
ಅಂಕೋಲಾ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪಾದಾಚಾರಿಗಳಿಗೆ ಸಂಚರಿಸಲು ನಿರ್ಮಾಣ ಮಾಡಿರುವ ಫುಟ್ಪಾತುಗಳು ಮಾಯವಾಗಿಬಿಟ್ಟಿದೆ .
ಕಳೆದ ದಿನಾಂಕ 1-01-2025ರಂದು ಅಂಕೋಲಾ ಪುರಸಭೆಯ ಎದುರುಗಡೆ ಅಶ್ವತ ಕಟ್ಟೆಯ ಪಕ್ಕದಲ್ಲಿ ಗಜಾನನ ಎಂಬ ವ್ಯಕ್ತಿ ಅಂಗಡಿ ಸಂಖ್ಯೆ ANK267 ಬೀದಿಬದಿ ಲೈಸೆನ್ಸ್ ಅನ್ನು ಪಡೆದು ಉದ್ಯಮಿಯೊಬ್ಬನಿಗೆ ಬಾಡಿಗೆ ನೀಡಿದ್ದು. ಸದರಿ ಅಂಗಡಿಯನ್ನು ಬಂದ ಮಾಡುವಂತೆ ಅರ್ಜಿ ಸಲ್ಲಿಸಿದ್ದು. ದೂರು ನೀಡಿ 45 ದಿನ ಕಳೆದರೂ ಪುರಸಭೆಯಿಂದ ಯಾವುದೇ ಹಿಂಬರಹ ನೀಡಿಲ್ಲ.
ಈ ಬಗ್ಗೆ ಮಾಹಿತಿ ನೀಡಿ ಎಂದು ಪ್ರಶ್ನೆ ಮಾಡಿದರೆ ಅರ್ಜಿದಾರರೊಂದಿಗೆ ಅನುಚಿತವಾಗಿ ವರ್ತಿಸಿ ಸದರಿ ಅಧಿಕಾರಿ KCR ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.ಜೊತೆಗೆ ಅಂಕೋಲಾ ಪುರಸಭೆಯಲ್ಲಿ ತನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಿರಿ ಎಂದು ಸುಳ್ಳು ಕಂಪ್ಲೇಟನ್ನು ನೀಡಿ ನಿಮ್ಮ ಮೇಲೆಯೇ ಪ್ರಕರಣ ದಾಖಲಿಸುತ್ತೇನೆ. ಎಂದು ಅರ್ಜಿದಾರರಿಗೆ ಬೆದರಿಸುವ ಪ್ರಯತ್ನವನ್ನು ಆ ಅಧಿಕಾರಿ ಮಾಡಿದ್ದಾರೆ.. ಸದರಿ ಅಧಿಕಾರಿಯು ಅರ್ಜಿದಾರರಿಗೆ ಪ್ರಶ್ನೆ ಮಾಡುವ ವಾಕ್ ಸ್ವಾತಂತ್ರದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನವನ್ನು ಮಾಡುವ ಹಾಗೆ ಕಂಡು ಬರುತ್ತಿದೆ.
ಎಲ್ಲೆಂದರಲ್ಲಿ ಫುಟ್ಪಾತ್ಗಳ ಮೇಲೆ ಗೂಡಂಗಡಿಗಳು ಬಂದು ಕುಳಿತಿದ್ದು. ಒಂದೊಂದು ಗೂಡಂಗಡಿಗೆ ಲೈಸೆನ್ಸ್ ನೀಡುವಾಗ ತಲಾ 2000ರೂ ತೆಗೆದುಕೊಂಡು ತನ್ನ ಕಿಸೆಯನ್ನು ಭರ್ತಿ ಮಾಡಿ ಕೊಂಡಿರುವ ವಿಷಯ ಗುಟ್ಟಾಗಿ ಏನು ಉಳಿದಿಲ್ಲ.ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಮನೆ ರಿಪೇರಿ ಸಂದರ್ಭದಲ್ಲಿಯೂ ಕೂಡ ಈ ಅಧಿಕಾರಿಯ ಕಿಸೆಗೆ ಸಾವಿರಗಟ್ಟಲೆ ಹಣ ಹೋಗಿದ್ದು. ಇವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವೇ ಇಲ್ಲದಂತಾಗಿದೆ

ಕೇಂದ್ರ ಸರ್ಕಾರ ದಿಂದ ಬೀದಿ ಬದಿ ವ್ಯಾಪಾರಿಗೆ ಮೊದಲ ಹಂತದ 10000₹ ಹಣ ನೀಡುತ್ತಿದ್ದು. ಸಿಕ್ಕಸಿಕ್ಕವರಿಗೆ ಲೈಸನ್ಸ್ ನೀಡಲಾಗಿದೆ . ಲೈಸನ್ ನೀಡುವಾಗ 500ರೂ ಹಾಗೂ ಸರ್ಕಾರದಿಂದ ಸಬ್ಸಿಡಿ ಹಣ ಪಡೆಯುವಾಗ 500 ಹೀಗೆ ಲೈಸೆನ್ಸ್ ಪಡೆದ ಅರ್ಜಿದಾರರಿಂದ ಹಣವನ್ನು ಲೂಟಿ ಮಾಡಲಾಗಿದ್ದು.ಬಡವರ ರಕ್ತವನ್ನು ಜೀರುಂಡೆ ಯಂತೆ ಆ ಅಧಿಕಾರಿ ಹೀರುತ್ತಿದ್ದಾರೆ.
ಪುರಸಭೆ ಆ ಒಬ್ಬ ಅಧಿಕಾರಿ ಹಲವು ವರ್ಷಗಳಿಂದ ಪುರಸಭೆಯಲ್ಲಿ ಜಾಂಡ ಊರಿದ್ದು ಇಲ್ಲಿಯವರೆಗೂ ವರ್ಗಾವಣೆ ಆಗಿಲ್ಲ. ಡೇ ನಲ್ಮ್ ಯೋಜನೆಯಡಿಯಲ್ಲಿ ಶೂನ್ಯ ಫಲಿತಾಂಶ ಸಾಧಿಸಿರುವ ಕೇಸ್ ವರ್ಕರ್ ಆಗಿದ್ದು. ಡೇ ನಲ್ಮ್ ಯೋಜನೆಯ ಬಗ್ಗೆ ತರಬೇತಿ ಪಡೆದಿರುವ ಅರ್ಜಿದಾರರ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.
ಬೀದಿ ಬದಿ ವ್ಯಾಪಾರಿಗೆ ನೀಡಿರುವ ಲೈಸನ್ಸ್ ಪ್ರತಿ ಕೇಳಿದರೆ ಅವರ ಬಳಿ ಲಭ್ಯವಿಲ್ಲವಂತೆ . ಆದಷ್ಟು ಬೇಗ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಅಂಕೋಲಾ ಪುರಸಭೆಗೆ ಬಂದು ಇಲ್ಲಿನ ಭ್ರಷ್ಟಾಚಾರಕ್ಕೆ ನಿಯಂತ್ರಣ ಕಡಿವಾಣ ಹಾಕಬೇಕೆಂದು ವಿಕಾಸ ವಾಹಿನಿ ಆಗ್ರಹಿಸುತ್ತದೆ.

