ಉತ್ತರ ಕನ್ನಡದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಬೆಂಗಳೂರಿನಿಂದ – ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದ ಸ್ಥಳಕ್ಕೆ ಬೈಕ್ ಮೇಲೆ ಜಾಗೃತಿ ಮೂಡಿಸಲು ಹೊರಟ ಚರಣ ಕುಮಾರ್ ಮಡಿವಾಳ.

News Desk
2 Min Read

ಅಂಕೋಲಾ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಾಗಿ ಅನೇಕ ಹೋರಾಟಗಳು ನಡೆದಿದ್ದು, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆಸ್ಪತ್ರೆಯ ಕೊರಗು ಜಿಲ್ಲೆಯ ಜನತೆಯನ್ನು ತೀವ್ರವಾಗಿ ಕಾಡಿದೆ.

ಈ ಮಧ್ಯೆ ಚರಣ್ ಕುಮಾರ್ ಮಡಿವಾಳ, ಡಿಪ್ಲೋಮಾ ಪದವೀಧರ. ಮೂಲತಹ ಸಿದ್ದಾಪುರದ ಯುವಕ ಇತನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕನಸನ್ನು ಹೊತ್ತುಕೊಂಡು ದೊಡ್ಡ ಮಟ್ಟದಲ್ಲಿ ಅಭಿಯಾನ ಕೈಗೊಂಡಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ..ಈ ಯುವಕನ ಬೈಕ್ ರ್ಯಾಲಿ ನಿನ್ನೆ ದಿನಾಂಕ 19-02-2025 ರಂದು ಸಂಜೆಯ ಸಮಯಕ್ಕೆ ಅಂಕೋಲಾ ತಲುಪಿದೆ. ಅಂಕೋಲಾದ ಕ್ಲಬ್ ವಿ ಪಿಟ್ನೆಸ್ ಜಿಮ್ ನ ಮಾಲಿಕ ವಿಘ್ನೇಶ್ ನಾಯ್ಕ ರವರು ಚರಣ್ ಕುಮಾರ್ ಮಡಿವಾಳರನ್ನು ತಮ್ಮ ಜೀಮ್ ನಲ್ಲಿ ಬರಮಾಡಿಕೊಂಡು ಪ್ರಯಾಣ ಸುಖಕರವಾಗಿರಲೆಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವಿಕಾಸ ವಾಹಿನಿ ಯೊಂದಿಗೆ ಮಾತನಾಡಿದ ಚರಣ ಕುಮಾರ್ ಮಡಿವಾಳ ರವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಲಿಸ್ಟ್ ಹಾಸ್ಪಿಟಲ್ ಇಲ್ಲ. ಎಲ್ಲಾ ತರದ ಪ್ರತಿಭಟನೆಗಳು ಈ ಹಿಂದೆ ನಡೆದರೂ ಕೂಡ ನಮ್ಮ್ ಜಿಲ್ಲೆಯಲ್ಲಿ ಹಾಸ್ಪಿಟಲ್ ಆಗಿಲ್ಲ. ಉತ್ತರ ಕನ್ನಡದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆಇಲ್ಲದೆ ವಂಚಿತವಾಗಿದೆ. ಈ ವಿಚಾರ ಹೊರ ರಾಜ್ಯಗಳಿಗೂ ತಿಳಿಸಬೇಕು.ಅದಕ್ಕಾಗಿ ಅವರಿಂದಲೂ ನಮಗೆ ಸಪೋರ್ಟ್ ಬೇಕು. ಏನ್ನುವ ಉದ್ದೇಶದಿಂದ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡು ಶುರು ಮಾಡಿದ್ದೇನೆ.

ಬೆಂಗಳೂರಿಂದ ಶುರು ಮಾಡಿದ ನನ್ನ ಬೈಕ್ ರ್ಯಾಲಿ ಉತ್ತರ ಕನ್ನಡ ಬಂದು ಉತ್ತರ ಕನ್ನಡದಿಂದ ಶಿರಸಿ-ಸಿದ್ದಾಪುರ – ಕುಮಟಾದಿಂದ ಅಂಕೋಲಕ್ಕೆ ಬಂದಿದ್ದು ಇಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಿ ಮಹಾರಾಷ್ಟ್ರದಿಂದ ಮಧ್ಯಪ್ರದೇಶದ ಮೂಲಕ ಕುಂಭ ಮೇಳಕ್ಕೆ ಹೋಗಿ ಅಲ್ಲಿ ಕೊನೆಯದಾಗಿ ಹಾಸ್ಪಿಟಲ್ ನ ಕುರಿತು ನಾನು ತೆಗೆದುಕೊಂಡು ಹೋಗಿರುವ ಬ್ಯಾನರನ್ನು ಪ್ರದರ್ಶನ ಮಾಡಿ ನಮ್ಮ ಜಿಲ್ಲೆಗೆ ಹಾಸ್ಪಿಟಲ್ ಅವಶ್ಯಕತೆ ಕುರಿತು ಹೇಳುವುದೇ ನನ್ನ ಬೈಕ್ ರ್ಯಾಲಿಯ ಉದ್ದೇಶವಾಗಿದೆ ಎಂದರು.

ಇದೇ ವೇಳೆಯಲ್ಲಿ ಕ್ಲಬ್ ವಿ ಪಿಟ್ನೆಸ್ ನ ಮಾಲೀಕರು ವಿಘ್ನೇಶ್ ನಾಯ್ಕ ರವರು ಮಾತನಾಡಿ ಚರಣ ಮಡಿವಾಳರವರ ಉದ್ದೇಶ ಒಳ್ಳೆಯದಾಗಿದೆ. ಯಾಕೆಂದರೆ ನಮ್ಮ ಜಿಲ್ಲೆಗೆ ಅಗತ್ಯವಾಗಿ ಎಮರ್ಜೆನ್ಸಿ ಹಾಸ್ಪಿಟಲ್ ಬೇಕು. ನಾವು ಬಹಳ ಗಂಭೀರ ಚಿಕಿತ್ಸೆಗೆ ಗೋವಾ ಮಂಗಳೂರು, ಮಣಿಪಾಲ ಹಾಸ್ಪಿಟಲ್ ಗೆ ಹೋಗುವಷ್ಟರಲ್ಲಿ ರೋಗಿಗೆ ತೀವ್ರ ಸಮಸ್ಯೆ ಉಂಟಾಗುತ್ತದೆ. ತುರ್ತು ಚಿಕಿತ್ಸೆಗೆ ನಿಗದಿತ ಅವಧಿಯಲ್ಲಿ ತಲುಪಲಾಗದೆ ಸಾವು ನೋವು ಸಂಭವಿಸುತ್ತದೆ.. ಆದಕಾರಣ ನಮ್ಮ ಜಿಲ್ಲೆಯಲ್ಲಿ ಎಲ್ಲಾ ಸೌಲಭ್ಯವಿರುವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಅಗತ್ಯತೆ ಇದೆ.. ಇದರಿಂದ ಎಲ್ಲರಿಗೂ ತುರ್ತಾಗಿ ಬೇಗನೆ ಕಡಿಮೆ ಅವಧಿಯಲ್ಲಿ ಚಿಕಿತ್ಸೆ ಸಿಗುತ್ತದೆ. ಚರಣ ಮಡಿವಾಳ ರವರ ಸಮಾಜ ಸೇವೆಗೆ ಅಭಿನಂದಿಸಿದ್ದರು. ಈ ಸಂದರ್ಭದಲ್ಲಿ ಕ್ಲಬ್ ವಿಟ್ನೆಸ್ ನಲ್ಲಿ ತರಬೇತಿ ಪಡೆಯುತ್ತಿರುವ ಯುವಕರು ಹಾಜರಿದ್ದು ಚರಣ್ ಮಡಿವಾಳ ರವರಿಗೆ ಶುಭಕೋರಿದರು.

ವರದಿ : ಕಿರಣ ಚಂದ್ರಹಾಸ ಗಾಂವಕರ

Share This Article
Leave a Comment