊಡದೆ ಇದ್ದರೆ ನೀವೆಲ್ಲ ಯಾಕೆ ಬೇಕು.. ಜಲಜೀವನ್ ಮಷೀನ್ ಅಡಿ ಪಂಚಾಯಿತಿ ದವರು ಹಣ ಕೊಳ್ಳೆ ಹೊಡೆದಿದ್ದೀರಿ. ಎಂದಲ್ಲ ಕಿಡಿಕಾರಿದರು…

Share This Article
Leave a Comment