
- 2 ವರ್ಷದ ನಂತರ ಸದರಿ ಬಾವಿಯ ಕಾಮಗಾರಿಗೆ ಮತ್ತೊಬ್ಬ ಗುತ್ತಿಗೆದಾರನ ಎಂಟ್ರಿ. – ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
- ಸಾರ್ವಜನಿಕರ ತೆರಿಗೆ ದುಡ್ಡು ಪೋಲು
- ಬಾವಿಗಾಗಿ ಮೀಸಲಾಗಿರುವ ಜಾಗ ಪಹಣಿ ಪತ್ರಿಕೆಯಲ್ಲಿ ಎಂಟ್ರಿ ಆಗುತ್ತಿಲ್ಲ -ಸ್ವಾದಿನಪಡಿಸಿಕೊಳ್ಳದೇ ಕಾಮಗಾರಿಗೆ ಚಾಲನೆ ನೀಡುವುದು ಅನಧಿಕೃತ….
- ಯಾವುದೇ ಕಾಮಗಾರಿ ಸ್ವಾಧೀನ ಪಡಿಸಿಕೊಳ್ಳುವ ಮುಂಚೆಯೇ ನಡೆಸಿದರೆ ಕಾನೂನು ಹೋರಾಟ ಮಾಡುತ್ತೇನೆ – ಸಂಜಿವ. ಪಿ ನಾಯ್ಕ.
- ವರದಿ: ಕಿರಣ ಚಂದ್ರಹಾಸ ಗಾಂವಕರ
ಅಂಕೋಲಾ : ಪುರಸಭೆ ವ್ಯಾಪ್ತಿಯ ಅಂಬಾರಕೊಡ್ಲದಲ್ಲಿ ಸರ್ಕಾರಿ ಕುಡಿಯುವ ನೀರಿನ ಬಾವಿಯ ಕಾಮಗಾರಿಯನ್ನು ಪ್ರಾರಂಭಿಸಿ ತಳಭಾಗದಲ್ಲಿ ಬಂಡೆಕಲ್ಲು ಬಂದಿದ್ದರಿಂದ 2 ವರ್ಷದ ಹಿಂದೆ ಸ್ಥಗಿತಗೊಂಡ ಕಾಮಗಾರಿಯಿಂದ ಜೊತೆಗೆ ಮಾಡಿದ ಕೆಲಸಕ್ಕೆ ಸರಿಯಾಗಿ ಪುರಸಭೆಯಿಂದ 60,000 ರೂ ಬಿಲ್ ಪಾವತಿ ಆಗದೆ ದೋಷವಿದ್ದ ಬಾವಿಯ ಕಾಮಗಾರಿಯನ್ನು ಮುಂದುವರಿಸಲು ಹೋಗಿ ತಾಲೂಕಿನ ಗುತ್ತಿಗೆದಾರನೋರ್ವ ತಪ್ಪೊಪ್ಪಿಗೆ ಬರೆದು ಕೊಟ್ಟು ಪಜೀತಿಗೆ ಒಳಗಾಗಿದ್ದು, ಸದರಿ ಗುತ್ತಿಗೆದಾರನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನಲೆ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಕಳೆದ 2023ನೇ ಸಾಲಿನಲ್ಲಿ ಗುತ್ತಿಗೆ ಆದರದ ಮೇಲೆ ಅಂಬಾರ ಕೊಡ್ಲಾ ಗದ್ದುಗೆ ದೇವಸ್ಥಾನ ಪಕ್ಕದಲ್ಲಿ ಕುಡಿಯುವ ನೀರಿನ ಬಾವಿಯೊಂದರ ನಿರ್ಮಾಣದ ಕಾಮಗಾರಿಯನ್ನು ಪಡೆದುಕೊಂಡಿದ್ದ ಕೋಟೆವಾಡದ ಸಂಜೀವ ಪಿ. ನಾಯ್ಕ್ ಗುತ್ತಿಗೆದಾರನಿಗೆ ಪುರಸಭೆ ಎಸ್ಟಿಮೇಟ್ ಪ್ರಕಾರ ನಿಗದಿತ 32 ಪುಟದ ಬಾವಿ ಯನ್ನು ನಿರ್ಮಾಣ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು..
ಸದರಿ ಕಾಮಗಾರಿಯನ್ನು ಕೈಗೊಂಡಾಗ ಗುತ್ತಿಗೆದಾರನ ದುರಾದೃಷ್ಟವೊ ಎನ್ನುವಂತೆ ಸದರಿ ಬಾವಿಯ 20 ಪುಟ್ ಅಂತರಕ್ಕೆ ಬಾವಿಯ ತಳ ಭಾಗದಲ್ಲಿ ಬಂಡೆಕಲ್ಲು ಬಂದಿದ್ದರಿಂದ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಂಡೆಯನ್ನು ಒಡೆಯಲು Re Estimate ಮಾಡಿಕೊಡುವಂತೆ ವಿನಂತಿಸಿದರು. ಆದರೆ ಪುರಸಭೆಯ ಅಂದಿನ ಇಂಜಿನಿಯರ ಕಾಮಗಾರಿ ಮುಂದುವರಿಸುವ ಬಗ್ಗೆ ಯಾವುದೇ ಪರಿಹಾರದ ಕ್ರಮವನ್ನು ಸೂಚಿಸದೇ ಇರುವ ಕಾರಣ ಅನಿವಾರ್ಯವಾಗಿ ಸಂಜೀವ್ ನಾಯ್ಕ್ ರವರು ನಿಯಮದಂತೆ ಕುಡಿಯುವ ನೀರಿನ ಬಾವಿಯ ಒಳಭಾಗದಲ್ಲಿ ಸುತ್ತಲೂ ಚಿರೆ ಕಲ್ಲನ್ನು ಕಟ್ಟಿ. ಸದ್ರಿ ಬಾವಿಯ 20 ಪುಟಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಿದರು .

ನಂತರ ತಾನು ಮಾಡಿದ ಕಾಮಗಾರಿಗೆ ತಕ್ಕಂತೆ ಎಸ್ಟಿಮೇಟ್ ಮಾಡಿ ಸದರಿ ಬಾವಿಯ ಬಿಲ್ಲನ್ನು ಪಾವತಿಸುವಂತೆ ಅಂದಿನ ಪುರಸಭೆ ಇಂಜಿನಿಯರ್ ಭಾಸ್ಕರ್ ಗೌಡ ರವರಿಗೆ ಕೋರಿಕೊಂಡಿದ್ದು. ನಂತರ ಗುತ್ತಿಗೆದಾರನ ಮನವಿಗೆ ಸರಿಯಾಗಿ ಸ್ಪಂದಿಸದ ಭಾಸ್ಕರ್ ಗೌಡರ ವಿರುದ್ಧ ಗುತ್ತಿಗೆದಾರ ಸಂಜೀವ್ ನಾಯ್ಕರು ಪುರಸಭೆಯಲ್ಲಿ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಇಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು. ಅಂದು ಈ ವಿಷಯವು ಬಾರಿ ಸಂಚಲವನ್ನು ಉಂಟು ಮಾಡಿತ್ತು.. ಗುತ್ತಿಗೆದಾರನ ಹೋರಾಟದ ಫಲವಾಗಿ ಅಧಿಕಾರಿಗಳು ರೂ 1,60,000 ಕಾಮಗಾರಿ ಆಗಿದೆ ಎಂದು ಎಸ್ಟಿಮೇಟ್ ವರದಿ ತಯಾರಿಸಲಾಗಿತ್ತು.ಹಾಗಾಗಿ ಗುತ್ತಿಗೆದಾರನಿಗೆ ಪುರಸಭೆಯಿಂದ 1.03800 ರೂಪಾಯಿಗಳನ್ನು ಮಂಜೂರಿ ಮಾಡಿದ್ದು . ಸದರಿ ಹಣದಲ್ಲಿ GST ಇನ್ನುಳಿದ ಖರ್ಚು ಕಳೆದು 98000 ರೂ ಸಾವಿರ ರೂಪಾಯಿಗಳು ಗುತ್ತಿಗೆದಾರನಿಗೆ ಜಮಾ ಆಗಿತ್ತು.ಇನ್ನು ಬಾಕಿ 60.000 ರೂ ಹಣ ಗುತ್ತಿಗೆದಾರನಿಗೆ ಪುರಸಭೆಯಿಂದ ಸಂದಾಯವಾಗಬೇಕಿತ್ತು.
2 ವರ್ಷದ ನಂತರ ಸದರಿ ಬಾವಿಯ ಕಾಮಗಾರಿಗೆ ಮತ್ತೊಬ್ಬ ಗುತ್ತಿಗೆದಾರನ ಎಂಟ್ರಿ. – ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
2023 ರಲ್ಲಿ ಸ್ಥಗಿತಗೊಂಡಿದ್ದ ಬಾವಿಯ ಕಾಮಗಾರಿಯನ್ನು ಅಧಿಕಾರಿಗಳು Re estimate ಮಾಡದೇ ಇರುವ ಕಾರಣ ಮತ್ತು ತನಗೆ ಬರಬೇಕಾದ ಬಾಕಿ ಇರುವ 60,000 ರೂ ಬಿಲ್ ಪಾವತಿ ಮಾಡುವಂತೆ ಗುತ್ತಿಗೆದಾರ ಸಂಜೀವ್ ನಾಯ್ಕರು ಮಾಹಿತಿ ಹಕ್ಕು ಅರ್ಜಿಯನ್ನು ಬಳಸಿ ದಾಖಲೆಗಳನ್ನು ಸಂಗ್ರಹಿಸುತ್ತಾ. ತನಗೆ ಕಾಮಗಾರಿಯಲ್ಲಿ ಬಿಲ್ ಪಾವತಿ ಮಾಡಲು ಅಧಿಕಾರಿಗಳು ತೋರಿದ ಬೇಜವಾಬ್ದಾರಿ, ಇನ್ನಿತರ ಕೆಲವು ಕಾರಣಗಳನ್ನು ಲೋಕಾಯುಕ್ತರು ಹಾಗೂ ಇನ್ನಿತರ ಸಕ್ಷಮ ಪ್ರಾಧಿಕಾರಗಳಿಗೆ ನೀಡಿ ದೂರು ಅರ್ಜಿ ಸಲ್ಲಿಸುತ್ತಾ ಹೋರಾಟವನ್ನು ನಡೆಸುತ್ತಾ ಬಂದಿರುತ್ತಾರೆ.
ಹೀಗಿರುವಾಗ ತಾಲೂಕಿನ ಮತ್ತೊಬ್ಬ ಗುತ್ತಿಗೆದಾರ ಮಂಗೂ ಗೌಡ ಎಂಬುವವರು ದಿನಾಂಕ 14-04-2025 ರಂದು ಸದರಿ ಬಾವಿಯಲ್ಲಿ ಅಳವಡಿಸಿದ್ದ ಚೀರೆ ಕಲ್ಲನ್ನು ತೆಗೆದು ಬಾವಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದು. ಜೊತೆಗೆ ಸಾರ್ವಜನಿಕವಾಗಿ ಪುರಸಭೆಗೆ ಹಾನಿಯಾಗಿದೆ. ತನಗೂ 60000 ರೂ ಪುರಸಭೆಯಿಂದ ಬಿಲ್ ಬರಬೇಕಾಗಿದ್ದು , ಸದರಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಸಂಜೀವ್ ಪಿ ನಾಯ್ಕ್ ಅಂಕೋಲಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಅಂಕೋಲಾ ಪೋಲೀಸರು ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು. ಆರೋಪಿತ ವ್ಯಕ್ತಿಯು ಸದರಿ ಬಾವಿ ಯನ್ನು ಪುನಹ ಸರಿಪಡಿಸಿ ಕೊಡುತ್ತೇನೆ ಎಂದು ಮುಚ್ಚಳಕ್ಕೆ ಬರೆದು ಕೊಟ್ಟಿದ್ದಾನೆ ಎಂದು ಸಂಜೀವ್ ಪಿ ನಾಯ್ಕ್ ಇವರು ವಿಕಾಸ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ತೆರಿಗೆ ದುಡ್ಡು ಪೋಲು
ಅಂಕೋಲಾ ಪುರಸಭೆಯ ಅಂಬಾರಕೊಡ್ಲದ ಗದ್ದುಗೆ ದೇವಸ್ಥಾನದ ಹತ್ತಿರ 2023 ರ ಮೊದಲೇ ಸಾರ್ವಜನಿಕ ಬಾವಿಯನ್ನು ನಿರ್ಮಿಸಲಾಗಿತ್ತು.. ನಂತರ ಅಲ್ಲಿಯೇ ಪಕ್ಕದಲ್ಲಿ ಗುತ್ತಿಗೆದಾರ ಸಂಜೀವ ಪಿ . ನಾಯ್ಕ್ ರವರು ಇನ್ನೊಂದು ಬಾವಿಯನ್ನು ನಿರ್ಮಿಸಲು ಮುಂದಾದಾಗ ತಳ ಭಾಗದಲ್ಲಿ ಬಂಡೆಕಲ್ಲು ಬಂದು ಸ್ಥಗಿತವಾಗಿತ್ತು. ಈಗ ಅದೇ ಸ್ಥಳದಲ್ಲಿ ಇನ್ನೊಂದು ಬಾವಿಯನ್ನು ಮಾಡಲು ಪುರಸಭೆಯಿಂದ ಮುಂದಾಗಿದ್ದಾರೆ ಎಂಬ ವಿಷಯ ಗುಟ್ಟಾಗಿ ಏನು ಉಳಿದಿಲ್ಲ. ಹೀಗೆ ಒಂದೇ ಕ್ಷೇತ್ರದಲ್ಲಿ ಒಂದಾದ ನಂತರ ಒಂದರಂತೆ ಬಾವಿಯನ್ನು ತೋಡಲು ಆಸಕ್ತಿ ತೋರುತ್ತಿರುವ ಅಧಿಕಾರಿಗಳ ನಡೆಯ ಹಿಂದೆ ಸಾರ್ವಜನಿಕರ ತೆರಿಗೆ ದುಡ್ಡು ಬೇಕಾಬಿಟ್ಟಿ ಪೋಲು ಮಾಡುವ ಉದ್ದೇಶವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
ಬಾವಿಗಾಗಿ ಮೀಸಲಾಗಿರುವ ಜಾಗ ಪಹಣಿ ಪತ್ರಿಕೆಯಲ್ಲಿ ಎಂಟ್ರಿ ಆಗುತ್ತಿಲ್ಲ -ಸ್ವಾದಿನಪಡಿಸಿಕೊಳ್ಳದೇ ಕಾಮಗಾರಿಗೆ ಚಾಲನೆ ನೀಡುವುದು ಅನಧಿಕೃತ….
ಹೌದು ಅಂಕೋಲಾ ಪುರಸಭೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅನೇಕ ಕಾಮಗಾರಿಗಳು ನಡೆಯುತ್ತಿದೆ. ಆದರೆ ಕಾಮಗಾರಿ ಖಾಸಗಿ ಅವರ ಕ್ಷೇತ್ರದಲ್ಲಿ ನಡೆದರೆ ಮೊದಲು ಖಾಸಗಿ ಅವರು ಸದರಿ ಸ್ಥಳವನ್ನು ಪುರಸಭೆಗೆ ಸ್ವಾದಿನ ಮಾಡಬೇಕು.. ಅಲ್ಲಿ ಖಾಸಗಿಯವರ ನಿರಾಕ್ಷೇಪಣಾ ಪತ್ರ ಮುಖ್ಯವಾಗಿದೆ. ಆದರೆ ಅಧಿಕಾರಿಗಳು ಕಾಮಗಾರಿ ನಡೆಯುವ ಪೂರ್ವದಲ್ಲಿ ಸದರಿ ಪಹಣಿ ಪತ್ರಿಕೆಯನ್ನು ಸ್ವಾದಿನ ಪಡಿಸಿಕೊಳ್ಳದೆ ಕಾನೂನುಬಾಹಿರುವಾಗಿ ಸಾಕಷ್ಟು ಕಾಮಗಾರಿ ನಡೆಸಿದ್ದಾರೆ. ಈಗಲೂ ಕೂಡ ಕೆಲವೊಂದು ಕಡೆ ಖಾಸಗಿ ಅವರ ಕಡೆಯಿಂದ ಸ್ವಾಧೀನ ಪಡಿಸಿ ಕೊಳ್ಳದೆ ಕಾಮಗಾರಿ ನಡೆಯುತ್ತಿದೆ. ಸದರಿ ದಾಖಲೆಗಳನ್ನು ಪಡೆಯಲು ಕಾಮಗಾರಿಗೆ ಸರ್ವೇ ಸಮೇತ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ತಹಶೀಲ್ದಾರ ಕಛೇರಿಯಿಂದ ಕಾಮಗಾರಿ ನಡೆದ ಸ್ಥಳದ ಪಹಣಿ ಪತ್ರಿಕೆ ತೆಗೆದುಕೊಳ್ಳಿ ಎಂದು ಹಾರಿಕೆ ಹಿಂಬರಹ ನೀಡುವುದು ವಾಡಿಕೆಯಾಗಿ ಬಿಟ್ಟಿದೆ.

ಯಾವುದೇ ಕಾಮಗಾರಿ ಸ್ವಾಧೀನ ಪಡಿಸಿಕೊಳ್ಳುವ ಮುಂಚೆಯೇ ನಡೆಸಿದರೆ ಕಾನೂನು ಹೋರಾಟ ಮಾಡುತ್ತೇನೆ – ಸಂಜಿವ. ಪಿ ನಾಯ್ಕ.
ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಖಾಸಗಿ ಮಾಲೀಕರಿಂದ ಸ್ವಾದಿನ ಪಡಿಸಿಕೊಳ್ಳುವ ಮುಂಚೆಯೇ ಮಾಡಲಾಗುತ್ತಿದೆ. ಹುಲುಸ್ವಾರ ಕೇರಿಯಲ್ಲಿ ತುಳುಸು ಗೌಡ ಎಂಬುವವರು 32 ಪುಟದ ಬಾವಿಯನ್ನು 2023ರಲ್ಲಿ ನಿರ್ಮಿಸಿದ್ದು ಸದರಿ ಬಾವಿಗೆ ಎರಡು ಲಕ್ಷದ 36 ಸಾವಿರ ರೂಪಾಯಿ ಯನ್ನು 3 ಕಂತಿನಲ್ಲಿ ಪಾವತಿಸಲಾಗಿದ್ದು.. ಇಲ್ಲಿ ನನ್ನಂಥ ಹೋರಾಟದ ಮನೋಭಾವನೆಯುಳ್ಳಂತಹ ವ್ಯಕ್ತಿಗಳು ಕಾನೂನು ಪ್ರಕಾರ ಕೆಲಸ ಮಾಡಿ. ಮಾಡಿದ ಕೆಲಸಕ್ಕೆ ಯಾವ ಅಧಿಕಾರಿಗಳಿಗೂ ಒಂದು ರೂಪಾಯಿ ಲಂಚ ಕೊಡದೆ ನ್ಯಾಯಯುತವಾಗಿ ಬಿಲ್ ಪಾವತಿ ಮಾಡುವಂತೆ ಕೇಳಿದರೆ ಕಾಮಗಾರಿ ನಡೆಸಿದ ಎರಡು ಮೂರು ವರ್ಷ ಆದರೂ ಹಣ ಪಾವತಿ ಆಗಿಲ್ಲ.
ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದು.ಈ ಬಗ್ಗೆ ತಾರತಮ್ಯದ ನೀತಿಯ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೆಲವು ದಾಖಲೆಗಳಿಂದ ನನಗೆ ತಿಳಿದು ಬಂದಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಕೂಡ ಇದೆ. ಇನ್ನು ಮುಂದಿನ ದಿನಗಳಲ್ಲಿ ಪುರಸಭೆಯಲ್ಲಿ ನಡೆಯುತ್ತಿರುವ ಕಾಮಗಾರಿ ವಿಷಯದಲ್ಲಿನ ಭ್ರಷ್ಟಾಚಾರಗಳನ್ನು ಬಯಲಿ ಗೆಳೆಯುತ್ತೇನೆ.- ಸಂಜೀವ್. ಪಿ. ನಾಯ್ಕ್. ( ಕೋಟೆವಾಡ )

