ಮದುವೆ ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲಗಳನ್ನು ಪುಜಗೇರಿ ಹಳ್ಳದ ಅಕ್ಕಪಕ್ಕ ಸುರಿದು ಬೆಂಕಿ ಹಾಕುತ್ತಿರುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಳ….

News Desk
2 Min Read

ಅಂಕೋಲಾ : ತಾಲೂಕಿನ ಪೂಜಗೇರಿ ಹಳ್ಳದ ಕಿರು ಸೇತುವೆ ಪಕ್ಕ ಪೂರ್ವ ದಿಕ್ಕಿನಲ್ಲಿ ಸರಿಸುಮಾರು ನೂರು ಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಹಳ್ಳಕ್ಕೆ ಲಗತ್ತಾಗಿ ನಿರ್ಮಿಸಲಾಗಿದೆ.. ಸದರಿ ರಸ್ತೆಯ ಲಾಭವನ್ನು ಪಡೆದು ಸಂಜೆಯಾಗುತ್ತಿದ್ದಂತೆ ಟಾಟಾ ಏಸ್ ರಿಕ್ಷಾದ ಮೇಲೆ ಗಾಡಿ ತುಂಬಾ ಮದುವೆ, ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು, ಇನ್ನಿತರ ತ್ಯಾಜ್ಯ ವಸ್ತುಗಳನ್ನು ತಂದು ಹಳ್ಳದ ಪಕ್ಕ ಸುರಿದು ಬೆಂಕಿ ಹಾಕುವ ಕಿಡಿಗೇಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ..

ರಿಯಲ್ ಎಸ್ಟೇಟ್ ಮಾಫಿಯಾ ಗಳಿಂದ ಕೃಷಿ ಭೂಮಿ ಸರ್ವನಾಶ : ಪೂಜಗೇರಿ ಹಳ್ಳಕ್ಕೂ ಸಂಚಕಾರ.

ಕೃಷಿ ಭೂಮಿಗೆ ಹೆಸರಾಗಿದ್ದ ಪೂಜಗೇರಿ – ಹಳ್ಳದ ಪಕ್ಕ ತೆಂಕಣಕೇರಿ ಗ್ರಾಮಕ್ಕೆ ಸೇರಿರುವ ನೂರಾರು ಎಕರೆ ಭೂಮಿಗಳು ರಿಯಲ್ ಎಸ್ಟೇಟ್ ಮಾಫಿಯಾ ಗಳು ಖರೀದಿ ಮಾಡಿಕೊಂಡು. ಸದರಿ ಕೃಷಿ ಭೂಮಿಯನ್ನು ಭೂ ಪರಿವರ್ತನೆಯನ್ನು ಮಾಡಿಕೊಂಡು ಜನವಸತಿ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ.

ಈ ಕಾರಣದಿಂದಾಗಿ ಕೃಷಿ ಭೂಮಿಗಳು ಈ ಪ್ರದೇಶದಲ್ಲಿ ಸರ್ವನಾಶವಾಗಿದೆ. ಖಾಸಗಿ ಅವರ ಜಮೀನಿಗೆ ಹೋಗಲು ಹಳ್ಳದ ಕಿರು ಸೇತುವೆಯ. ಮುಖ್ಯ ರಸ್ತೆಯಿಂದ ಲಂಬಕೋನಾಕೃತಿಯಲ್ಲಿ ಪೂರ್ವ ದಿಕ್ಕಿಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು ಸದರಿ ಖಾಸಗಿಯವರ ಅಭಿವೃದ್ಧಿಗೋಸ್ಕರ ರಸ್ತೆಯನ್ನು ಸರ್ಕಾರದ ಅನುದಾನವನ್ನು ಬಳಸಿ ಹಳ್ಳದ ಪಕ್ಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೇ ಎಂಬ ಅನುಮಾನ ಕಾಡಿದೆ.

ಸದರ ಹಳ್ಳಕ್ಕೆ ಲಗತ್ತಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರತಿನಿತ್ಯ ಮೋಜು ಮಸ್ತಿ ಮಾಡಲು ಬರುವವರು ಸಂಖ್ಯೆಯ ಜೊತೆ ಬಿಯರ್ ಬಾಟಲ್ ಗಳನ್ನು ತಂದು ಹಳ್ಳದ ಅಕ್ಕ ಪಕ್ಕ. ಬಿಸಾಡಿ ಹೋಗುವರ ಸಂಖ್ಯೆಯು ಅಧಿಕವಾಗಿದೆ ಜೊತೆಗೆ ಸಭೆ ಸಮಾರಂಭಕ್ಕೆ ಬಳಸಲಾಗಿರುವ ಪ್ಲಾಸ್ಟಿಕ್ ಬಾಟಲುಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ವಾಹನದ ಮೂಲಕ ತಂದು ಹಳ್ಳಕ್ಕೆ ಬಿಸಾಡುತ್ತಿರುವ ಕಿಡಿಗೇಡಿಗಳಿಂದ ಪರಿಸರ ನಾಶಕ್ಕೆ ಇನ್ನಷ್ಟು ಕಾರಣವಾಗಿದೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಸಭೆ-ಸಮಾರಂಭದ ಪ್ಲಾಸ್ಟಿಕ್ ಬಾಟಲಗಳನ್ನು. ಇನ್ನಿತರ ತ್ಯಾಜ್ಯ ವಸ್ತುಗಳನ್ನು ಗಳನ್ನು ಹಳ್ಳಕ್ಕೆ ಸುರಿಯುತ್ತಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿಕಾಸ ವಾಹಿನಿಯು ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ.

Share This Article
Leave a Comment