Connect with us

Published

on

ಸೆಲ್ಫಿ ಕೇಳುವ ನೆಪದಲ್ಲಿ ಬಂದ ಅಭಿಮಾನಿ ಅತಿರೇಕದಿಂದ ವರ್ತಿಸಿದ್ದಾನೆ. ಪೂನಂ ಪಾಂಡೆಗೆ ಬಲವಂತದಿಂದ ಕಿಸ್ ಮಾಡಲು ಪ್ರಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ವಿಡಿಯೋ ನೋಡಿದ ಬಳಿಕ ಇದೆಲ್ಲ ನಾಟಕ ಎಂಬ ಅನುಮಾನ ಅನೇಕರಿಗೆ ಮೂಡಿದೆ.

ನಟಿ, ಮಾಡೆಲ್ ಪೂನಂ ಪಾಂಡೆ ಅವರು ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿ ಆಗುತ್ತಾರೆ. ಅವರ ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಪೂನಂ ಪಾಂಡೆ ಅವರು ಕೆಲವೊಂದು ವಿವಾದ ಕೂಡ ಮಾಡಿಕೊಂಡ ಉದಾಹರಣೆಗಳು ಇವೆ. ಈಗ ಅವರ ಒಂದು ವಿಡಿಯೋ ವೈರಲ್ ಆಗುತ್ತಿದೆ. ಮುಂಬೈನ ಬೀದಿಯಲ್ಲಿ ಪೂನಂ ಪಾಂಡೆಗೆ ಅಭಿಮಾನಿಯೊಬ್ಬ ಬಲವಂತವಾಗಿ ಕಿಸ್ ಮಾಡಲು ಬಂದಿದ್ದಾನೆ. ಆಗ ಪೂನಂ ಪಾಂಡೆ ಅವರು ಹೆದರಿಕೊಂಡು ಪಕ್ಕಕ್ಕೆ ಸರಿದಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಪೂನಂ ಪಾಂಡೆ ಇದ್ದಲ್ಲಿ ಪಾಪರಾಜಿಗಳು ಮುಗಿಬೀಳುತ್ತಾರೆ. ಅವರ ಫೋಟೋ ಮತ್ತು ವಿಡಿಯೋ ಸಲುವಾಗಿ ಕ್ಯಾಮೆರಾ ಹಿಡಿದು ಓಡೋಡಿ ಬರುತ್ತಾರೆ. ಇನ್ನು, ಅಭಿಮಾನಿಗಳು ಕೂಡ ಸೆಲ್ಫಿಗಾಗಿ ಹಾತೊರೆಯುತ್ತಾರೆ. ಶುಕ್ರವಾರ (ಫೆಬ್ರವರಿ 21) ಮುಂಬೈನಲ್ಲಿ ಹೀಗೆಯೇ ಆಯಿತು. ಪೂನಂ ಪಾಂಡೆ ಅವರು ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು. ಆಗ ಒಬ್ಬ ಅಭಿಮಾನಿ ಎಂಟ್ರಿ ನೀಡಿದ.

ಪಾಪರಾಜಿಗಳು ಪೂನಂ ಪಾಂಡೆಯ ಫೋಟೋ ತೆಗೆಯುತ್ತಿದ್ದಾಗ ಅಭಿಮಾನಿಯೊಬ್ಬ ಸೆಲ್ಫಿ ಕೇಳಲು ಬಂದ. ಒಂದು ಅಡಿ ಅಂತರದಿಂದ ಸೆಲ್ಫಿ ನೀಡಲು ಪೂನಂ ಪಾಂಡೆ ಕೂಡ ಒಪ್ಪಿದರು. ಆದರೆ ಅಷ್ಟಕ್ಕೇ ಆ ವ್ಯಕ್ತಿ ಸುಮ್ಮನಾಗಲಿಲ್ಲ. ಇನ್ನೂ ಹತ್ತಿರ ಹತ್ತಿರ ಬರುತ್ತಾ ಪೂನಂ ಪಾಂಡೆಯ ಮುಖಕ್ಕೆ ಕಿಸ್​ ಮಾಡಲು ಪ್ರಯತ್ನಿಸಿದ. ಆಗ ಪೂನಂ ಪಾಂಡೆ ಗಾಬರಿಯಾಗಿ ಓಡಿ ಹೋದರು.

https://www.instagram.com/reel/DGVbgKoT3xn/embed/captioned/?cr=1&v=14&wp=675&rd=https%3A%2F%2Ftv9kannada.com&rp=%2Fentertainment%2Fbollywood%2Ffan-tries-to-kiss-poonam-pandey-video-goes-viral-entertainment-news-in-kannada-mdn-981562.html#%7B%22ci%22%3A0%2C%22os%22%3A29542.19999998808%2C%22ls%22%3A29009%2C%22le%22%3A29531.5%7D

ವೈರಲ್ ಆಗಿರುವ ಈ ವಿಡಿಯೋ ನೋಡಿದ ಅನೇಕರಿಗೆ ಅನುಮಾನ ಮೂಡಿದೆ. ಇದು ಬೇಕಂತಲೇ ಮಾಡಿರುವ ಡ್ರಾಮಾ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಈ ರೀತಿ ನಾಟಕ ಮಾಡಲಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ವೈರಲ್ ಆಗಬೇಕು, ಸುದ್ದಿ ಆಗಬೇಕು ಎಂಬ ಉದ್ದೇಶದಿಂದಲೇ ಪೂನಂ ಪಾಂಡೆ ಇದನ್ನೆಲ್ಲ ಮಾಡುತ್ತಾರೆ ಎಂದು ಅನೇಕರು ಟೀಕೆ ಮಾಡಿದ್ದಾರೆ. ಈ ಬಗ್ಗೆ ಇನ್ನಷ್ಟೇ ಅವರು ಪ್ರತಿಕ್ರಿಯೆ ನೀಡಬೇಕಿದೆ. ಸದ್ಯಕ್ಕಂತೂ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

ಪೂನಂ ಪಾಂಡೆ ಅವರ ಡ್ರಾಮಾ ಒಂದೆರಡಲ್ಲ. ಈ ಮೊದಲು ಅವರು ತಮ್ಮ ಸಾವಿನ ಸುಳ್ಳು ಸುದ್ದಿಯನ್ನು ಸ್ವತಃ ಹಬ್ಬಿಸಿದ್ದರು! ಬಳಿಕ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಆ ರೀತಿ ಮಾಡಿದ್ದಾಗಿ ತಿಳಿಸಿದ್ದರು. ಆಗ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು.

Click to comment

Leave a Reply

Your email address will not be published. Required fields are marked *

ಸಿನೆಮಾ

ನಿರ್ದೇಶಕನಾಗಬೇಕಿದ್ದ ಸುದೀಪ್ ಅವರು ಹೀರೋ ಆಗಿದ್ದು ಹೇಗೆ?

Temporibus autem quibusdam et aut officiis debitis aut rerum necessitatibus saepe eveniet ut et voluptates repudiandae sint et.

Published

on

Kichcha Sudeep: ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಸ್ಟಾರ್ ನಟ ಮಾತ್ರವಲ್ಲದೆ ಸ್ಟಾರ್ ಪ್ಯಾನ್ ಇಂಡಿಯಾ ನಟರೂ ಸಹ ಹೌದು. ಆದರೆ ಸುದೀಪ್​ಗೆ ನಟನೆ ಇಷ್ಟವಿರಲಿಲ್ಲ, ಅವರಿಗೆ ತಾವೊಬ್ಬ ಒಳ್ಳೆಯ ಸಿನಿಮಾ ನಿರ್ದೇಶಕ ಆಗಬೇಕು ಎಂಬ ಆಸೆಯಿತ್ತು. ನಿರ್ದೇಶಕನಾಗಬೇಕು ಎಂದುಕೊಂಡಿದ್ದ ಸುದೀಪ್ ನಟನಾಗಿದ್ದು ಹೇಗೆ?

ಸುದೀಪ್ ಅವರು ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗಮನ ಸೆಳೆದಿದ್ದಾರೆ. ಅವರು ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಮ್ಯಾಕ್ಸ್’ ಸಿನಿಮಾ ಯಶಸ್ಸು ಕಂಡಿದೆ. ಅವರು ಹೀರೋ ಆಗೋಕೆ ಕಾರಣ ಆಗಿದ್ದು ಉಪೇಂದ್ರ ಎಂಬ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಕೇಳಿ. ಈ ವಿಚಾರವನ್ನು ಉಪೇಂದ್ರ ಅವರು ಅನೇಕ ಬಾರಿ ಹೇಳಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರು ಹೀರೋ ಆಗಿ ಮಿಂಚುತ್ತಿದ್ದಾರೆ. ಆದರೆ, ಮೊದಲು ಅವರಲ್ಲಿ ಆ ರೀತಿಯ ಆಸೆಗಳೇ ಇರಲಿಲ್ಲ. ಅವರು ನಿರ್ದೇಶಕರಾಗಬೇಕು ಎಂದುಕೊಂಡಿದ್ದರು. ಇದನ್ನು ಉಪೇಂದ್ರ ಅವರು ಒಮ್ಮೆ ರಿವೀಲ್ ಮಾಡಿದ್ದರು. ಸುದೀಪ್ ಚಿತ್ರರಂಗಕ್ಕೆ ಬರುವಾಗ ಉಪೇಂದ್ರ ನಿರ್ದೇಶನದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಈ ಕಾರಣಕ್ಕೆ ಉಪೇಂದ್ರ ಬಳಿ ಅವಕಾಶ ಕೇಳಿಕೊಂಡು ಸುದೀಪ್ ಹೋಗಿದ್ದರಂತೆ.

‘ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಅವಕಾಶ ಕೊಡಿ’ ಎಂದು ಉಪೇಂದ್ರ ಬಳಿ ಸುದೀಪ್ ಅವರು ಕೋರಿದ್ದರು. ಅವರ ಎತ್ತರ ಹಾಗೂ ಪರ್ಸನಾಲಿಟಿ ನೋಡಿ ‘ನೀವು ಯಾಕೆ ಡೈರೆಕ್ಟರ್ ಆಗ್ತೀರಾ. ಇಷ್ಟು ಹೈಟ್ ಇದೆ ಹೀರೋ ಆಗಿ’ ಎಂದು ಕಿವಿಮಾತು ಹೇಳಿ ಕಳುಹಿಸಿದ್ದರು. ಈ ಕಿವಿಮಾತು ಕೆಲಸ ಮಾಡಿತ್ತು. ಸುದೀಪ್ ಅವರು ಹೀರೋ ಆದರು.

ಸುದೀಪ್ ಅವರು ಹೀರೋ ಆದ ಹೊರತಾಗಿಯೂ ನಿರ್ದೇಶಕನಾಗಬೇಕು ಎಂಬ ಆಸೆಯನ್ನು ಬಿಟ್ಟಿಲ್ಲ. ಹೀರೋ ಆಗಿ ಯಶಸ್ಸು ಕಂಡ ಬಳಿಕ ಅವರು ಡೈರೆಕ್ಷನ್ಗೆ ಇಳಿದರು. ಡೈರೆಕ್ಷನ್ ಮಾಡಿ ಅವರು ಫೇಮಸ್ ಆದರು. ಹಲವು ಹಿಟ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದಾರೆ.

ಸದ್ಯ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರದ ಬಳಿಕ ಅವರು ‘ಬಿಲ್ಲ ರಂಗ ಭಾಷ’ ಸಿನಿಮಾಗಳಲ್ಲಿ ಮಾಡುತ್ತಿದ್ದಾರೆ. ಈ ಚಿತ್ರದ ಬಳಿಕ ಅವರು ಒಂದು ಚಿತ್ರವನ್ನು ನಿರ್ದೇಶನ ಕೂಡ ಮಾಬಡೇಕಿದೆ. ಈ ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಸುದೀಪ್ ಅವರು ಸಿಸಿಎಲ್ ಪಂದ್ಯಗಳಲ್ಲಿ ಬ್ಯುಸಿ ಇದ್ದಾರೆ. ಅವರು ಒಂದು ಚಿತ್ರವನ್ನು ನಿರ್ದೇಶನ ಮಾಡೋದಾಗಿಯೂ ಘೋಷಿಸಿದ್ದಾರೆ.

Continue Reading

ಸಿನೆಮಾ

ಛತ್ರಪತಿ ಸಂಭಾಜಿ ಜೀವನಾಧರಿತ ಛಾವಾ ಸಿನಿಮಾಗೆ ಪ್ರಧಾನಿ ಮೋದಿಯಿಂದಲೂ ಭಾರೀ ಮೆಚ್ಚುಗೆ

Neque porro quisquam est, qui dolorem ipsum quia dolor sit amet, consectetur, adipisci velit, sed quia non numquam.

Published

on

ನವದೆಹಲಿ: ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿರುವ ಮಾರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ್ ಜೀವನಾಧಾರಿತ ಕತೆಯನ್ನು ಒಳಗೊಂಡಿರುವ ಐತಿಹಾಸಿಕ ಸಿನಿಮಾ ಛಾವಾಗೆ ಪ್ರಧಾನಿ ನರೇಂದ್ರ ಮೋದಿಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಛಾವಾ ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದೆ. ಈ ಸಿನಿಮಾದ ಪ್ರಭಾವ ದೇಶಾದ್ಯಂತ ಬೆಳೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಮಹಾರಾಷ್ಟ್ರ ಮತ್ತು ಮುಂಬೈ ಮರಾಠಿ ಮತ್ತು ಹಿಂದಿ ಚಿತ್ರರಂಗಕ್ಕೆ ಹೊಸ ಎತ್ತರವನ್ನು ನೀಡಿವೆ. ಇತ್ತೀಚಿನ ದಿನಗಳಲ್ಲಿ ‘ಛಾವಾ’ ಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿದೆ. ಶಿವಾಜಿ ಸಾವಂತ್ ಅವರ ಮರಾಠಿ ಕಾದಂಬರಿಯಿಂದ ಸ್ಫೂರ್ತಿ ಪಡೆದ ಈ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಶೌರ್ಯವನ್ನು ಪ್ರಸ್ತುತಪಡಿಸಲಾಗಿದೆ” ಎಂದು ಹೇಳಿದ್ದಾರೆ.

ಈ ಸಿನಿಮಾ ಫೆಬ್ರವರಿ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿದೆ. ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದ್ದು ಮಾತ್ರವಲ್ಲದೆ, ಇದುವರೆಗೆ ವಿಶ್ವದಾದ್ಯಂತ 310.5 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350ನೇ ವರ್ಷ ಮತ್ತು ಆರ್‌ಎಸ್‌ಎಸ್‌ನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Continue Reading

ಸಿನೆಮಾ

ಸೌರವ್ ಗಂಗೂಲಿ ಬಯೋಪಿಕ್​; ಮುಖ್ಯ ಪಾತ್ರ ಮಾಡಲಿರುವ ನಟ ರಾಜ್​ಕುಮಾರ್ ರಾವ್

At vero eos et accusamus et iusto odio dignissimos ducimus qui blanditiis praesentium voluptatum deleniti atque corrupti.

Published

on

ಬಯೋಪಿಕ್​ನಲ್ಲಿ ಸೌರವ್ ಗಂಗೂಲಿ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರಾಜ್​ಕುಮಾರ್​ ರಾವ್​ ಅವರಿಗೆ ಆ ಅವಕಾಶ ಒಲಿದಿದೆ. ಆದರೆ ಡೇಟ್ಸ್​ ಹೊಂದಾಣಿಕೆ ಆಗದ ಕಾರಣ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ. ಈ ಕುರಿತು ಸೌರವ್ ಗಂಗೂಲಿ ಅವರು ಗುರುವಾರ (ಫೆ.20) ಮಾಹಿತಿ ನೀಡಿದ್ದಾರೆ.

ಸಚಿನ್ ತೆಂಡುಲ್ಕರ್​, ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್ ಮುಂತಾದ ಸಾಧಕರ ಬಗ್ಗೆ ಈಗಾಗಲೇ ಸಿನಿಮಾಗಳು ಬಂದಿವೆ. ಅದೇ ರೀತಿ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಬಯೋಪಿಕ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ಬಹುನಿರೀಕ್ಷಿತ ಪ್ರಾಜೆಕ್ಟ್​ ಬಗ್ಗೆ ಬಹಳ ಹಿಂದಿನಿಂದಲೂ ಸುದ್ದಿ ಕೇಳಿಬರುತ್ತಲೇ ಇವೆ. ಆದರೆ ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರುವುದು ತಡವಾಗುತ್ತಿದೆ. ಈಗ ತಮ್ಮ ಬಯೋಪಿಕ್ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರು ಒಂದು ಸುದ್ದಿ ನೀಡಿದ್ದಾರೆ. ತಮ್ಮ ಪಾತ್ರದಲ್ಲಿ ಬಾಲಿವುಡ್ ನಟ ರಾಜ್​ಕುಮಾರ್​ ರಾವ್ ನಟಿಸಲಿದ್ದಾರೆ ಎಂಬುದನ್ನು ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.

ಪಶ್ಚಿಮ ಬಂಗಾಳದ ಬುರ್ದ್ವಾನ್‌ನಲ್ಲಿ ಸೌರವ್ ಗಂಗೂಲಿ ಅವರು ಮಾಧ್ಯಮಗಳ ಜೊತೆ ಮಾತನಾಡುವಾಗ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ‘ನನಗೆ ತಿಳಿದಿರುವಂತೆ ನಟ ರಾಜ್​ಕುಮಾರ್​ ರಾವ್​ ಅವರು ನನ್ನ ಪಾತ್ರ ಮಾಡಲಿದ್ದಾರೆ. ಆದರೆ ಡೇಟ್ಸ್​ ಸಮಸ್ಯೆ ಎದುರಾಗಿದೆ. ಹಾಗಾಗಿ ಆ ಸಿನಿಮಾ ಬಿಡುಗಡೆ ಆಗಲು ಒಂದು ವರ್ಷಕ್ಕಿಂತಲೂ ಅಧಿಕ ಸಮಯ ಬೇಕಾಗಲಿದೆ’ ಎಂದು ಸೌರವ್ ಗಂಗೂಲಿ ಅವರು ಹೇಳಿದ್ದಾರೆ.

ಬಾಲಿವುಡ್​ನಲ್ಲಿ ನಟ ರಾಜ್​ಕುಮಾರ್​ ರಾವ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ ಬಗ್ಗೆ ಯಾರಿಗೂ ಅನುಮಾನ ಇಲ್ಲ. ಯಾವ ಪಾತ್ರ ಕೊಟ್ಟರೂ ಅವರು ಅತ್ಯುತ್ತಮವಾಗಿ ನಿಭಾಯಿಸುತ್ತಾರೆ. ಅವರ ಖಾತೆಯಲ್ಲಿ ಹಲವು ಸೂಪರ್​ ಹಿಟ್ ಸಿನಿಮಾಗಳಿವೆ. ಈಗ ಅವರು ಸೌರವ್ ಗಂಗೂಲಿ ಪಾತ್ರವನ್ನು ಹೇಗೆ ಮಾಡಲಿದ್ದಾರೆ ಎಂದು ತಿಳಿಯುವ ಕೌತುಕ ಎಲ್ಲರಲ್ಲೂ ಮೂಡಿದೆ.

ಭಾರತೀಯ ಕ್ರಿಕೆಟ್​ಗೆ ಸೌರವ್ ಗಂಗೂಲಿ ನೀಡಿದ ಕೊಡುಗೆ ಅಪಾರ. ಟೀಮ್ ಇಂಡಿಯಾವನ್ನು ವಿಶ್ವಮಟ್ಟದಲ್ಲಿ ಮಿಂಚುವಂತೆ ಮಾಡಿದವರಲ್ಲಿ ಗಂಗೂಲಿ ಕೂಡ ಪ್ರಮುಖರು. ಅವರ ಬಯೋಪಿಕ್​ನಲ್ಲಿ ಆ ಎಲ್ಲ ವಿವರಗಳನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ಜೊತೆಗೆ ಸೌರವ್ ಗಂಗೂಲಿ ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಬಯೋಪಿಕ್​ನಲ್ಲಿ ತೋರಿಸಲಾಗುವುದು. ಆದರೆ ಈ ಸಿನಿಮಾ ಬರಲು ಇನ್ನೂ ಬಹಳ ಸಮಯ ಹಿಡಿಯಲಿದೆ. ಇನ್ನುಳಿದ ಪಾತ್ರವರ್ಗ ಮತ್ತು ತಾಂತ್ರಿಕ ಬಳಗದ ಬಗ್ಗೆ ಕೂಡ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.

Continue Reading

Trending